ಖಾನಾಪುರ ಮೂಲಭೂತ ಸೌಕರ್ಯಗಳಿಂದ ವಂಚಿತವಾದ ಗೌಳಿವಾಡ; ಹನಿಕಿ ಹಾಕಿಯೂ ಕೂಡ ನೋಡೋದಿಲ್ಲ ಅಧಿಕಾರಿಗಳು.!
ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನ ನಂದಗಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗೌಳಿ ಜನಾಂಗ ವಾಸಿಸುತ್ತಿರುವ ಕಾಡಿನಲ್ಲಿ ಗೌಳಿವಾಡ ಎಂಬ ಗ್ರಾಮ ಕಳೆದ 40 ವರ್ಷಗಳಿಂದ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ
ಈ ಗ್ರಾಮದಲ್ಲಿ ಸುಮಾರು 20 ಕುಟುಂಬಗಳು ವಾಸಿಸುತ್ತಿದ್ದು ಸಣ್ಣ ಮಕ್ಕಳನ್ನು ಹಿಡಿದು 150 ಜನಸಂಖ್ಯೆ ಹೊಂದಿದೆ 25 ಶಾಲಾ ಮಕ್ಕಳಿದ್ದಾರೆ
ನಂದಗಡದಿಂದ ಈ ಗ್ರಾಮಕ್ಕೆ ಕಾಡಿನಲ್ಲಿ ಸುಮಾರು ಮೂರು ಕಿ.ಮೀ ದೂರ ನಡೆದು ಹೋಗಬೇಕು ಸರಿಯಾದ ರಸ್ತೆ ಇಲ್ಲ ನೀರಿನ ಸೌಕರ್ಯವಿಲ್ಲಾ ವಿದ್ಯುತ್ ಸಂಪರ್ಕವಿಲ್ಲ ಅಂಗನವಾಡಿ ಹಾಗೂ ಶಾಲೆಯಿಲ್ಲ ಮಳೆಗಾಲ ಬಂದರೆ ಅಹಾರ ಸಾಮಗ್ರಿಗಳನ್ನು ತರಲು ಇನ್ನಿತರ ಚಟುವಟಿಕೆ ಮಾಡಲು ನರಕ ಯಾತನೆ ಅನುಭವಿಸುತ್ತಿದ್ದಾರೆ
ಅಂಗನವಾಡಿ ಮಕ್ಕಳಿಂದ ಹಿಡಿದು ಶಾಲಾ ಕಾಲೇಜುಗಳಿಗೆ ಮೂರು ಕಿ.ಮೀ ವರೆಗೆ ನಡೆದುಕೊಂಡೆ ಬರಬೇಕು ಕಾಡು ಪ್ರಾಣಿಗಳ ಕಾಟವು ಹೆಚ್ಚಿದೆ ಆರೋಗ್ಯದ ಸಮಸ್ಯೆಗಳಾದರೆ ಆಸ್ಪತ್ರೆಗೆ ಹೋಗಲು ಪರದಾಡಬೇಕಾಗುತ್ತದೆ ಇಲ್ಲಿನ ಜನರು ಮಾನವ ಹಕ್ಕು ಹಾಗೂ ಶಿಕ್ಷಣದ ಹಕ್ಕುಗಳಿಂದ ವಂಚಿತರಾಗಿದ್ದಾರೆ
ಇವರಿಗೆ ವಾಸಿಸಲು ಜಾಗವೂ ಇರಲಿಲ್ಲ ತಾವೆ ದುಡಿದು ಸಾಮುಹಿಕವಾಗಿ ಜಾಗ ಖರೀದಿಸಿ ಸೂರು ಕಟ್ಟಿಕೊಂಡು ಒಂದು ಬೋರವೆಲ್ ಹಾಕಿಸಿಕೊಂಡಿದ್ದಾರೆ ಕಾಟಾಚಾರಕ್ಕೆ 2017 ರಲ್ಲಿ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯವರು ಇವರನ್ನ ಗುರುತಿಸಿ ಎಲ್ಲಾ ಮನೆಗಳಿಗೆ ಸೋಲಾರ್ ವಿದ್ಯುತ್ ಅಳವಡಿಸಿದ್ದರು ಆದರೆ ಈಗ ಅವೆಲ್ಲಾ ಹಾಳಾಗಿ ಕತ್ತಲಲ್ಲಿ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ
