ಹುಕ್ಕೇರಿ: ಮೂವರು ಸೈನಿಕ ಮಕ್ಕಳ ತಂದೆಗೆ, ವೃದ್ಯಾಪ್ಯ ವೇತನ ಕೊಡಲು ಮುಂದಾದ ಉಪ ತಹಶೀಲ್ದಾರ ಕಲ್ಲೋಳಿ..!
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ತಹಶೀಲ್ದಾರ್ ಕಚೇರಿಯ ಕರ್ಮಕಾಂಡದ ಸ್ಟೋರಿ ಇದು…
ಇಂದಿರಾಗಾಂಧಿ ರಾಷ್ಟ್ರೀಯ ವ್ರದ್ಯಾಪ್ ವೇತನ ನೀಡಿದ ಉಪತಹಶೀಲ್ದಾರ ಕಲ್ಲೋಳ್ಳಿ, ತಾಲೂಕಿನ ಸಮೀಪದ ಮದಿಹಳ್ಳಿ ಗ್ರಾಮದ ಸುಲ್ತಾನಸಾಬ ಸನದಿ ಎಂಬ ವ್ಯಕ್ತಿಗೆ ವ್ರದ್ಯಾಪ್ ವೇತನ ನೀಡುವಲ್ಲಿ ಉಪತಹಶೀಲ್ದಾರ ಪ್ರಕಾಶ ಕಲ್ಲೋಳ್ಳಿ ಇವರು ಸೂಕ್ತ ದಾಖಲೆ ಆದಾಯ ಅವನ ಕೆಲಸವೇನು ಅವನಿಗೆ ಬೇರೆ ರೀತಿಯ ಯಾವುದಾದರೂ ಮಾಸಿಕ ಹಣ ಪಡೆಯುತ್ತಿದ್ದಾನೆಯೊ ಇಲ್ಲವೋ ಎಂಬುದನ್ನ ಮಾಹಿತಿ ಪಡೆಯಬೇಕಿತ್ತು.
ಆದರೆ ಉಪ ತಹಶಿಲ್ದಾರರು ದಾಖಲೆ ಹಾಗೂ ಸ್ಥಳೀಯ ಮಾಹಿತಿ ಪಡೆಯಬೇಕಿತ್ತು.ಸುಲ್ತಾನಸಾಬ ಸನದಿ ಇವರ ಆದಾಯ ಕಡಿಮೆ ಮಾಡಿ ಕೊಟ್ಟವರು ಯಾರು ಬಿಪಿಎಲ್ ಕಾರ್ಡ ಮಾಡಿದವರ್ಯಾರು ಎಂಬುದನ್ನ ಪರೀಶಿಲಿಸಬೇಕಿದೆ.
ಸುಲ್ತಾನಸಾಬ ಸನದಿ ಎಂಬ ವ್ಯಕ್ತಿಗೆ ನಾಲ್ಕು ಜನ ಮಕ್ಕಳಿದ್ದು ಮೂವರು ಮಕ್ಕಳು ಮಿಲಿಟರಿ (ARMY) ನೌಕರಿ ಮಾಡುತ್ತಿದ್ದು ಒರ್ವ ಮಗ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದು ಜೊತೆಗೆ ನಾಲ್ಕು ಎಕರೆ ಜಮೀನನ್ನು ಕೂಡ ಹೊಂದಿದ್ದಿ ಮೇಲೆ ಈ ಸುಲ್ತಾನಸಾಬ ಸನದಿ ಗೋಕಾಕ ಪಾಲ್ಸನ ಮಿಲ್ಲನಲ್ಲಿ ಕೆಲಸ ಮಾಡುತ್ತಿದ್ದ ಹಾಗೇ ಈಗಾಗಲೇ ಅಲ್ಲಿಯೂ ಕೂಡಾ ಪೆನ್ಸಿನ್ ಪಡೆಯುತ್ತಿದ್ದ ಬಗ್ಗೆ ಮಾಹಿತಿ ಇದೆ.
ಗೋಕಾಕ ಮಿಲ್ಲ್ ನ ಪೆನ್ಸಿನ್….
ಆದರೆ ಈ ಇಂದಿರಾಗಾಂಧಿ ರಾಷ್ಟ್ರೀಯ ವ್ರದ್ಯಾಪ ವೇತನ ಹಳ್ಳ ಹಿಡಿದು ಹೋಗಿದೆ ಇನ್ನೂ ತಾಲೂಕಿನಲ್ಲಿ ಇಂತಹ ಎಷ್ಟೋ ಪಿಂಚಣಿ ನಿಧಿಗಳು ಶ್ರೀಮಂತರ ಪಾಲಾಗಿವೆ ಎಂಬ ಬಗ್ಗೆ ಮಾಹಿತಿ ಪಡೆದು ಮಾನದಂಡಗಳ ಜೊತೆಗೆ ಅಧಿಕಾರಿಗಳ ಮೇಲೆ ಕೂಡಾ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ಜರ್ನಲಿಸ್ಟ: ಚಂದ್ರು ತಳವಾರ