ಮೂಡಲಗಿ: ಇಸ್ಪೀಟ ಆಡಿದ್ದು ಗಂಧರ್ವ ಲಾಡ್ಜ್ ಅಡ್ಡಾದಲ್ಲಿ, ದೂರಿನಲ್ಲಿ ದಾಖಲಿಸಿದ್ದು ಎ ಪಿ ಎಮ್ ಸಿ ಗೊಡಾವನಲ್ಲಿ..!
ಯಡವಟ್ಟು ಮಾಡಿಕೊಂಡ ಮೂಡಲಗಿ ಪೋಲಿಸರು…
ಹೌದು ಬೆಳಗಾವಿ ಜಿಲ್ಲೆಯ ಮೂಡಲಗಿ ಪಠ್ಠಣದಲ್ಲಿ ಮೊನ್ನೆ ತಾನಷ್ಟೆ ಪೋಲಿಸರ ತಂಡವೊಂದು ಖಚಿತ ಮಾಹಿತಿ ಮೇರೆಗೆ ಠಾಣೆಯ ದಕ್ಷಿಣ ದಿಕ್ಕಿಗೆ ೨೦೦ ಮೀಟರ್ ದೂರದಲ್ಲಿರುವ ಗಂಧರ್ವ ಲಾಜನಲ್ಲಿ ಹಲವೂ ದಿನಗಳಿಂದ ಜೂಜಾಟದ ಬಗ್ಗೆ ಮಾಹಿತಿ ಪಡೆದ ಮೂಡಲಗಿ ಪೊಲಿಸರು ಮೊನ್ನೆ ದಾಳಿ ನಡೆಸಿ ಆರು ಜನರನ್ನ ಭಂದಿಸಿದ ಬಗ್ಗೆ ಮಾಹಿತಿ ಇತ್ತು. ಆದರೆ ಪ್ರಕರಣದ ದಿಕ್ಕನ್ನೆ ಬದಲಿಸಿದ ಮೂಡಲಗಿ ಪೋಲಿಸರು ಆ ಆರು ಜನರ ಮೇಲೆ ಕಾನೂನಿನ ಕ್ರಮ ಕೈಗೊಳ್ಳದೆ ಹಾಗೂ ಗಂಧರ್ವ ಲಾಜನಲ್ಲಿ ಜೂಜಾಟ ನಡೆಸುವ ಮಾಲೀಕನ ಮೇಲೂ ಪ್ರಕರಣ ದಾಖಲಿಸದೆ ಪ್ರಕರಣರವನ್ನ ಹಳ್ಳ ಹಿಡಿಸಿದ್ದಾರೆ.
ಇಸ್ಪೀಟು ಆಡಿದ್ದು ಗಂಧರ್ವ ಲಾಜನಲ್ಲಿ, ದಾಳಿ ಮಾಡಿದ್ದು ಗಂಧರ್ವ ಲಾಜನಲ್ಲಿ, ಆರು ಜನ ಸಿಕ್ಕಿದ್ದು ಗಂದರ್ವ ಲಾಜನಲ್ಲಿ, ಆದರೆ ಎಪ್ ಐ ಆರ್ ನಲ್ಲಿ ಬಿತ್ತು ಎಪಿ ಎಮ್ ಸಿ ಗೊಡಾವನ ನಲ್ಲಿ ಯಾರೋ ಜೂಜಾಟ ಆಡ್ತಿದ್ದಾರೆ ಎಂದು ಪೋಲಿಸರೇ ಸೊ ಮೋಟೊ ಪ್ರಕರಣ ದಾಖಲಿಸಿ ಆರು ಜನರನ್ನ ಹಾಗೂ ಗಂಧರ್ವ ಲಾಜ ಮಾಲೀಕನನ್ನ ಬಚಾವ್ ಮಾಡಿದ ಘಟನೆ ಮೂಡಲಗಿ ಪೋಲಿಸ್ ಠಾಣೆಯಲ್ಲಿ ನಡೆದಿದೆ. ಪೊಲಿಸರು ಹಿಗೂ ಮಾಡ್ತಾರೆ ಹಾಗು ಮಾಡ್ತಾರೆ, ಅವರು ಹೇಗೆ ಮಾಡಿದರು, ಮಾದ್ಯಮದ ಕ್ಯಾಮರಾ ಕಣ್ಣಿಗೆ ಸುಳ್ಳು ಹೇಳಲು ಸಾಧ್ಯವಿಲ್ಲ ನೊಡಿ. ನಮ್ಮ ಮಾದ್ಯಮದ ಸ್ಟಿಂಗ ಕ್ಯಾಮರಾದಲ್ಲಿ ಠಾಣಾಧಿಕಾರಿ ರಾಜಾರೊಷವಾಗಿ ಹೆಳ್ತಾರೆ ಸರ್ ತಪ್ಪಾಗಿದೆ ಕ್ಷಮಿಸಿ ಎಲ್ಲ ಕಡೆ ನೊಡಬೇಕಲ್ಲ ಸರ್… ಲಾಜ ಮಾಲಿಕನ ಮೆಲೆ ಪ್ರಕರಣ ದಾಖಲಿಸ್ತೆನೆ, ಮತ್ತೆ ಯಾವಾಗ ಇಸ್ಪಿಟ ಆಡ್ತಾರೆ ಆಗ ನೋಡಿ ಕೇಸ್ ಮಾಡ್ತಿವಿ ಅಂತ ಮಾದ್ಯಮದವರ ಮುಂದೆ ಸಮಜಾಯಿಸಿ ಕಳಿಸುವ ಕೆಲಸ ಮಾಡ್ತಿದ್ದಾರೆ. ಠಾಣಾಧಿಕಾರಿ ಹಾಗೂ ಎಸ್ ಬಿ ಡ್ಯೂಟಿ ಮಾಡುವ ಪೋಲಿಸಪ್ಪಗಳೆ, ಇಷ್ಟೆಲ್ಲಾ ಸಾಕ್ಷಾಧಾರಗಳಿದ್ದರು, ಪ್ರಕರಣದ ದಿಕ್ಕು ತಪ್ಪಿಸಿ ಹಣ ಪೀಕಿ ಪ್ರಕರಣ ದಿಕ್ಕನ್ನೆ ತಪ್ಪಿಸಿದ್ದಾರೆ. ಎಂದು ಅಲ್ಲಿನ ಸಾರ್ವಜನಿಕರು ಪೋಲಿಸರ ವಿರುದ್ದ ಕಿಡಿಕಾರಿದ್ದಾರೆ.
ಇನ್ನೂ ಮೇಲಾಧಿಕಾರಿಗಳಾದ ಮಾನ್ಯ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಈ ಪ್ರಕರಣದ ಕುರಿತು ತನಿಖೆ ನಡೆಸಿ ತಪ್ಪಿತಸ್ಥ ಪೋಲಿಸರ ವಿರುದ್ದ ಹಾಗೂ ಲಾಜ ಮಾಲೀಕನ ವಿರುದ್ದ ಜೂಜುಗಾರರ ವಿರುದ್ದ ಪ್ರಕರಣ ದಾಖಲಿಸಿ ಸಮಾಜದ ಸುವ್ಯವಸ್ಥೆ ಕಾಪಾಡಬೇಕಿದೆ.
ಜರ್ನಲಿಸ್ಟ್: ಚಂದ್ರು ತಳವಾರ