ತಾಲೂಕಿನ ಇನ್ನೂ ಹಲವಾರು ಗ್ರಾಮಗಳು ಇದೆ ಪರಿಸ್ಥಿತಿಯಲ್ಲಿವೆ ಬಡತನ ಮುಕ್ತ ರಾಜ್ಯ ನಿರ್ಮಾಣ ಮಾಡಲು ಹೋರಟ ಸರ್ಕಾರಕ್ಕೆ ಇದು ಕಾಣುತ್ತಿಲ್ಲವಾ ಜನಪ್ರತಿನಿಧಿಗಳು ಮತ ಪಡೆಯಲು ಮಾತ್ರ ಇವರ ಕಡೆ ಹೋಗಿ ನಂತರ ಮರೆತು ಬೀಡುತ್ತಿದ್ದಾರೆ
ಜ್ಯೋತಿಬಾ ಬೆಂಡಿಗೇರಿ ಸಮಾಜ ಸೇವಕ
ಸ್ವಾತಂತ್ರ ಸಿಕ್ಕ 77 ವರ್ಷ ಕಳೆದರೂ ಕೂಡ ಇಲ್ಲಿನ ಗ್ರಾಮಸ್ಥರು ಸರ್ಕಾರದ ಯೋಜನೆಗಳಿಂದ ವಂಚಿತರಾಗಿದ್ದಾರೆ ಸರ್ಕಾರಿ ಯೋಜನೆಗಳು ಈ ಗ್ರಾಮಕ್ಕೆ ಮುಟ್ಟಿಸುವಲ್ಲಿ ಎಲ್ಲಾ ಸರ್ಕಾರಗಳು ವಿಫಲವಾಗಿವೆ. ಕಡತದಲ್ಲಿ ಮಾತ್ರ ಯೋಜನೆಗಳು. ಅತಿ ಉತ್ತಮ ಪಂಚಾಯ್ತಿ ಅಂತ ರಾಜ್ಯದಲ್ಲಿ ಎರಡನೇ ಸ್ಥಾನ ಪಡೆದಿದೆ.
ಮೂಲಭೂತ ಸೌಕರ್ಯ ಪಡೆಯುವುದು ಪ್ರತಿಯೋಬ್ಬ ನಾಗರಿಕನ ಹಕ್ಕು ಇಲ್ಲಿ ಅದರ ಉಲ್ಲಂಘನೆ ಆಗುತ್ತಿದೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಆದಷ್ಟು ಬೇಗ ವ್ಯವಸ್ಥೆ ಕಲ್ಪಿಸಿಕೋಡಬೇಕೆಂದು ಮನವಿ ಮಾಡಿದರು
ಮಾಣಿಕ್ ಕುರಿಯಾ ಜೈ ಜವಾನ್ ಜೈ ಕಿಸಾನ್ ಸಂಘಟನೆ ಕಾರ್ಯಕರ್ತರು
ಶ್ರೀ ಗೋವಿಂದ ಪಾಟೀಲ ಅವರು ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಾ ತಾಲೂಕಿನ ಅಭಿವೃದ್ಧಿಗಾಗಿ ಶ್ರಮಿಸಬೇಕೆಂದು ಜೈ ಜವಾನ್ ಜೈ ಕಿಸಾನ್ ಸಂಘಟನೆ ಹುಟ್ಟುಹಾಕಿ ಹಲವಾರು ಸಮಾಜಮುಖಿ ಕೆಲಸಗಳನ್ನ ಮಾಡುತ್ತಾ ಬಂದಿದ್ದಾರೆ ಅದರ ಕಾರ್ಯಕರ್ತರಾದ ನಾನು ಕೂಡ ಈ ಜನರಿಗೆ ಮೂಲಭೂತ ಸೌಕರ್ಯ ಕಲ್ಪಿಸಿ ಕೊಡಬೇಕೆಂದು ಮನವಿ ಮಾಡುತ್ತೇನೆ ಎಂದರು.