ಹುಕ್ಕೇರಿ: ದುಸ್ಥಿತಿಯತ್ತ ಸಾಗಿದ ಶ್ರೀ ಎ.ಎಲ್.ಕೋಟಿ ಅನುದಾನಿತ ಶಾಲೆ
ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಬಡಕುಂದ್ರಿ ಶಾಲೆಯ ದುಸ್ಥಿತಿ! ಬಡಕುಂದ್ರಿ ಗ್ರಾಮದಲ್ಲಿ ಇರುವ ಶ್ರೀ ಎ ಎಲ್.ಕೋಟಿ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ಸ್ಟೋರಿ ಇದು.
ಸರಕಾರದಿಂದ ಅನುದಾನ ಪಡೆದ ಶಾಲೆ ಇದಾಗಿದ್ದು, ಶಾಲೆಯ ಸ್ಥಿತಿ ಗತಿ ಮಾತ್ರ ಚಿಂತಾಜನಕವಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳೆ ಈ ಶಾಲೆಗೆ ಒಂದು ಬಾರಿ ಬೇಟಿ ಕೊಡಿ ನಿಮಗೆ ಗೊತ್ತಾಗುತ್ತೆ.
ಶಾಲೆಯಲ್ಲಿ ಮೂಲಭೂತ ಸೌಕರ್ಯ ಇಲ್ಲ.
ಸ್ವಚ್ಛತೆ ಇಲ್ಲದ ಕೊಠಡಿಗಳು, ಗಬ್ಬೆದ್ದು ನಾರಿತ್ತಿರುವ ಶೌಚಾಲಯ ಅಬ್ಬಬ್ಬಾ…. ಮಕ್ಕಳಿಗೆ ಸ್ವಚ್ಛತೆ ಸುಸರ್ಜಿತ ವಾತಾವರಣ ಕಲ್ಪಿಸ ಬೇಕಿದ್ದ ಶಾಲಾಡಳಿತ ಮಂಡಳಿಗೆ ಇ ದುಸ್ಥಿತಿ ಕಾಣಿಸುತ್ತಿಲ್ಲವೋ? ಸರಕಾರದಿಂದ ಎಲ್ಲಾ ಅನುಕೂಲತೆ ಪಡೆದರು ಕೂಡಾ ಈ ಶಾಲೆಗೆ ಅನುಕೂಲ ಇಲ್ಲ ಎಂದು ಹೇಳುವ ಆಡಳಿತ ಮಂಡಳಿ.
ಇಲ್ಲಿನ ಶಿಕ್ಷಕರಿಗೆ ತಿಂಗಳಾದರೆ ಸಾಕು ಅವರ ಅಕೌಂಟ್ ಗೆ ಸರಕಾರದಿಂದ ಭತ್ಯೆ ಸಂದಾಯವಾಗಿರುತ್ತದೆ.
ಪಾಚಿ ಕಟ್ಟಿರುವ ಟ್ಯಾಂಕಿನಲ್ಲಿ ನೋಡಿದರೆ ಗಲೀಜೊ ಗಲೀಜು.
ಮಕ್ಕಳ ದುರ್ದೈವ ಏನೋ ಗೊತ್ತಿಲ್ಲ ಅದೆ ನೀರು ಕುಡಿಬೇಕು.
ಒಂದು ಶಾಲೆ ನಿರ್ವಹಣೆ ಎಂದರೆ ಸುಲಭದ ಮಾತಲ್ಲ.
ಹಳೆಯದಾದ ಕಟ್ಟಡ, ಯಾವಾಗ ಬೀಳುತ್ತೆ ಗೊತ್ತಿಲ್ಲ. ಆಟದ ಮೈದಾನ ಇಲ್ಲ. ಶಾಲಾ ಆವರಣದ ತುಂಬೆಲ್ಲ ಅವರಿಸಿದ ಕೊಳೆ ನೀರು, ಪೋಷಕರೆ ನಿಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿದ್ದೀರಿ ಮಕ್ಕಳ ಕಲಿಕೆ ಜೊತೆಗೆ ಆರೋಗ್ಯದ ಕಡೆಯು ಒಂಚೂರು ಗಮನ ಹರಿಸಿ.
ಶಾಲೆಯಲ್ಲಿ ಉತ್ತಮ ವಾತಾವರಣ ಇರಬೇಕು. ಸುಸರ್ಜಿತ ವಾತಾವರಣ ಶಾಲೆಯಲ್ಲಿ ಇಲ್ಲದೆ ಹೋದರೆ ಮಕ್ಕಳಿ ಗೆ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ. ಮಕ್ಕಳೆಂದರೆ ದೇವರಿಗೆ ಸಮಾನ ಶಿಕ್ಷಕರು ಮಕ್ಕಳ ಕಲಿಕೆ ಜೊತೆಗೆ ಅರೋಗ್ಯ, ಮಾನಸಿಕ ಸದೃಢತೆ ಮೆಲೆ ಗಮನ ಹರಿಸಬೇಕು.
ಕ್ಷೇತ್ರ ಶಿಕ್ಷಣಧಿಕಾರಿಗಳೆ ಶಾಲೆ ದೇಗುಲ ಇದ್ದಂತೆ, ಏನು ಮಾಡ್ತಾ ಇದ್ದೀರಿ… ನಿಮ್ಮ ಜವಾಬ್ದಾರಿ ಮರೆತಂತಿದೆ. ಬಡಕುಂದ್ರೀಯ ಈ ಅನುದಾನಿತ ಶಾಲೆಗೆ ಒಂದು ಬಾರಿಯಾದ್ರು ಬೇಟಿ ನೀಡಿದ್ದೀರಾ, ಇಲ್ಲವಾ..? ಶಾಲೆಯಲ್ಲಿ ಸ್ವಚ್ಛತೆ ಇಲ್ಲ. ವರದಿಯನ್ನು ಗಮನಿಸಿದ ಮೇಲಾದರೂ ಸರಕಾರ ಮತ್ತು ಮೇಲಾಧಿಕಾರಿಗಳು ಎಚೆತ್ತು, ಶಾಲಾ ಆಡಳಿತ ಮಂಡಳಿ ಮೆಲೆ ಸೂಕ್ತ ಕಾನೂನಿನ ಕ್ರಮಕ್ಕೆ ಮುಂದಾಗಬೇಕೆಂದು ವಿದ್ಯಾವಂತ, ಸಾರ್ವಜನಿಕರ ಆಶಯ ವಾಗಿದೆ.
ಮೇಲಧಿಕಾರಿಗಳೇ ಎಚ್ಚರ!
ಈ ದುಸ್ಥಿತಿಯ ಕುರಿತು ಸಂಬಂಧಪಟ್ಟ ಅಧಿಕಾರಿಗಳು, ಪೋಷಕರು, ಸ್ಥಳೀಯ ಪ್ರತಿನಿಧಿಗಳು ತಕ್ಷಣವೇ ಗಮನಹರಿಸಿ, ಶೀಘ್ರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಪೋಷಕರ ಆಕ್ರೋಶ ಸರ್ಕಾರದ ವಿರುದ್ಧ ತೀವ್ರ ಆಂದೋಲನದ ರೂಪ ಪಡೆಯುವ ಸಾಧ್ಯತೆಯಿದೆ.
ಜರ್ನಲಿಸ್ಟ್: ಚಂದ್ರು ತಳವಾರ