ಚಿಕ್ಕೋಡಿ: ನಾಮಫಲಕ ತೆರವುಗೊಳಿಸದೆ, ನೀತಿ ಸಂಹಿತೆಯನ್ನು ಗಾಳಿಗೆ ತೂರಿದ ನಿರ್ಲಕ್ಷ್ಯ ಪಿಡಿಓ..!
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಮುಗಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕಮತೇನಟ್ಟಿ ಗ್ರಾಮದಲ್ಲಿ ಕಂಡು ಬಂದ ದೃಶ್ಯಾವಳಿ ಇದು.
ನೀತಿ ಸಂಹಿತೆ ಜಾರಿಯಾಗಿ ನಾಲ್ಕೈದು ದಿನ ಕಳೆದರು, ಬಿಜೆಪಿಯ ನರೇಂದ್ರ ಮೋದಿ ಬಾವ ಚಿತ್ರಗಳನ್ನು ಹೊಂದಿರುವ ಫಲಕಗಳನ್ನು ಇದುವರೆಗೆ ತೆರವುಗೊಳಿಸದೆ ಇರುವದು ಪಿಡಿಒ ಅಣ್ಣಪ್ಪ ಇಟನಾಳೆ ಅವರ ನಡೆ ಬಾರಿ ಕುತೂಹಲಕ್ಕೆ ಕಾರಣವಾಗಿದೆ. ಅಂದ್ರೆ ಇವ್ರು ಇದೇ ಕ್ಷೇತ್ರದವರಾಗಿರುವುದರಿಂದ ಬಿಜೆಪಿ ಪಕ್ಷಕ್ಕೆ ಬೆಂಬಲವಾಗಿ ನಿಂತ್ರಾ ಎಂಬ ಪ್ರಶ್ನೆಯು ಸಾರ್ವಜನಿಕರಿಗೆ ಕಾಡತೊಡಗಿದೆ.
ಲೊಕಸಭಾ ಚುನಾವಣಾ ಹಿನ್ನೆಲೆ ಈಗಾಗಲೇ ನೀತಿ ಸಂಹಿತೆ ಹಾಗೂ ಕಾನೂನು ಉಲ್ಲಂಘನೆ ಆಗಬಾರದೆಂದು ಸರಕಾರ ಚುನಾವಣೆ ಅಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಆದರೆ ಇಲ್ಲಿ ಕಾನೂನು ಉಲ್ಲಂಘನೆಯಾಗುತ್ತಿದ್ದರೂ ಅಧಿಕಾಗಳು ಕ್ಯಾರೆ ಎನ್ನುತ್ತಿಲ್ಲ.
ಹಾಗಾಗಿ ಇಲ್ಲಿಯ ಕ್ಷೇತ್ರದ ಜನರಿಗೆ ಗೊಂದಲಮಯವಾಗಿದೆ. ಬಹುಶಃ ಇಲ್ಲಿ ಎಮ್ ಪಿ ಚುನಾವಣಾ ನೀತಿ ಸಂಹಿತೆ ಅನ್ವಹಿಸುವದಿಲ್ಲವೆಂಬ ವಾತಾವರಣ ಸೃಷ್ಟಿಯಾಗಿದೆ.
ಹಾಗಾದರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸರಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿ ಪೆಚಿಗೆ ಸಿಲುಕಿದ್ರಾ..?
ವಾಟ್ಸ್ಯಾಪ ಪೆಸಬುಕ್ ಇನ್ಸ್ಟಾಗ್ರಾಂ ಹೀಗೆ ಅನೇಕ ಸಾಮಾಜಿಕ ಜಾಲತಾಣಗಳ ಮೇಲೆ ನೀಗಾ ಇಟ್ಟಿರುವ ಚುನಾವಣಾ ಇಲಾಖೆಗೆ ಇಷ್ಟೊಂದು ದೊಡ್ಡದಾದ ನರೇಂದ್ರ ಮೋದಿಜಿಯವರ ಚಿತ್ರ ಕಾಣಲಿಲ್ಲವೆ…?
ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಆದ್ದರಿಂದ ಚುನಾವಣಾ ಅಧಿಕಾರಿಗಳು ತಕ್ಷಣ ಎಚ್ಚೆತ್ತು, ತಪ್ಪಿತಸ್ಥ ಅಭಿವೃದ್ಧಿ ಅಧಿಕಾರಿ ಅಣ್ಣಪ್ಪ ಇಟನಾಳೆ ಮೇಲೆ ಸೂಕ್ತ ಕಾನೂನಿನ ಕ್ರಮ ಜರುಗಿಸಬೇಕು, ಎಂದು ಸಾರ್ವಜನಿಕರ ಒತ್ತಾಯವಾಗಿದೆ.
ಜರ್ನಲಿಸ್ಟ್: ಚಂದ್ರು ತಳವಾರ