ಚಿಕ್ಕೋಡಿ: ನಕಲಿ ವೈದ್ಯ ಮುದೋಳ್
ರೋಗಿಗಳೇ ಯಾಮಾರ ಬೇಡಿ ನಿಮ್ಮ ಆರೋಗ್ಯದ ಜೊತೆ ಚೆಲ್ಲಾಟ ಆಡ್ತಾನೆ ಈ ನಕಲಿ ವೈದ್ಯ ಮುಧೋಳ್
ಅರೆ ಇದೇನಪ್ಪಾ ನಕಲಿ ವೈದ್ಯನ ಕುರಿತು ಏನು ವಿಶೇಷ ಎನ್ನುತ್ತೀರಾ ? ಹಾಗಾದ್ರೆ ಈ ಸ್ಟೋರಿ ಒಂದು ಸಾರಿ ಸ್ಕಿಪ್ ಮಾಡ್ದೆ ನೋಡಿ ನಿಮಗೆ ಗೊತ್ತಾಗುತ್ತೆ.(ವಿಡಿಯೋ ಪ್ಲೇ)
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕಮತೇನಟ್ಟಿ ಗ್ರಾಮದಲ್ಲಿ Dr ಮುಧೋಳ್ ಎಂಬ ನಕಲಿ ವೈದ್ಯ ಇದ್ದಾನೆ.
ಯಾವುದೇ ವೈದ್ಯಕೀಯ ಶಿಕ್ಷಣ ಪಡೆಯದ dr ಮುಧೋಳ್ ನಕಲಿ ವೈದ್ಯ ಸುಮಾರು ವರ್ಷಗಳಿಂದ ಅಮಾಯಕ ಜನರನ್ನು ಸುಲಿಗೆ ಮಾಡಿದ್ದಾನೆ.
ಹಳೆಯದಾದ ಹರಕಲು ಮುರುಕಲು, ಹಂಚಿನ ಮನೆಯನ್ನೇ, ಆಸ್ಪತ್ರೆಯನ್ನಾಗಿ ಮಾಡಿದ್ದಾನೆ ಭೂಪ.
ಇಲ್ಲಿ ಚಿಕ್ಕೊಡಿ ತಾಲೂಕಿನ ಕಮತೇನಟ್ಟಿ ಒಂದು ಬೊರ್ಡು ಇರದ ನಕಲಿ ವೈದ್ಯನೊಬ್ಬನ ಕಥೆ ಹಂಚಿನ ಮನೆ ಯಾವಾಗ ಮುರಿದು ಬೀಳುತ್ತೆ ಗೊತ್ತೆ ಆಗಲ್ಲ. ಒಂದೇ ಕೊಠಡಿಯಲ್ಲಿ,ನಾಲ್ಕು ಜನರಿಗೆ, ಸಿಲಾಯಿನ ಹಾಕಿದ್ದಾನೆ.
ಈ ನಕಲಿ ವೈದ್ಯನ ಅಟ್ಟಹಾಸಕ್ಕೆ, ಬಲಿಯಾಗುತ್ತಿವೆ ಅಮಾಯಕ ಜೀವಗಳು….ಈತನಿಗೆ ಹೇಳುವವರು ಹೇಳುವರು ಯಾರು ಇಲ್ಲ.
ಮಾನ್ಯ ವೈದ್ಯಕೀಯ ಪದವಿ ಇಲ್ಲದೆ ಸುಮಾರು ವರ್ಷಗಳಿಂದ ವೈದ್ಯನೆಂದು ಹೇಳಿ ಅಮಾಯಕ ಜನರನ್ನು ಸುಲಿಗೆ ಮಾಡಿದ್ದಾನೆ.
