ಖಾನಾಪುರ: ನಂದಗಡ ಪೋಲಿಸರ ನಡೆ; ಅಕ್ರಮ ಮರಳು ದಂಧೆಕೋರರ ಕಡೆ..!
ಹೌದು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಸಮೀಪದ ನಂದಗಡ ಗ್ರಾಮ ರಾಯಣ್ಣನ ಸಮಾಧಿ ಸ್ಥಳ ಹಾಗೂ ಸುಂದರ ಸೊಬಗುಳ್ಳ ಅರಣ್ಯ ಪ್ರದೇಶದಲ್ಲಿ ಪ್ರವಾಸಿಗರನ್ನ ಕೈ ಮಾಡಿ ಕರೆಯುವ ಸ್ಥಳ ನಂದಗಡ.ಈಗ ಅಕ್ರಮ ಮರಳು ದಂಧೆಕೋರರ ಕೈಯ್ಯಲ್ಲಿ ಸಿಲುಕಿ ಅರಣ್ಯ ಪ್ರದೇಶದ ಒಡಲು ಬಗಿದು ಅಕ್ರಮ ಮರಳು ದಂಧೆ ಬಲು ಜೋರಾಗಿ ಹಾಗೂ ರಾಜಾರೋಷವಾಗಿ ನಡೆಯುತ್ತಿದೆ.ಇಷ್ಟೆಲ್ಲಾ ರಾಜಾರೋಷದ ಮರಳು ದಂಧೆಯ ಬಗ್ಗೆ ಪೋಲಿಸರಿಗೆ ಹಾಗೂ ಅರಣ್ಯ ಅಧಿಕಾರಿಗಳಿಗೆ ಗ್ರಾಮದ ಬೀಟ ಪೋಲಿಸರಿಗೆ ಸಂಪೂರ್ಣವಾಗಿ ಮಾಹಿತಿ ಇದ್ದರು ಕಣ್ಣಿದ್ದು ಕುರುಡನಂತೆ ಪೋಲಿಸರ ವರ್ತನೆ ನಡೆದಿದೆ ಅಂದರೆ ಇಲ್ಲಿ ಹಪ್ತಾ ಎಷ್ಟಿರಬಹುದು ಎಂದು ಊಹಿಸಲಾರದಷ್ಟಿದೆ. ಕಳೆದ ದಿನಗಳ ಹಿಂದಷ್ಟೆ ಕೆಲ ಪತ್ರಕರ್ತರು ಈ ಅಕ್ರಮ ವಿಷಯದ ಸಂಬಂಧಿಸಿದಂತೆ ಅಕ್ರಮ ಮರಳು ದಂಧೆಕೋರರ ವಿಡಿಯೋವನ್ನು ಮಾಡಿದಾಗ ಅಲ್ಲಿರುವ ಪಿಎಸ್ಐ ಬಾದಾಮಿ ಹಾಗೂ ಮೂವರು ಪೊಲಿಸ್ ಸಿಬ್ಬಂದಿಗಳು ಪತ್ರಕರ್ತರಿಗೆ ಬೆದರಿಕೆ ಹಾಕಿ ಕೇಸ್ ದಾಖಲಿಸುತ್ತೆವೆಂದು ಬರದರಿಕೆ ಹಾಕಿ ನಕಲಿ ಪತ್ರಕರ್ತರಂತೆ ಬಿಂಬಿಸಲು ರಾತ್ರೋರಾತ್ರಿ ಶತಪ್ರಯತ್ನ ಮಾಡಿದಾಗ ನಾವೂಗಳು ಅಸಲಿಯಂತೆ ಕಂಡು ಬಂದಾಗ ಪೊಲಿಸರು ಪ್ಯಾ ಪ್ಯಾ ಮಾಡಿದ ಘಟನೆ ನಡೆಯಿತು.ಅನೇಕ ಅಧಿಕಾರಿಗಳಿಗೆ ಕರೆ ಮಾಡಿ ಅಸಲಿ ನಕಲಿ ಪರಿಕ್ಷೆ ಮಾಡಿದರು ಆದರೆ ಅಸಲಿ ಅಸಲೀನೆ…..
