ಬೆಳಗಾವಿ ಜಿಲ್ಲಾ ಉತ್ತಮ ಸಹಕಾರಿ ಸಂಘ ಪ್ರಶಸ್ತಿಗೆ ಖಾನಟ್ಟಿ ಹಾಲು ಉತ್ಪಾದಕರ ಸಹಕಾರ ಸಂಘ ಆಯ್ಕೆ..!
ಶಿವಾಪೂರ (ಹ):ಮೂಡಲಗಿ ತಾಲೂಕಿನ ಖಾನಟ್ಟಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಬೆಳಗಾವಿಯಲ್ಲಿ ನಡೆದ 71ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಬೆಳಗಾವಿ ಜಿಲ್ಲಾ ಉತ್ತಮ ಸಹಕಾರ ಸಂಘ ಪ್ರಶಸ್ತಿಗೆ ಭಾಜನವಾಗಿದೆ. ಸಪ್ತ ಸಹಕಾರಿ ತತ್ವಗಳ ತಳಹದಿಯ ಮೇಲೆ ಕಾರ್ಯನಿರ್ವಹಿಸುತ್ತಾ ರಾಷ್ಟ್ರದ ಬೆನ್ನೆಲುಬಾಗಿರುವ ರೈತನಿಗೆ ಬೆನ್ನೆಲುಬಾಗಿ ಪಾರದರ್ಶಕ ಆಡಳಿತ, ಪರಿಶುದ್ಧ ಹಾಲು ಸಂಗ್ರಹಣೆ, ರೈತರಿಗೆ ರಿಯಾಯ್ತಿ ದರದಲ್ಲಿ ಹೈನುಗಾರಿಕೆಗೆ ಬೇಕಾಗುವ ಉಪಕರಣಗಳು ಹಾಗೂ ಸರಕಾರದ ಸಹಕಾರಿ ಕ್ಷೇತ್ರದ ಯೋಜನೆಗಳನ್ನು ಹಾಲು ಉತ್ಪಾದಕರಿಗೆ ತಲುಪಿಸುವಲ್ಲಿ ಸಂಘದ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ & ಸ್ಥಳೀಯ ಶಾಸಕರಾದ ಸನ್ಮಾನ್ಯ ಬಾಲಚಂದ್ರ ಜಾರಕಿಹೊಳಿಯವರ ಉತ್ತಮ ಮಾರ್ಗದರ್ಶನವೇ ಸಂಘದ ಪ್ರಶಸ್ತಿ ಪಡೆಯುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಎಸ್ ಎಸ್ ಆರಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲಾ ಉತ್ತಮ ಸಹಕಾರ ಸಂಘ ಪ್ರಶಸ್ತಿಯನ್ನು ಸಂಘದ ಅಧ್ಯಕ್ಷರಾದ ಮಲ್ಲಪ್ಪ ಕೌಜಲಗಿ ಸ್ವೀಕರಿಸಿದರು.