ನಿಪಾನಾಳ; ಸಂಬಳದ ಜೊತೆ ಗಿಂಬಳ, ಮಲ್ಲು ಗುಳೆದಾರನಿಗೆ ಏನ ಕೊಟ್ರು ಸಾಕಾಗ್ತಿಲ್ಲ..! ಭ್ರಷ್ಟಾಚಾರದಲ್ಲಿ ಸಿಕ್ಕು, ಗ್ರಾಮಸ್ಥರಿಂದ ಛೀಮಾರಿ ಹಾಕಿಸಿಕೊಂಡ ಲಂಚಬಾಕ ಪಿಡಿಒ..!
ಹೌದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಪನಾಳ ಗ್ರಾಮ ಪಂಚಾಯಿತಿಯಲ್ಲಿ ಸಾರ್ವಜನಿಕರಿಗೆ ಯಾವುದಾದರೂ ಕೆಲಸ ಆಗಬೇಕಾದರೆ ಪಿಡಿಒ ನ ಕೈ ಬೆಚ್ಚಗೆ ಮಾಡಲೇಬೇಕು ಅಂದ್ರೆ ಲಂಚ ಕೊಡಲೆಬೇಕು.
ಹಾಗೆ ನಿಪನಾಳ ಗ್ರಾಮ ಪಂಚಾಯಿತಿ ಭ್ರಷ್ಟ ಪಿಡಿಒ, ಒಂದು ಕೈ ಬರಹ ಉತಾರ ನೀಡಲು ೨೦೦೦ ಸಾವಿರ ರೂಪಾಯಿ ಮತ್ತು NOC ನಿಡಲು ಸಾಕಷ್ಟು ದುಡ್ಡು ಕೇಳಿ ಮುಂಗಡವಾಗಿ ೪೦೦ ರೂಪಾಯಿ ಹಣ ಪಡೆದು ಪೇಚಿಗೆ ಸಿಲುಕಿರುತ್ತಾನೆ. ಆದರೆ ನಾನು ಕ್ಷಮಾರ್ಪಣೆ ಮಾಡಿ ಮುಂಗಡವಾಗಿ ೪೦೦ ರೂಪಾಯಿ ಕೊಟ್ಟಿದ್ದೇನೆಂದು ಜ್ಯೋತಿಬಾ ಹುಬ್ಬಳ್ಳಿ ಎಂಬ ಸ್ಥಳಿಯ ಗ್ರಾಮಸ್ಥ ಟಿವಿ೩ ಸುದ್ದಿ ವಾಹಿನಿ ಮುಂದೆ ಲಂಚ ಕೋರ ಪಿಡಿಒ ನ ಬಗ್ಗೆ ಅಳಲು ತೊಡಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ ಮತ್ತೊಂದು, ಮಗದೊಂದು ಎಂಬಂತೆ, ಲಂಚಾವತಾರ ನೊಡಿ ಸ್ವಾಮಿ ಭೀಮಶಿ ಮರೆಪ್ಪಗೋಳ ಎಂಬುವವರಿಗು ಕೂಡಾ ಕೈಬರಹ (ಉತಾರ) ನೀಡಲಿಕ್ಕೆ ೨೫೦೦ ರುಪಾಯಿಗೆ ಬೇಡಿಕೆ ಇಟ್ಟು ೨೦೦೦ ಸಾವಿರ ರೂಪಾಯಿ ಹಣವನ್ನ ಲಂಚದ ರೂಪದಲ್ಲಿ ಪಡೆದು ನನಗೆ ಕೈಬರಹ ಉತಾರ ಕೊಟ್ಟಿದ್ದಾರೆ.
ಇಷ್ಟಕ್ಕೂ ಕೈಬರಹ ಉತಾರ ಕೊಡಲು ಪಿಡಿಒ ಒಂದು ದಿನ ಪೂರ್ತಿ ನನ್ನನ್ನು ಸತಾಯಿಸಿರುತ್ತಾನೆ.
ಎಂದು ನೇರವಾಗಿ ಟಿವಿ೩ ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದಾರೆ. ಪಂಚಾಯಿತಿ ಆಡಳಿತಕ್ಕೆ ಕಂಟಕವಾಗಿರುವ ಈ ಭ್ರಷ್ಟ, ನಿಪನಾಳ ಗ್ರಾಮ ಪಂಚಾಯಿತಿಗೆ ಬಂದು ತಿಂಗಳುಗಳು ಕಳೆದರು ಏನು ಕಿತ್ತು ಗುಡ್ಡೆ ಹಾಕಲಿಲ್ಲ.
ಇದುವರೆಗೆ ಇಂತಹ ಅಭಿವೃದ್ಧಿ ಅಧಿಕಾರಿಯನ್ನು ನಿಪನಾಳ ಗ್ರಾಮ ಪಂಚಾಯಿತಿಯಲ್ಲಿ ಯಾವೊಬ್ಬನನ್ನು ನೋಡಲಿಲ್ಲ. ಈತ ಬಂದಾಗಿನಿಂದಲೂ ಅಭಿವೃದ್ಧಿ ಕಾರ್ಯ ಒಂದನ್ನು ಮಾಡಲಿಲ್ಲ. ಬ್ರಷ್ಟಾಚಾರದಲ್ಲಿ ಮಾತ್ರ ಬಲು ಜೋರಾಗಿದ್ದಾನೆ. ಎಂದು ಅಲ್ಲಿನ ಸಿಬ್ಬಂದಿಗಳು, ಸದಸ್ಯರು ಕೂಡ ಪಿಡಿಒ ನ ಮೇಲೆ ಆರೋಪಿಸಿದ್ದಾರೆ.