ಅಕ್ರಮ ಮರಳು ದಂಧೆಕೋರರಿಗೆ ಸಾಥ ನೀಡಿ ಪತ್ರಕರ್ತರನ್ನ ಹತ್ತಿಕ್ಕುವ ಕೆಲಸ ಅಲ್ಲಿರುವ ಪೋಲಿಸರು ಸಲೀಸಲಾಗಿ ಅಂಜಿಕೆ ಹಾಕಲು ಮುಂದಾದರು.ಮೊದಲು ಪತ್ರಕರ್ತರ ವಾಹನ ಒಳಗೆ ಹಾಕಿ ಕೇಸ್ ಮಾಡಿ ಆಮೆಲೆ ಮುಂದಿನ ಅಕ್ರಮಗಳ ಬಗ್ಗೆ ನೊಡೊಣ ಎಂದು ಏರುಧ್ವನಿಯಲ್ಲಿ ಮಾತನಾಡಿ ಕಾನೂನಿಗೆ ಅಗೌರವ ತೋರಿದ್ದಾನೆ ಈ ಪಿಎಸ್ಐ, ಆದರೆ ರಾತ್ರಿ ಸಮಯದಲ್ಲಿ ವಾಗ್ವಾದ ಮಾಡುವದು ಬೇಡವೆಂದು ಸುಮ್ಮನೇ ನಾವೂ ವಿಡಿಯೋ ದ್ರಷ್ಯಾವಳಿ ಹಾಗೂ ಪೋಲಿಸರ ಜೊತೆ ಮಾತನಾಡಿದ ಆಡಿಯೋವನ್ನ ಲಬ್ಯ ಮಾಡಿಕೊಂಡು ಮರಳಿ ಬೆಳಗಾವಿಗೆ ಬಂದೆವೂ ನಂತರ ನಮ್ಮ ಹಿರಿಯ ಪತ್ರಕರ್ತರ ಜೊತೆ ಚರ್ಚಿಸಲು ಮರುದಿನವೇ ಸುದ್ದಿ ಮಾಡುವ ಮೂಲಕ ಲಂಚಬಾಕ ಅಧಿಕಾರಿಗಳನ್ನ ಹಾಗೂ ಅಕ್ರಮ ಮರಳು ದಂದೆಕೋರರಿಗೆ ಎಚ್ಚರಿಸಿ ಅಕ್ರಮ ಮರಳು ದಂದೆಗೆ ಬ್ರೆಕ್ ಹಾಕಲು ಜಿಲ್ಲಾ ಪೋಲಿಸ ವರಿಷ್ಠ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದಾರೆ.ಇನ್ನೂ ರಾತ್ರಿ ಸಮಯದಲ್ಲಿ ಪತ್ರಕರ್ತರಿಗೆ ಬೆದರಿಕೆ ಹಾಕಿದ ಆ ಪಿಎಸ್ಐ ಹಾಗೂ ಮೂವರು ಪೋಲಿಸರ ಮೇಲೆ ನಿರ್ದ್ಯಾಕ್ಷಿಣ್ಯವಾಗಿ ಕಾನೂನಿನ ಕ್ರಮ ಕೈಗೊಂಡು, ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುತ್ತಾರೆಯೆ ಕಾದು ನೋಡಬೇಕಿದೆ,ಅಕ್ರಮಕ್ಕೆ ಬ್ರೆಕ್ ಹಾಕಿ ಎಂದು ಪ್ರಶ್ನೆ ಮಾಡಿದಾಗ ಪತ್ರಕರ್ತರ ಮೆಲೆ ಕೇಸ್ ಮಾಡಲು ಮುಂದಾದ ಆ ನೀಚ ಪೋಲಿಸರು ಯಾರೆಂಬುದನ್ನ ಹಾಗೂ ಅಕ್ರಮ ಮರಳು ದಂಧೆಕೋರರ ವಿಡಿಯೋ ಸಮೇತ ಗಾಡಿ ನಂಬರ ಮೂಲಕ ಹಾಗೂ ಹಲ್ಲೆಗೆ ಯತ್ನಿಸಿದ ಆ ಮರಳು ದಂಧೆಕೋರರ ಹೆಸರು ಸಮೇತ ಮೇಲಾಧಿಕಾರಿಗಳಿಗೆ ದೂರು ನೀಡುತ್ತೆವೆ.
ಠಾಣೆಯಲ್ಲಿ ದೂರು ನೀಡಲು ಹೆಳುವವರೇ ಪೊಲಿಸರು ಮತ್ತು ದೂರು ನೀಡಲು ಹೊದಾಗ ನಮ್ಮನ್ನೆ ಟಾರ್ಗೆಟ ಮಾಡಿ ಬೆದರಿಕೆ ಹಾಕುವದು ನಂದಗಡ ಪೋಲಿಸರ ಕೈ ಬಳೆ ಆಟ ಬಾ ಮಾಮಾ ಬಂಡಾರ ಹಚಕೋ ಬಳಿಗಿ ರೊಕ್ಕಾ ತಾ ಅಂದಾಂಗ ಪೋಲಿಸರ ವರ್ತನೆ ಮಾಡಿದ್ದಾರೆ. ಹೋದರೆ ಪತ್ರಕರ್ತರನ್ನ ಯಾವೂದೊ ಒಂದು ಅಪರಾಧ ಮಾಡಿ ಬಂದ ಹಾಗೇ ಪ್ರತಿಕ್ರಿಯೆ ಮಾಡಿದ ಪೋಲಿಸರು ಅಂದರೆ ನಾವೇನೂ ಕೊಲೆ ಸುಲಿಗೆ ದರೋಡೆ ಕಳ್ಳತನ ರಾಬರಿ ಈ ರೀತಿಯ ಯಾವೂದೆ ಕೇಸನಲ್ಲಿ ಸಿಲುಕಿಕೊಂಡಾಗ ಆರೋಪಿಗಳಿಗೆ ಟ್ರೀಟ ಮಾಡುತ್ತಾರೆಯೆ ಅದೇ ರೀತಿ ಅಕ್ರಮದ ವಿಡಿಯೋ ಮಾಡಿದವರಿಗೆ ಈ ರೀತಿ ವರ್ತನೆ ಮಾಡಿದ್ದಾರೆ ಪಿಎಸ್ಐ ಬಾದಾಮಿ ಹಾಗೂ ಮೂವರು ಪೋಲಿಸರು. ಬರುವ ಚಳಿಗಾಲ ಅಧಿವೇಶನದಲ್ಲಿ ಈ ಅಕ್ರಮ ಹಾಗೂ ಪೋಲಿಸರ ವಿರುದ್ದ ಸಮಗ್ರ ಚರ್ಚೆಗೆ ಜಿ ಪರಮೇಶ್ವರವರಿಗೆ ಮನವಿ ಮಾಡಲು ಮುಂದಾಗಿದ್ದಾರೆ ಪತ್ರಕರ್ತರು
ಜರ್ನಲಿಸ್ಟ್: ಚಂದ್ರು ತಳವಾರ