ಕಬ್ಬುರ: ಬುಕ್ ಪೆನ್ನು ಕೊಡುವ ಕೈಗೆ, ಗುದ್ಲಿ ಸನಿಕೆ ಕೊಟ್ಟು ವಿದ್ಯಾರ್ಥಿಗಳನ್ನು ಮಣ್ಣು ಅಗಿಯಲು ಹಚ್ಚಿದ ಬೆಲ್ಲದ ಶಾಲೆ ಶಿಕ್ಷಕರು..!
ಬೆಳಗಾವಿ ಜಿಲ್ಲೆಯ ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿಯ ತಾಲೂಕಿನ ಕಬ್ಬೂರ ಪಟ್ಟಣದಲ್ಲಿ ಬೆಲ್ಲದ ಶಾಲೆಯ ಹೈಸ್ಕೂಲ್ ವಿದ್ಯಾರ್ಥಿಗಳನ್ನು ಅಲ್ಲಿನ ಶಿಕ್ಷಕರು ಜೆಸಿಬಿ ಜೊತೆಗೆ ಕೆಲಸ ಮಾಡಲು ದೂಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಇತ್ತೀಚೆಗಷ್ಟೇ ಮಕ್ಕಳ ಕೈಯಿಂದ ಶೌಚಾಲಯ ಸ್ವಚ್ಚ ಮಾಡಿಸಿದ ಪ್ರಕರಣ ರಾಜ್ಯದ್ಯಂತ ಸುದ್ದಿ ಆಗಿತ್ತು. ಇಂತಹ ಪ್ರಕರಣಗಳು ಮಾಸುವ ಮುನ್ನವೇ, ಕಬ್ಬೂರ ಪಟ್ಟಣದಲ್ಲಿ ಸರಕಾರಿ ಅನುದಾನಿತ ಶಾಲೆಯಲ್ಲಿ ಶಿಕ್ಷಕರು ಮುಂದೆ ನಿಂತು ಜೆಸಿಬಿ ಜೊತೆ ಕೆಲಸ ಮಾಡಲು ಅಂದ್ರೆ ಜೆಸಿಬಿ ಅಗೇದ ಮಣ್ಣನ್ನು ಎಳೆಯಲು ಸುಮಾರು ಎಂಟರಿಂದ ಹತ್ತು ಮಕ್ಕಳ ಕೈಗೆ ಗುದ್ಲಿ ಸನಿಕಿ ಕೊಟ್ಟು ಕೆಲಸ ಮಾಡಿಸುತ್ತಿದ್ದರು. ಸರ್ಕಾರದ ಆದೇಶ ಇದೆ ಮಕ್ಕಳನ್ನು ಯಾಕೆ ಕೆಲಸ ಮಾಡುತ್ತಿದ್ದೀರಿ ಎಂಬ ಎಂಬ ಪ್ರಶ್ನೆಗೆ ಅಲ್ಲಿನ ಶಿಕ್ಷಕರು ಪಿ.ಇ ಪಿರಿಡ ಇದ್ದ ಕಾರಣ ಕೆಲಸ ಮಾಡಲ ಎಂದು ಸಮಜಾಯಿಸಿ ಮಾತನಾಡುತ್ತಾರೆ.
ಅಂದ್ರೆ ದೈಹಿಕ ಶಿಕ್ಷಣ ಮಕ್ಕಳಿಗೆ ಕೊಡುವಲ್ಲಿ ಬೆಲ್ಲದ ಶಾಲೆ ಶಿಕ್ಷಕರು ಕೊಡುವುದಿಲ್ಲವೋ…? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕಾಡತೊಡಗಿದೆ.
ತದನಂತರ ವಿಡಿಯೋ ಆಧಾರಿತ ಮಾಹಿತಿಗಳೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಖುದ್ದಾಗಿ ಅವರನ್ನು ಸಂಪರ್ಕಿಸಿ ಮಾಹಿತಿ ಪ್ರಶಿಕ್ಷಣಾಧಿಕಾರಿಗಳು ತಕ್ಷಣ ಎಚ್ಚೆತ್ತು ಬೆಲ್ಲದ ಶಾಲೆಯ ಮುಖ್ಯೊಪಾದ್ಯಾರ ಮೇಲೆ ನೇರವಾಗಿ ಕರೆ ಮಾಡಿ ಇದು ನಿಮ್ಮದು ತಪ್ಪು ಎಂದು ಮನವರಿಕೆ ಮಾಡಿ ಕೊಟ್ಟಿರುತ್ತಾರೆ.ಆದರೆ ಈ ಕ್ರತ್ಯ ಪಾಲಕರಲ್ಲಿ ಗೊಂದಲಮಯ ಉಂಟು ಮಾಡಿದೆ ನಮ್ಮ ಮಕ್ಕಳು ಮನೆಯಲ್ಲಿ ಯಾವೂದೇ ಕೆಲಸ ಮಾಡಲ್ಲ ಆದರೆ ಶಿಕ್ಷಕರು ಈ ರೀತಿ ಶಿಕ್ಷಣ ನೆಪದಲ್ಲಿ ಸನಿಕೆ ಗುದ್ಲಿ ಕೊಟ್ಟು ಮಣ್ಣು ಅಗಿಯುವ ಕೆಲಸ ಮಾಡಿಸಿದ್ದಾರೆ, ಆದರೆ ಇದು ಸಮಂಜಸವಲ್ಲ ಇಂತ ಶಾಲೆ ಹಾಗೂ ಶಿಕ್ಷಕರ ಮೇಲೆ ಕಾನೂನಿನ ಸೂಕ್ತ ಕ್ರಮ ಕೈಗೊಂಡು ಜಿಲ್ಲಾಡಳಿತ ಮಾದರಿಯಾಗಬೇಕೆಂದು ಟಿವಿ3 ಕನ್ನಡ ವಾಹಿನಿಯ ಆಶಯವಾಗಿದೆ.
ಜರ್ನಲಿಸ್ಟ್: ಚಂದ್ರು ತಳವಾರ