ಆದ್ದರಿಂದ ಇಂತಹ ನೀಚ ನಾಲಾಯಕ ಭ್ರಷ್ಟ, ಅಧಿಕಾರಿ ವಿರುದ್ಧ ಸರಕಾರ ಮತ್ತು ಮೇಲಾಧಿಕಾರಿಗಳು, ಕಾನೂನಿನ ಸೇವಾ ನಿಯಮದಡಿಯಲ್ಲಿ ಸೂಕ್ತ ಕ್ರಮ ಜರುಗಿಸಬೇಕಿದೆ.
ಲಂಚವೇ ಇವನ ಹೊದಿಕೆಯಾಗಿದೆ, ಬಡ ರೈತರು, ಕೆಳಮಟ್ಟದಲ್ಲಿರುವ ಜನರಿಗೆ ಸುವ್ಯವಸ್ಥೆ ಆಡಳಿತ ನೀಡಬೇಕಾಗಿದ್ದ ಈ ಪಿಡಿಒ ಗುಳೇದಾರ ಮಲ್ಲಪ್ಪ, ನಿಪನಾಳ ಗ್ರಾಮದಲ್ಲಿ ಅಭಿವೃದ್ಧಿ ಮಾಡದೆ ಆಡಳಿತ ಹದಿಗೆಡಿಸಿ ಸರಕಾರದ, ಸೇವಾ ದಳದ ನಿಯಮಾವಳಿಗಳನ್ನು ಗಾಳಿಗೆ ತೂರಿದ್ದಾನೆ. ಇನ್ನೂ ಜಿಲ್ಲಾಡಳಿತ ಈತ ಲಂಚ ಪಡೆಯುವ ದ್ರಶ್ಯವನ್ನು ನೋಡಿ ಪಿಡಿಒ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೆಕಿದೆ. ಲಜ್ಜೆಗೆಟ್ಟ ಈ ಪಿಡಿಒ ಸಾರ್ವಜನಿಕರ ರಕ್ತ ಹಿಂಡಿ ಲಂಚ ಪಡೆಯುತ್ತಿದ್ದಾನೆ.
ಎಂದು ನಿಪನಾಳ ಗ್ರಾಮಸ್ಥರು ಈ ಬ್ರಷ್ಟ ಅಭಿವೃದ್ಧಿ ಅಧಿಕಾರಿಗೆ ಹಿಡಿ ಶಾಪ ಹಾಕಿದ್ದಾರೆ.
ಇಷ್ಟೆಲ್ಲಾ ಲಂಚ ಪಡೆಯುವ ದ್ರಶ್ಯಾವಳಿಗಳನ್ನ ನೋಡಿ ಲೊಕಾಯುಕ್ತ ಅಧಿಕಾರಿಗಳು ಕುಡ ಕ್ರಮ ಕೈಗೊಳ್ಳಬೇಕಿದೆ.
ಇಷ್ಟಕ್ಕೂ ವಿಪರ್ಯಾಸ ಎಂದರೆ ಅಲ್ಲಿನ ಸದಸ್ಯರ, ಎದುರೆ ಈ ಪಿಡಿಒ ತಪ್ಪೊಪ್ಪಿಕೊಂಡು ಬಿಡಿಗಾಸಿಗಾಗಿ ತನ್ನ ಮಾನ ಹರಾಜು ಹಾಕಿಕೊಂಡಿದ್ದಾನೆ.
ಈಗಾಗಲೇ ಸದಸ್ಯರುಗಳ ಕಾಲು ಬೀಳುತ್ತಾ,ಗುಡ್ಡಾ ಏರಿ, ಅಲ್ಲಿಯೂ ಕೂಡ ಅಂಗಲಾಚಿ ತನ್ನ ತಪ್ಪನ್ನು ಒಪ್ಪಿಕೊಂಡು, ಈತರ ಇನ್ನೊಂದು ಸಾರಿ ಮಾಡುವುದಿಲ್ಲ ಎಂದು ಹಣಿ ಹಚ್ಚಿ ಪಾದಸೇವೆ ಮಾಡಿ ಬಂದಿದ್ದಾನೆ.
ಈ ಮಲ್ಲಪ್ಪನ ಮತ್ತೊಂದು ಹೆಸರೆ ಲಂಚಪ್ಪ, ಈತನ ಕುರಿತು ಸಾಕಷ್ಟು ವಿಡಿಯೋ ಆಧಾರಿತ ದೃಶ್ಯಾವಳಿಗಳ ಮಾಹಿತಿ, ಟಿವಿ3 ಕನ್ನಡ ವಾಹಿನಿಗೆ ಲಭ್ಯವಿದ್ದು. ಮುಂದಿನ ಸಂಚಿಕೆಯಲ್ಲಿ ಎಳೆ ಎಳೆಯಾಗಿ ಬಿಚ್ಚಿಡಲಾಗುವುದು ಕಾಯ್ದು ನೋಡಿ.!!
ಜರ್ನಲಿಸ್ಟ್ ಚಂದ್ರು ತಳವಾರ


