ಹುಕ್ಕೇರಿ: ಪ್ರೇಮಿಗಳಿಗೆ ಬೇಕಿದೆ ರಕ್ಷಣೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಶಿರಗಾಂವ ಗ್ರಾಮದ ಯುವಕನೊರ್ವ ಪ್ರೀತಿಸಿ ಮದುವೆಯಾಗಿ ಸಬ್ ರಿಜಿಸ್ಟರನಲ್ಲಿ ಕೂಡಾ ಮದುವೆ ನೊಂದ ಮಾಡಿಕೊಂಡು ಪ್ರೇಮಿಗಳು ಒಡಿ ಹೊದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಆದರೆ ಪ್ರೇಮಿಗಳು ನಮಗೆ ರಕ್ಷಣೆ ಬೇಕಿದೆ ಎಂದು ವಿಡಿಯೋ ಮೂಲಕ ಸಮಸ್ಯೆಗಳನ್ನ ಹಂಚಿಕೊಡ್ಡಿದ್ದಾರೆ.ಇನ್ನೂ ಈ ಘಟನೆ ಹುಕ್ಕೆರಿ ತಾಲೂಕಿನ ಶಿರಗಾಂವ ಗ್ರಾಮದ ಯುವಕನಾದ ವಿಠ್ಠಲ ಹಾಲಪ್ಪ ಪೂಜೇರಿ (೨೨) ಹಾಗೂ ಯುವತಿ ವೈಶಾಲಿ ಕಂಠಿ ಇವರಿಬ್ಬರೂ ಹಲವು ದಿನಗಳ ಹಿಂದೆ ಪ್ರಿತಿಸಿ ಮದುವೆಯಾಗಿದ್ದಾರೆ. ಆದರೆ ಇದೀಗ ಹುಡುಗಿ ಮನೆಯವರು ಹುಡುಗಿಯನ್ನ ಮರಳಿ ಮನೆಗೆ ಕರೆದುಕೊಂಡು ಹೋಗಲು ಹುಡುಗಿಯ ಮನೆಯವರು ಶತ ಪ್ರಯತ್ನ ನಡೆಸಿದ್ದಾರೆ.
ಇನ್ನೂ ಪ್ರಿತಿಸಿ ಒಡಿ ಹೋದ ಪ್ರೇಮಿಗಳನ್ನ ಎಲ್ಲಿದ್ದರೂ ಹುಡುಕಿ ಪ್ರೇಮಿಗಳನ್ನ ಅಗಲಿಸಲು ಮುಂದಾಗಿದ್ದಾರೆ ಹುಡುಗಿ ಮನೆಯವರು.ಮೊನ್ನೆ ಪ್ರೇಮಿಗಳು ಒಡಿ ಹೋದಾಗ ಹುಡುಗಿ ಮನೆಯವರು ಹುಡುಗನ ಮನೆಗೆ ರಾತ್ರೊ ರಾತ್ರಿ ನುಗ್ಗಿ ಮನೆ ಮೇಲೆ ಕಲ್ಲು ತೂರಾಟ ನಡೆಸಿ ಗೂಂಡಾ ವರ್ತನೆ ತೋರಿ ಮನ ಬಂದಂತೆ ಹುಡುಗನ ತಂದೆ ತಾಯಿಗೆ ಬೆದರಿಕೆ ಹಾಕಿದ್ದಾರೆ.ಇನ್ನೂ ಈ ಘಟನೆ ತಿಳಿದ ಪ್ರೇಮಿಗಳು ಮನನೊಂದು ವಿಡಿಯೊ ಮುಖಾಂತರವೇ ರಕ್ಷಣೆ ಬೇಕಿದೆ ಎಂದು ಬೇಡಿಕೊಂಡಿದ್ದಾರೆ. ಇನ್ನೂ ಹುಡುಗಿಯ ಚಿಕ್ಕಪ್ಪ ಕಾಡಪ್ಪ ಕಂಠಿ ಪಾರೆಸ್ಟ ಇಲಾಖೆಯಲ್ಲಿದ್ದು ಪ್ರೆಮಿಗಳಿಗನ್ನ ಬೆರ್ಪಡಿಸಲು ಅಧಿಕಾರ ದುರುಪಯೊಗ ಪಡಿಸಿಕೊಳ್ಳುತ್ತಿದ್ದಾನೆಂದು ಹುಡುಗಿ ಗಂಭಿರ ಆಕ್ರೋಶ ವ್ಯಕ್ತ ಪಡಿಸಿದ್ದಾಳೆ.ಹುಡುಗಿ ಚಿಕ್ಕಪ್ಪನಿಗೆ ಕರೆ ಮಾಡಿ ಮನವಿ ಮಾಡಿಕೊಂಡರು ಕಾಡಪ್ಪ ಕಂಠಿ ನೀವು ದಿಲ್ಲಿಯಲ್ಲಿದ್ದರು ನಿನ್ನನ್ನ ತಂದು ಮನೆಗೆ ಒಯ್ಯುತ್ತೆನೆ ಬೇಕಾದಲ್ಲಿ ಹೊಗು ಎಂದು ಪೊನ ಸಂಭಾಷಣೆಯಲ್ಲಿ ಮಾತನಾಡಿ ಬೆದರಿಕೆ ಹಾಕಿದ ಆಡಿಯೋ ಕೂಡಾ ಲಭ್ಯವಾಗಿದೆ.ಮದುವೆ ಮಾಡಿಕೊಂಡು ಅನ್ಯೊನ್ಯವಾಗಿ ಬಾಳ್ವೆ ಮಾಡಬೇಕಿದ್ದ ಪ್ರೇಮಿಗಳಿಗೆ ಶಕುನಿಯಂತೆ ಬೆನ್ನು ಹತ್ತಿ ಸಂಸಾರ ಹಾಳು ಮಾಡುವ ದುರುದ್ದೆಶವೇ ಇವನ ಕೆಲಸವಾಗಿದೆ.ಇನ್ನೂ ಪ್ರೇಮಿಗಳ ಮನೆಗೆ ಹೋಗಿ ಗೂಂಡಾ ವರ್ತನೆ ತೋರಿದವರ ವಿರುದ್ದ ಕಾನೂನಿನ ಕ್ರಮ ಕೈಗೊಂಡು ಪ್ರೇಮಿಗಳನ್ನ ಒಂದು ಮಾಡ್ತಾರಾ ಅಥವಾ ಬೇರ್ಪಡಿಸುವ ಕೆಲಸ ಮಾಡ್ತಾರಾ ಎಂದು ಕಾದು ನೋಡಬೇಕಿದೆ. ನಮ್ಮಿಬ್ಬರ ಜೀವಕ್ಕೆ ಅಪಾಯವಿದೆ ನಮಗೇನಾದ್ರೂ ಆದರೆ ಇದಕ್ಕೆ ಹುಡುಗಿ ಮನೆಯವರು ಹಾಗೂ ಕಾಡಪ್ಪ ಕಂಠಿ ಇವರೇ ನೇರ ಹೊಣೆ ಎಂದು ವಿಡಿಯೊದಲ್ಲಿ ಹೇಳಿದ್ದಾರೆ.ಇನ್ನೂ ಬೆಳಗಾವಿ ಜಿಲ್ಲಾ ಪೊಲಿಸರು ಪ್ರೇಮಿಗಳನ್ನ ಒಂದು ಮಾಡುವಲ್ಲಿ ಯಶಸ್ವಿಯಾಗುತ್ತಾರೆಯೆ ಎಂದು ಕಾದು ನೋಡಬೇಕಿದೆ.ವರದಿ:-ಚಂದ್ರು ತಳವಾರ


