ಅಜಿತ್ ಕೆಳಗಡೆ ಅವರಿಗೆ ಹೆಮ್ಮೆಯ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ..!
ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಶಿವಾಪೂರ(ಹ)ಗ್ರಾಮದ ಯುವ ಮುಖಂಡ, ಸಮಾಜ ಸೇವಕ ಅಜಿತ್ ಕೆಳಗಡೆ ಇವರಿಗೆ ಸುವರ್ಣ ಕರ್ನಾಟಕ ಕಾರ್ಮಿಕರ ವೇದಿಕೆ ಹಾಗೂ ಎಂ ಎಂ ಭಾರತ ಟಿವಿ ಪ್ರಾಯೋಜತ್ವದಲ್ಲಿ ಕೊಡಲಾಗುವ ಹೆಮ್ಮೆಯ ಕರ್ನಾಟಕ ರತ್ನ ಪ್ರಶಸ್ತಿಯನ್ನು ಅವರಿಗೆ ಇತ್ತೀಚೆಗೆ ಬೆಂಗಳೂರದಲ್ಲಿ ಪ್ರಧಾನ ಮಾಡಲಾಯಿತು. ಪ್ರತಿ ವರ್ಷ ಸುವರ್ಣ ಕರ್ನಾಟಕ ಕಾರ್ಮಿಕರ ವೇದಿಕೆಯು ಸಮಾಜ ಸೇವೆಯಲ್ಲಿ ತೊಡಗಿ ಕೊಂಡವರನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ, ಅದರಂತೆ ಶಿವಾಪೂರ ಗ್ರಾಮದ ಅಜಿತ್ ಕೆಳಗಡೆ ಬಹಳ ದಿನಗಳಿಂದ ಸಮಾಜ ಸೇವೆಯಲ್ಲಿ ತೊಡಗಿದ ಅವರು ಸರಕಾರಿ ಮತ್ತು ವಿವಿದ ಸಂಘ ಸಂಸ್ಥೆಗಳಿಂದ ವಿಧವಾ ವೇತನ, ವಿದ್ಯಾರ್ಥಿ ವೇತನ ಹಾಗೂ ನೂರಾರು ವಯೋಮಾನದವರಿಗೆ ವೃದ್ಧಾಪ್ಯ ವೇತನ ಸೇರಿದಂತೆ, ಇನ್ನೂ ಅನೇಕ ಸಹಾಯಗಳನ್ನು ಮಾಡುತ್ತಾ ಸಮಾಜ ಸೇವೆಯಲ್ಲಿ ತೊಡಗಿರುವ ಇವರನ್ನು ಗುರುತಿಸಿ ಇತ್ತೀಚೆಗೆ ಭಾರತ ಸ್ಕೌಡ್ಸ ಅಂಡ್ ಗೈಡ್ಸ ಆಡಿಟೊರೀಯಮ ಮಹಾರಾಣಿ ಕಾಲೇಜ ಹತ್ತಿರ ಬೆಂಗಳೂರನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು ಎಂದು ಪ್ರಕಟಣೆಯಲ್ಲಿ ಆರ್ ಜಿ ಬಿ.ಪಾಟೀಲ ತಿಳಿಸಿದ್ದಾರೆ.
ಜರ್ನಲಿಸ್ಟ್:- ಚಂದ್ರು ತಳವಾರ