ಚಿಕ್ಕೋಡಿ: ಗರ್ಭಿಣಿ ಮಹಿಳೆಗೆ ನಿಂದಿಸಿದ ತಜ್ಞ ವೈದ್ಯನಿಗೆ ಶೋಕಾಸ್ ಚಾಟಿ ಬೀಸಿದ ವೈದ್ಯಾಧಿಕಾರಿಗಳು
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿರುವ ಸರ್ಕಾರಿ ಆಸ್ಪತ್ರೆ ಯ ಸಂತೋಷ ವಿಭೂತಿಮಠ ಎಂಬ ತಜ್ಞ ವೈದ್ಯ ಗರ್ಭಿನಿ ಮಹಿಳೆಗೆ ಬೈದು ನಿಂದಿಸಿದನ್ನು ಟಿವಿ3 ಕನ್ನಡ ಮಾದ್ಯಮದಲ್ಲಿ ಸುದ್ದಿ ಪ್ರಸಾರ ಮಾಡಲಾಗಿತ್ತು. ಸುದ್ದಿ ವೈರಲ್ ಬೆನ್ನೆಲೆ ಎಚ್ಚೆತ್ತುಕೊಂಡ ತಾಲೂಕ ವೈದ್ಯಾಧಿಕಾರಿಗಳು ಹರುಕು ಬಾಯಿ ತಜ್ಞ ವೈದ್ಯನಿಗೆ, ಶೋಕಾಸ್ ನೋಟಿಸ್ ಜಾರಿ ಮಾಡಿರುತ್ತಾರೆ.
ಬಾಯಿ ಮಾಡಿತು ಬೇತಾಳ, ಬೆನ್ನಿಗೆ ತತ್ತು ಲಾತಾಳ ಎಂಬಂತೆ, ಇದೀಗ ತಜ್ಞ ವೈದ್ಯ ಗರ ಬಡಿದಂತಾಗಿದ್ದಾನೆ.
ನೋಟಿಸ್ ಏನೊ ಕೊಟ್ಟಾಯಿತು, ಸೂಕ್ತ ಕಾನೂನಿನ ಕ್ರಮ ಯಾವಾಗ ? ಎಂಬ ಚರ್ಚೆ ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ತನ್ನ ತಾಯಿ ಕೂಡ ಹೆಣ್ಣು, ಹೆಂಡತಿಯೂ ಕೂಡ ಹೆಣ್ಣು, ತನ್ನ ಮಗಳು ಕೂಡ ಹೆಣ್ಣು, ಎಂಬುದನ್ನು ಅರಿಯದ ತಜ್ಞ ವೈದ್ಯ ತುಂಬು ಗರ್ಭಿಣಿ ಮಹಿಳೆಗೆ ಅಸಹ್ಯವಾಗಿ ಬೈದು, ಪೇಚಿಗೆ ಸಿಲುಕಿದ್ದಾನೆ. ಅಷ್ಟೇ ಅಲ್ಲದೆ, ಸುದ್ದಿಗೆ ಬೆಚ್ಚಿಬಿದ್ದು ಸುದ್ದಿಯನ್ನು ಕೈಬಿಡುವಂತೆ, ಬೇರೆಯವರ ಕಡೆಯಿಂದ ಫೋನ್ ಕಾಲ್ ಕೂಡ ಮಾಡಿಸುತ್ತಿದ್ದಾನೆ.
ಸತ್ಯವನ್ನು ಪ್ರಚಾರ ಮಾಡುವಾಗ ಯಾವ ಪುಡಂಗನಿಗು ಹೆದರಬೇಕಾಗಿಲ್ಲ ಎನ್ನುವ ದ್ಯೆಯ ನನ್ನದು…
ಅದು ಏನೇ ಆಗಿರಲಿ, ಸರಕಾರ ಮತ್ತು ಜಿಲ್ಲಾಡಳಿತ ತಪ್ಪಿತಸ್ಥ ವೈದ್ಯನ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲಿ ಎಂಬುವುದು ಸಾರ್ವಜನಿಕರ ಒತ್ತಾಯವಾಗಿದೆ.
ಜರ್ನಲಿಸ್ಟ್: ಚಂದ್ರು ತಳವಾರ