ಹಲವಾರು ವರ್ಷಗಳಿಂದ ರಾಜಾರೋಷವಾಗಿ, ಯಾವುದೇ ರೀತಿಯ ಕೆಪಿಎಂಇ ಕಡೆಯಿಂದ ಪರವಾನಿಗೆ ಪಡೆಯದೆ, ಕ್ಲಿನಿಕ್ ನಡೆಸಿದ್ದು, ಹಾಗಾದ್ರೆ ಇದು ತಾಲೂಕ ವೈದ್ಯಾಧಿಕಾರಿಗಳ ಗಮನಕ್ಕೆ ಬಾರದೆ ಇರುವುದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಯಾವ ವೈದ್ಯಕೀಯ ಶಿಕ್ಷಣ ಪಡೆಯದ ನಕಲಿ ವೈದ್ಯ….
ಬಣ್ಣದ ಮಾತುಗಳನ್ನಾಡಿ ಅಮಾಯಕ ಜನರಿಂದ ಹಣ ಪಿಕುವುದೇ ಈತನ ಗೀಳಾಗಿದೆ.
ಯಾವ ಎಂ.ಬಿ.ಬಿ.ಎಸ್ ಪದವಿ ಪಡೆಯದ ಇತರೋಗಿಗಳಿಗೆ ತನ್ನ ಮನಸ್ಸಿಗೆ ಬಂದಂತೆ ಹಾಯ್ ಡೋಸ್ ಮೆಡಿಸನ್ ಗಳನ್ನ ಕೊಡುತ್ತಾನೆ.
ಗರ್ಭಿಣಿಯರು, ವೃದ್ಧರು, ಚಿಕ್ಕ ಮಕ್ಕಳೆನ್ನದೆ,ಔಷಧಿಗಳನ್ನು ಕೊಡುತ್ತಾನೆ ಈ ಭೂಪ. ಈತನಿಗೆ ಹೇಳೋಕೆ ಕೇಳೋಕೆ ಯಾರು ಇಲ್ಲದಂತಾಗಿದೆ. ಆಡಿದ್ದೆ ಆಟ ಎನ್ನುವ ರೀತಿಯಲ್ಲಿ ಚಿಕಿತ್ಸೆ ಕೊಡ್ತಾನೆ ನಕಲಿ ವೈದ್ಯ… ದುಡ್ಡು ಗಳಿಸುವ ಗಿಳಿಗಿಳಿದ ನಕಲಿ ವೈದ್ಯ, ಬಡ ಜನರಿಂದ ಹಣ ಪಿಕುತ್ತಾನೆ ಸಾವಿರ ಸಾವಿರ… ಈತ ತನ್ನ ಮುದಿ ವಯಸ್ಸಿನಲ್ಲೂ, ಕಾರಿನಲ್ಲಿ ಬಂದು ಚಿಕಿತ್ಸೆ ಕೊಡುತ್ತಾನೆ ನಕಲಿ ವೈದ್ಯ. ತಾಲೂಕಿನ ಅರೋಗ್ಯ ವೈದ್ಯಾಧಿಕಾರಿಗಳಾದ ಸುಕುಮಾರ ಬಾಗಾಯಿ ಅವರೇ, ನಿಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ, ಇದೇನು ಹೊಸದಲ್ಲ. ಹಾಗಾದ್ರೆ ಇಂತಹ ನಕಲಿ ವೈದ್ಯರು ನಿಮ್ಮ ಗಮನಕ್ಕೆ ಇಲ್ವಾ ? ಇನ್ನೆಷ್ಟು ಅಮಾಯಕ ಜೀವಗಳು ಈ ನಕಲಿ ವೈದ್ಯನ ಕೈಯಲ್ಲಿ ಸಿಕ್ಕು ಬಲಿಯಾಗಬೇಕು.? ಈ ಸುದ್ದಿಯನ್ನು ಗಮನಿಸಿದ ಮೇಲಾದರೂ THO ಸಾಹೇಬರು ಎಚ್ಚೆತ್ತುಕೊಂಡು ನಕಲಿ ವೈದ್ಯನ ಮೇಲೆ ಸೂಕ್ತ ಕಾನೂನಿನ ಕ್ರಮ ಜರುಗಿಸಿ ಜೈಲಿಗಟ್ಟಬೇಕಿದೆ.