ರಾಯಬಾಗ: ಆಕ್ರಮವಾಗಿ ತಲೆಯೆತ್ತಿ ನಿಂತ, ಮಹಾಲಕ್ಷ್ಮಿ ಸ್ಟೋನ್ ಕ್ರಷರ್ ಮಷೀನ್!!
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹುಬ್ಬರವಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ದೇವನಕಟ್ಟಿ ಗ್ರಾಮದ ಸರ್ವೇ ನಂಬರ್ 50/5 ರಲ್ಲಿ 2 ಎಕರೆ, 7 ಗುಂಟೆ ಜಮೀನಿನಲ್ಲಿ ಪರಶುರಾಮ ಶಿವಪ್ಪ ವಡ್ಡರ ಎಂಬುವವರ ಮಾಲಿಕತ್ವದಲ್ಲಿ ಮಹಾಲಕ್ಷ್ಮಿ ಸ್ಟೋನ್ ಕ್ರಷರ ಹಾಗೂ ಡಾಂಬರ ಘಟಕ ಸ್ಥಾಪಿಸಲಾಗಿದೆ. ಸುಮಾರು ವರ್ಷಗಳಿಂದ ಸುತ್ತ ಮುತ್ತಲಿನ ಗ್ರಾಮಗಳಿಂದ ಕಲ್ಲುಗಳನ್ನು ಕರಿದಿಸಿ ಕಡಿ ಮತ್ತು ಡಸ್ಟ್ ತಯಾರಿಸಿ ಒಂದು ಬರಾಸಿಗೆ ಈ ಕೆಳಗಿನ ದರದಲ್ಲಿ ಅಂದರೆ:-
6 mm Rs 3000/-,
10 mm Rs 2000/-,
20 mm Rs 2000/-,
M-Sand Rs 3000/-
ಡಸ್ಟ್ Rs 2500/-
ವೈಟ್ ಮಿಕ್ಸ್ Rs 1800, ರೂಪಾಯಿಗಳ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.
ಅಕ್ರಮ ಗಣಿಗಾರಿಕೆ ರಾಜಾರೋಷವಾಗಿ ನಡೆಯುತ್ತಿದ್ದರೂ ಸಹ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮೌನವಾಗಿರುವದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಕ್ರಷರ್ ಮಷೀನ್ ಯಂತ್ರೋಪಕರಣಗಳನ್ನು ಬಳಿಸುವಲ್ಲಿ, ಸಾಕಷ್ಟು ಪ್ರಮಾಣದಲ್ಲಿ ವಿದ್ಯುತ್ ಉಪಯೋಗ ಮಾಡಲಾಗಿದೆ.
ವಿದ್ಯುತ್ ಬಿಲ್ಲ:-ಸುಮಾರು 20 ಲಕ್ಷ ರೂಪಾಯಿ ಆಗಿರುತ್ತದೆ.
ಹಾಗಾದ್ರೆ ಪರವಾನಿಗೆ ಪಡೆಯದ ಅಕ್ರಮ ಕ್ರಷರ್ ಮಿಷನ್ ಗೆ ಹೆಸ್ಕಾಂ ಅಧಿಕಾರಿಗಳು, ಇದುವರೆಗೆ ವಿದ್ಯುತ್ ಉಪಯೋಗಿಸಲು ಹೇಗೆ ಅವಕಾಶ ಮಾಡಿದರು ಎಂಬುದು ಯಕ್ಷಪ್ರಶ್ನೆಯಾಗಿದೆ.
ಹೆಸ್ಕಾಂ ಅಧಿಕಾರಿಗಳ ಗಮನಕ್ಕೆ ಇದೆಯಾ ಅಥವಾ ಇಲ್ಲವೋ ? ಅಥವಾ ಪರವಾನಿಗೆ ಪಡೆಯದ, ಗಣಿಗಾರಿಕೆಗೆ ಹೆಸ್ಕಾಂ ಅಧಿಕಾರಿಗಳು ಕೂಡ ಸಾತ್ ಕೊಟ್ರಾ ಎಂಬ ಅನುಮಾನ ಹುಟ್ಟುವಂತಿದೆ.
ಅದರಲ್ಲಿಯೂ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಕ್ರಷರ್ಗಳು ಗಾಳಿಗೆ ತೂರಿವೆ. ಇದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಪರಿಸರ ಮಾಲಿನ್ಯ ಅಧಿಕಾರಿಗಳಿಗೆ ಗೊತ್ತಿದ್ದರೂ, ಕಂಡೂ ಕಾಣದಂತೆ, ಗಾಢ ನಿದ್ರೆಗೆ ಜಾರಿದ್ದಾರೆ.
ಯಾವುದೇ ರೀತಿಯ NA ಲೇಔಟ್ ಮಾಡದೆ ಗ್ರಾಮ ಪಂಚಾಯಿತಿಯ ಪರವಾನಿಗೆ ಕೂಡ ಪಡೆದಿಲ್ಲ ಈ ಆಕ್ರಮಕರಾರು….
೭ ತಿಂಗಳಿಂದ ಯಾರ ಭಯವಿಲ್ಲದೆ, ಕಾನೂನು ಬಾಹಿರವಾಗಿ, ಗಣಿಗಾರಿಕೆ ನಡೆಯುತ್ತಿದ್ದು, ಸಾಕಷ್ಟು ಪ್ರಮಾಣದಲ್ಲಿ, ವ್ಯವಹಾರ ನಡೆಸಿದ್ದು, ಆದರೆ ಇದುವರೆಗೆ ಯಾವುದೇ ರೀತಿಯಾದಂತಹ ಜಿಎಸ್ಟಿ ಕಟ್ಟದೆ. ಸರಕಾರದ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಿದೆ. ತಾಲೂಕ ಅಧಿಕಾರಿಗಳ ಗಮನಕ್ಕೆ ಬಾರದೆ, ಇಷ್ಟೊಂದು ಗಣಿಗಾರಿಕೆ ಎಗ್ಗಿಲ್ಲದೆ ಸಾಗಿದೆ ಅಂದರೆ ಯಾರು ನಂಬುತ್ತಾರೆ ಸ್ವಾಮಿ! ಹಾಗಾದರೆ ಸರಕಾರದ ಕಣ್ಣಿಗೆ ಮನ್ನೆರಚುವ ಕೆಲಸಕ್ಕೆ ಮುಂದಾದರಾ..? ಈ ಆಕ್ರಮ ಕಾರರು..?
ಅಧಿಕಾರಿಗಳಿಗೆ ಎಲ್ಲವೂ ಗೊತ್ತಿದ್ದರೂ ಮೌನ ವಹಿಸಿದ್ದಾರೆ. ಹಾಗಾದ್ರೆ ಅಧಿಕಾರಿಗಳು, ಹಲ್ಲು ಕಿತ್ತ ಹಾವಾಗಿ ಬಿಟ್ಟರಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಅದು ಏನೆ ಆಗಿರಲಿ, ಸರಕಾರ ಮತ್ತು ಸಂಬಂದಿಸಿದ ಅಧಿಕಾರಿಗಳು ಈ ಕೂಡಲೆ ಯಚ್ಚೆತ್ತು, ಪರವಾನಿಗೆ ಇಲ್ಲದೆ ಕಾನೂನುಬಾಹಿರವಾಗಿ ನಡೆಯುತ್ತಿರುವ, ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸಿ, ತಪ್ಪಿತಸ್ತರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಕೈಗೊಳ್ಳಬೇಕಿದೆ.