ಮಾಜಿ ಎಮ್ ಎಲ್ ಎ ವೀರಕುಮಾರ್ ಪಾಟೀಲನ ಸುಪುತ್ರ ಪಂಕಜ ಪಾಟೀಲನಿಂದ ದಲಿತರ ಮೇಲೆ ಹಲ್ಲೆ
ನಿಪ್ಪಾಣಿಯಲ್ಲಿ:-ಹಲವೂ ದಿನಗಳಿಂದ ದಲಿತರ ಮೇಲೆ ದಬ್ಬಾಳಿಕೆ ನಡೆಸಿದವರ ವಿರುದ್ದ ಕ್ರಮ ಇಲ್ಲವೇ ಹಾಗಾದರೆ ದಲಿತ ವರ್ಗದವರು ಬದುಕಬೇಕಾ ಅಥವಾ ಇಂತವರ ಗೂಂಢಾಗಿರಿಗೆ ಹೆದರಿ ಗ್ರಾಮ ಬಿಟ್ಟು ಬೇರೆ ಕಡೆಗೆ ಹೋಗಬೇಕಾ ಎಂಬ ವಿಷಯ ಚರ್ಚೆಗೆ ಗ್ರಾಸವಾಗಿದೆ.
ಒಂದು ರೀತಿಯಲ್ಲಿ ನಿಪ್ಪಾಣಿ ವ್ಯಾಪ್ತಿಯ ಕುಗನೊಳ್ಳಿ ಗ್ರಾಮದಲ್ಲಿ ಅಂದಾ ಕಾನುನು ಎಂಬಂತೆ ಬದುಕಬೇಕಾಗಿದೆ.
ಸುಮಾರು ಬಾರಿ ಪಂಕಜ ಪಾಟೀಲ ದಲಿತರ ಹಲ್ಲೆ ಮಾಡುತ್ತ ಬಂದಿರುತ್ತಾನೆ ಆದರೆ ಯಾವ ಸೆಕ್ಷನ ಗೂ ಹೆದರದ ಇವನಿಗೆ ಪೋಲಿಸರ ಸಾಥ ಎಷ್ಟಿರಬಹುದು ಎಂದು ಊಹಿಸಲು ಸಾಧ್ಯವಾಗದು.
ಇಂತಹ ಪುಡಿ ರೌಡಿ ಗುಂಡಾಗಳ ಮೇಲೆ ಪ್ರಕರಣ ದಾಖಲಿಸಿ ಗಡಿಪಾರು ಮಾಡಿ ಗ್ರಾಮದಲ್ಲಿ ಶಾಂತಿ ವಾತಾವರಣ ಮೂಡಿಸಬೇಕಿದ್ದ ಪೋಲಿಸರು ಮೌನವಿರುವದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ.
ರಾಜಕೀಯ ಪುಡಾರಿ ತನ್ನ ಗುಂಡಾಗಿರಿಯನ್ನ ದಲಿತ ಸಮಾಜದವರ ಮೇಲೆ ಹಾಗೂ ದಲಿತರ ಮೇಲೆ ಹಲ್ಲೆ ಮಾಡಿ ನಾನೇ ಕಿಂಗ್ ಎನ್ನುವ ಬಿರುದು ಪಡೆಯಲು ಹರಸಾಹಸ ಮಾಡುತ್ತಿದ್ದಾನೆ.
ಆದರೆ ಇಂತಹ ಗೂಂಡಗಳಿಗೂ ಕೂಡಾ ಕಾನೂನಿನ ಬಗ್ಗೆ ಅರಿವಿಲ್ಲ ಅಲ್ಲಲ್ಲ ಕಾನೂನಿನ ತಕ್ಕಡಿಯನ್ನೆ ಅವನ ಮನೆಯಲ್ಲಿಟ್ಟುಕೊಂಡ ಹಾಗೆ ಕಾಣಿಸುತ್ತಿದೆ.
ಆತ ಗಲಾಟೆಗೆ ಬೇರೆ ಗೂಂಡಾಗಳನ್ನ ಕರೆಯಿಸಿ ದಲಿತ ವರ್ಗದ ಜನರ ಮೆಲೆ ಹಲ್ಲೆ ಮಾಡಿಸುತ್ತಾನೆ.
ಹಾಗಾದರೆ ಇದಕ್ಕೆ ಬ್ರೆಕ್ ಯಾವಾಗ ಜಿಲ್ಲಾ ಪೋಲಿಸರು ಈ ಗೂಂಡಾ ವರ್ತನೆ ತೋರಿದ ಪಂಕಜ ಪಾಟೀಲನ ಮೇಲೆ ಯಾವ ರೀತಿ ಕ್ರಮ ಕೈಗೊಂಡು ಚೆಕ್ ಮೆಟ್ ನೀಡುತ್ತಾರೆಂದು ಅಲ್ಲಿನ ಜನರ ಆಶಯವಾಗಿದೆ.ವರದಿ:-ಚಂದ್ರು ತಳವಾರ


