-ಚಿಕ್ಕೋಡಿ ವರದಿ-
ಚಿಕ್ಕೋಡಿ : ಕಾಂಗ್ರೆಸ್ ಮುಖಂಡನ ಮೆಲೆ ರೌಡಿ ಹೆಡ್ ಮಾಸ್ತರನಿಂದ ಮಾರಕಾಸ್ತ್ರಗಳಿಂದ ಹಲ್ಲೆ ಸ್ಥಿತಿ ಗಂಭೀರ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮುಗಳಿ ಗ್ರಾಮದ ಮಾಜಿ ತಾಲೂಕ ಪಂಚಾಯತ ಹಾಗೂ ಕೆ ಪಿ ಸಿ ಸಿ ಸದಸ್ಯ ರಾಜು ಪಾಟೀಲ (ಶಂಕರಗೌಡ ಪಾಟೀಲ) ಯುವ ರಾಜಕೀಯ ನಾಯಕರ ಮೇಲೆ ನಿನ್ನೆ ಮಧ್ಯರಾತ್ರಿ ರಾಜು ಪಾಟೀಲ ತನ್ನ ಗೆಳೆಯ ಮನೆಗೆ ಊಟಕ್ಕೆ ಹೋಗಿ ಬರುವಾಗ ಮುಗಳಿ ಬಸ್ ಸ್ಟಾಂಡ ನಲ್ಲಿ ರಾಜು ಪಾಟೀಲನಿಗೆ ಕಣ್ಣಿಗೆ ಕಾರದ ಪುಡಿ ಎರಚಿ ಮಚ್ಚು ಲಾಂಗು ಹೀಗೆ ಮಾರಾಕಸ್ತ್ರಗಳಿಂದ ಬರ್ಬರವಾಗಿ ಹಲ್ಲೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇನ್ನು ಗಂಬಿರವಾಗಿ ಗಾಯಗೊಂಡ ರಾಜು ಪಾಟೀಲ ತೆಲೆಗೆ ೪೦ ಹೊಲಿಗೆಗಳು ಬಿದ್ದಿದ್ದು, ಇನ್ನು ಎರಡು ಕೈ ಬೆರಳುಗಳು ಕತ್ತರಿಸಿ ಹೋಗಿವೆ ಮತ್ತು ಅದೇ ಕೈಗೆ ೨೦ ಹೋಲಿಗೆ ಗಳು ಬಿದ್ದಿವೆ. ಎಂದು ಮಾಹಿತಿ ತಿಳಿದು ಬಂದಿದೆ.
ಇನ್ನು ಚಿಕ್ಕೋಡಿ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಹಲ್ಲೆ ಮಾಡಿದವರು ಅದೇ ಗ್ರಾಮದ ಕನ್ನಡ ಶಾಲೆಯ ಮುಖ್ಯ್ಯೊಪಾಧ್ಯಾಯ ಈರಯ್ಯ ಗೊಟುರೆ ಹಾಗೂ ಅವರ ಮಗ ಪಂಚಾಕ್ಷರಿ ಗೊಟುರೆ ಎಂದು ತಿಳಿದು ಬಂದಿದೆ.
ಪೊಲೀಸರ ಪ್ರಾಥಮಿಕ ಹಂತದಲ್ಲಿ ಪೋಲಿಸ ಮೂಲಗಳಿಂದ ಈ ಮಾರಣಾಂತಿಕ ಹಲ್ಲೆಗೆ ಸ್ಪಷ್ಟವಾದ ಮಾಹಿತಿ ತಿಳಿದು ಬರಬೇಕಾಗಿದೆ. ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು. ಕ್ರೂರತನ ಮೆರೆದ ಹಾಗೂ ಶಿಕ್ಷಕ ವೃತ್ತಿಯನ್ನೇ ಮರೆತು ಗುಂಡಾಗಿರಿ ಗೆ ಬೆನ್ನು ಹತ್ತಿದರಾ ಮುಖ್ಯ ಶಿಕ್ಷಕರು, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದವರ ವಿರುದ್ದ ಕ್ರಮ ಕೈಗುಳ್ಳಬೇಕಾಗಿದೆ.
ಮಾಧ್ಯಮದವರು ಸಂಬಂಧಪಟ್ಟ ಜನರಿಗೆ ಪ್ರಶ್ನಿಶಿಸಿದಾಗ ಮುಗಳಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಕನಾಗಿರುವ ಆಗಿರುವ ಈರಯ್ಯ ಗೋಟುರೆ, ಇವನು ಶಾಲೆಯಲ್ಲಿ ತನ್ನದೇ ಆದ ಹುಕುಂ ಚಲಾಯಿಸುತ್ತಿದ್ದ ಅಡುಗೆ ಸಾಮಗ್ರಿಯ ಸರಿಯಾಗಿ ತರುವುದಿಲ್ಲ ಯಾವುದೇ ಒಂದು ಶಾಲೆಯಲ್ಲಿ ಸರಿಯಾದ ಸು ವ್ಯವಸ್ಥೆಯನ್ನು ಮಾಡುತ್ತಿಲ್ಲವೆಂದು ಪ್ರಶ್ನಿಸಿದಾಗ ಈ ರೀತಿಯಾಗಿ ಪದೇಪದೇ ಮಾರಕಸ್ತ್ರಗಳನ್ನು ತೋರಿಸಿ ಗುoಡಾಗಿರಿ ತೋರಿಸುತ್ತಿದ್ದನೆಂದು ತಿಳಿದುಬಂದಿದೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆಗೆ ಒಳಗಾದ ರಾಜು ಪಾಟೀಲ್ ಹಾಗೂ ಅವರ ಸಂಬಂಧಿಕರು ನಮ್ಮ ವಾಹಿನಿಗೆ ಮಾಹಿತಿ ನೀಡಿದ್ದಾರೆ.
ಇನ್ನು ಈ ಪ್ರಕರಣವನ್ನು ಚಿಕ್ಕೋಡಿ ಪೊಲೀಸರು ಯಾವ ರೀತಿಯಾಗಿ ಈ ಕೃತ್ಯ ನಡೆಸಿದವರ ಮೇಲೆ ಕ್ರಮ ಕೈಗೊಳ್ಳುತ್ತಾರೋ ಕಾದು ನೋಡಬೇಕಿದೆ.
ವರದಿ:- ಚಂದ್ರು ತಳವಾರ