ರಾಯಬಾಗ; ಉಂಡು ಹೋದ, ಕೊಂಡು ಹೋದ ಶಿಕ್ಷಕ ಬಕ್ಷಕನಾದದ್ದು ಹೇಗೆ.? ಅರೆ ಇದೇನಪ್ಪ ಸ್ಟೋರಿ ಎನ್ನುತ್ತೀರಾ.?
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಪನಾಳ ಗ್ರಾಮದ ಬಿಲಕಾರ ತೋಟದ ಶಾಲೆಯಲ್ಲಿ, ಮುಖ್ಯ ಶಿಕ್ಷಕನೊರರ್ವ ಸರಕಾರದ ಕ್ಷೀರ ಭಾಗ್ಯ, ಅಕ್ಷರ ದಾಸೋಹ ಯೋಜನೆಗೆ ಕಣ್ಣು ಹಾಕಿ ಸಿಕ್ಕಿಬಿದ್ದಿದ್ದಾನೆ.
ಈ ಶಿಕ್ಷಕ ಸರಿಯಾಗಿ ಮಕ್ಕಳಿಗೆ ಪಾಠ ಮಾಡದೆ,ಮಕ್ಕಳಿಗೆ ಕುಡಿಯೋಕೆ ಹಾಲು ಕೊಡದೆ, ಸರ್ಕಾರದ ಏನೆಲ್ಲಾ ನಿಯಮಗಳಿವೆ ಅವುಗಳೆಲ್ಲವನ್ನು ಗಾಳಿಗೆ ತೂರಿ ಹಾಲಿನ ಪಾಕೆಟುಗಳನ್ನು ಮಾರಾಟ ಮಾಡಿ, ಮೂರು ಕಾಶಿಗಾಗಿ ತನ್ನ ಮಾನ ಹರಾಜು ಹಾಕಿ ಕೊಂಡಿದ್ದಾನೆ.
ಸ್ಥಳೀಯರ ಮಾಹಿತಿ ಮೇರೆಗೆ ಟಿವಿ3 ಮಾಧ್ಯಮ ತಂಡ ಖುದ್ದಾಗಿ ಶಾಲೆಗೆ ಭೇಟಿ ಕೊಟ್ಟು ವಿಚಾರಿಸಿದಾಗ ಈ ತಿಗಡಿ ಮಾಸ್ತರ ತನ್ನ ತಪ್ಪನ್ನು ಒಪ್ಪಿಕೊಂಡು, ಇನ್ನೊಂದು ಸಾರಿ ಈ ತರಹ ಮಾಡಲಾರೆ ಎಂದು ಅಂಗಲಾಚಿ ಬೇಡಿದ್ದಾನೆ.
ಅಷ್ಟೇ ಅಲ್ಲದೆ ತನ್ನ ತಪ್ಪನ್ನು ಒಪ್ಪಿಕೊಂಡ ಇತ ಬಚವಾಗಲು ಬೇರೆ ದಾರಿ ಇಲ್ಲದೆ, ಹಾಲಿನ ಪಾಕೆಟ್ಗಳನ್ನು ಮಾರಿ ಟೇಬಲ್, ವೈರ್ ತಂದಿದ್ದೇನೆ. ಎಂದು ನಾನಾ ತರಹದ ಉಡಾಫೆ ಉತ್ತರಗಳನ್ನು ಕೊಟ್ಟಿರುತ್ತಾನೆ. ಈತ ಮುಖ್ಯ ಶಿಕ್ಷಕನಾಗಿ, ಶಾಲೆಯನ್ನು ಅಭಿವೃದ್ಧಿಪಡಿಸುವಲ್ಲಿ ಸಾಕಷ್ಟು ಶ್ರಮಿಸಬೇಕಾಗಿತ್ತು. ಆದರೆ ಈತ ತನ್ನ ಶಾಲಾ ಅವಧಿಯಲ್ಲಿ ತನ್ನ ವೈಯಕ್ತಿಕ ವ್ಯವಹಾರಗಳಿಗೆ ಅಂದರೆ ಫೋಟೋಗ್ರಾಫಿ ಕೂಡ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ.
ಈತನ ಚಟುವಟಿಕೆಗಳು ಕ್ಷೇತ್ರದ ಶಿಕ್ಷಣಾಧಿಕಾರಿಗಳಿಗೆ, ಗೊತ್ತಿದ್ದರೂ ಈ ಮುಖ್ಯ ಶಿಕ್ಷಕನ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಯಾಕೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿಕ್ಷಣಾಧಿಕಾರಿಗಳೆ ಇನ್ನು ಮುಂದಾದರು ಎಚ್ಚೆತ್ತು ಈ ಮುಖ್ಯ ಶಿಕ್ಷಕನಿಗೆ ಸಾತ್ ಕೊಡೋದನ್ನ ನಿಲ್ಲಿಸಿ ಇತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಇಲ್ಲವಾದರೆ ಮುಂದಿನ ದಿನಮಾನಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಉಗ್ರವಾದ ಹೋರಾಟ ಮಾಡಲಾಗುವದು ಎಂದು ಅಲ್ಲಿನ ಸ್ಥಳೀಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಹೆಚ್ಚಿನ ಮಾಹಿತಿ ಟಿವಿ3 ಕನ್ನಡ ವಾಹಿನಿಗೆ, ಲಭ್ಯವಿದ್ದು ಅತಿ ಶೀಘ್ರದಲ್ಲಿ ಸುದ್ದಿ ಪ್ರಸಾರ ಮಾಡಲಾಗುವುದು ಮುಂದಿನ ಭಾಗದಲ್ಲಿ ನಿರೀಕ್ಷಿಸಿ.!!
ವರದಿ: ಜರ್ನಲಿಸ್ಟ್ ಚಂದ್ರು ತಳವಾರ