ಚಿಕ್ಕೋಡಿ:-ಸದಲಗಾ ವಿಧಾನಸಭಾ ಮತ ಕ್ಷೇತ್ರದ ಪಟ್ಟನಕೋಡಿ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಬಹುಜನ ಭಾರತ ಪಕ್ಷದ ಅಭ್ಯರ್ಥಿ,ಈಶ್ವರ ಗುಡಜ ಪರ ಪತ್ರಕರ್ತ ಮತ್ತು ಸಾಮಾಜಿಕ ಹೋರಾಟಗಾರರಾದ ವಿವೇಕಾನಂದ ಕತ್ತಿ ಮಾತನಾಡಿ ಸಮಗ್ರ ಅಭಿವೃದ್ಧಿಗೆ ಯುವ ನಾಯಕ ಸಂಘಟನಾ ಚಾತುರ್ಯಗಾರ ಈಶ್ವರ್ ಗುಡಜ ಅವರನ್ನು ಬಹುಮತದಿಂದ ಆರಿಸಿ ತರಬೇಕೆಂದು ವಿನಂತಿಸಿದರು.
ಈಗಾಗಲೇ ಸಂಘಟನೆ ಕಟ್ಟುವ ಮೂಲಕ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಇದೇ ರೀತಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುತ್ತಾರೆ ಎಂಬ ನಂಬಿಕೆ ನಮಗಿದೆ.
ಆದಕಾರಣ ಯುವ ನಾಯಕನಿಗೆ ವಿಧಾನ ಸಭೆಗೆ ಕಳುಹಿಸಲು ನಿಮ್ಮ ಅಮೂಲ್ಯವಾದ ಮತವನ್ನು ಹಾಕಿ ಎಂದು ಹೇಳಿದರು.
ಪಕ್ಷದ ಅಭ್ಯರ್ಥಿ ಈಶ್ವರ ಗುಡಜ ಮಾತನಾಡಿ ಪಕ್ಷಕ್ಕಾಗಿ ಕಾರ್ಯಕರ್ತರು ನಿಷ್ಠೆಯಿಂದ ದುಡಿಯಬೇಕು.
ನಾನು ನಿಮ್ಮನ್ನ ನಂಬಿ ಈ ಕ್ಷೇತ್ರದ ಅಭಿವೃದ್ಧಿಗಾಗಿ ಗೋಕಾಕದಿಂದ ಬಂದು ಸ್ಪರ್ದೇ ಮಾಡುತ್ತಿದ್ದೇನೆ.
ನಿಮ್ಮ ಆಶೀರ್ವಾದ ನನ್ನ ಮೇಲೆ ಇರಲಿ ಎಂದು ಮತದಾರರಲ್ಲಿ ಮನವಿಮಾಡಿದರು.
ಹಾಗು ನಮ್ಮ ಟ್ರಕ್ಕನ ಗುರುತಿಗೆ ಕಾರ್ಯಕರ್ತರು ಮತ ಹಾಕಿಸ ಬೇಕೆಂದು ಮನವಿ ಮಾಡಿದರು.
ಸೋಲು ಗೆಲವು ಮುಖ್ಯವಲ್ಲ ಯಾವುದೇ ಸಮಯದಲ್ಲಿಯೂ ನಿಮ್ಮ ಜೊತೆಗೆ ಇದ್ದು ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಹಗಲಿರುಳು ದುಡಿಯುತ್ತೇನೆ ಎಂದು ಬರವಸೆ ಕೊಟ್ಟರು.ವರದಿ:ಚಂದ್ರು ತಳವಾರ


