ಹಿರೇಮುನವಳ್ಳಿ ಗ್ರಾಮದ ರೊಜ್ಜು ಕೊಳಚೆ ಸ್ವಚ್ಛತೆಗೆ ಶಾಲಾ ಮಕ್ಕಳನ್ನ ಬಳಿಸಿದ ಶಿಕ್ಷಕರು
ಪೆನ್ನು ಪುಸ್ತಕ ಹಿಡಿಯೊ ಕೈಗಳಿಗೆ, ಸನಿಕೆ ಕೊಟ್ಟು, ಗಠಾರ್ ಸ್ವಚ್ಛತೆ ಮಾಡಿಸಿದ ದೈಹಿಕ ಶಿಕ್ಷಕ!
ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಹಿರೇಮುನವಳ್ಳಿ ಸರಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ.
ಇನ್ನು ಈ ಘಟನೆಗೆ ಸಂಬಂಧಿಸಿದಂತೆ, ಸಾಮಾಜಿಕ ಜಾಲತಾಣದಲ್ಲಿ, ವಿಡಿಯೋ ವೈರಲ್ ಆಗುತ್ತಿದ್ದಂತೆ, ಎಚ್ಚೆತ್ತುಕೊಂಡ ಶಾಲಾ ಆಡಳಿತ ಮಂಡಳಿ, ಹಾಗೂ ಅಲ್ಲಿನ ಶಿಕ್ಷಕರು, ನಮ್ಮದು ತಪ್ಪಾಗಿದೆ ಕ್ಷಮಿಸಿ ಬಿಡಿ ಎಂದು ಅಂಗಲಾಚಿ ಬೇಡಿದ್ದಾರೆ. ಶಾಲೆ ಕಾಂಪೌಂಡ್ ಹೊರಗಡೆ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಗಠಾರ್ ಇದಾಗಿರುತ್ತದೆ.
ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ಕಡೆಯಿಂದ ಸ್ವಚ್ಛತೆ ಮಾಡಿಸಬೇಕಿದ್ದ ಈ ಕೆಲಸವನ್ನು ಹಿರೇಮುನವಳ್ಳಿ ಸರ್ಕಾರಿ ಶಾಲೆ ದೈಹಿಕ ಶಿಕ್ಷಕರು ಸ್ವತಹ ಖುದ್ದಾಗಿ ವಿದ್ಯಾರ್ಥಿಗಳ ಕಡೆಯಿಂದ ಮಾಡಿಸಿದ್ದಾರೆ.
ಶಾಲಾ ಅವಧಿಯಲ್ಲೇ ಗಠಾರ್ ಸ್ವಚ್ಛತೆ ಕೆಲಸ ಮಾಡಿಸಿ ದೈಹಿಕ ಶಿಕ್ಷಕ ಇದೀಗ ಪೇಚಿಗೆ ಸಿಲುಕಿದ್ದಾನೆ.
ಮಕ್ಕಳು ಗಟಾರ್ ಕ್ಲಿನ್ ಮಾಡುವ ವಿಡಿಯೋವನ್ನು ವ್ಯಕ್ತಿಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಏನು ಹೇಳುತ್ತೀರಿ ಎಂದು ಮುಖ್ಯ ಶಿಕ್ಷಕರನ್ನು ಕೇಳಿದಾಗ, ಪಂಚಾಯ್ತಿಯವರು ಸರಿಯಾಗಿ ಕೆಲಸ ಮಾಡೋದಿಲ್ಲ. ಅದಕ್ಕಾಗಿ ಮಕ್ಕಳನ್ನು ಸ್ವಚ್ಛತೆ ಕೆಲಸಕ್ಕೆ ದೂಡಿರಬಹುದು ಏನೋ? ತಪ್ಪು ಆಗಿರಬಹುದು ಎಂದು ಸಮಜಾಯಿಸಿ ಉತ್ತರ ನೀಡಿದ್ದಾರೆ.
ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ಕುಡ ತರಲಾಗಿದೆ.
ಇನ್ನು ಈ ಕುರಿತು ಸರಕಾರ ಮತ್ತು ಶಿಕ್ಷನಾಧಿಕಾರಿಗಳು, ತಪ್ಪಿತಸ್ಥ ಶಿಕ್ಷಕರ ಮೇಲೆ ಕಾನೂನಿನ ಕ್ರಮ ಕೈಗೊಳ್ಳುತ್ತಾರಾ? ಅಥವಾ ತಪ್ಪಿತಸ್ಥರ ಬೆನ್ನು ತಟ್ಟುತ್ತಾರಾ? ಕಾಯ್ದು ನೋಡಬೇಕಿದೆ.
ಜರ್ನಲಿಸ್ಟ್: ಚಂದ್ರು ತಳವಾರ್


