ಚಿಕ್ಕೋಡಿ: ಬುದ್ಧ, ಬಸವ, ಅಂಬೇಡ್ಕರ ರವರ ಸಿದ್ಧಾಂತಡಿಯಲ್ಲಿ, ಪ್ರಜಾಪ್ರಭುತ್ವ ಉಳಸಾಕ ಲೋಕ ಆಖಾಡಕ್ಕೆ ಕಲ್ಲೋಳಿಕರ್ ಎಂಟ್ರಿ..!
ಚಿಕ್ಕೋಡಿ ಲೋಕಸಭಾ ಚುನಾವಣೆ ಹಿನ್ನೆಲೆ, ಮಾಜಿ ಐಎಎಸ್ ಅಧಿಕಾರಿ ೨೦೨೩ರ ರಾಯಬಾಗ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕಲ್ಲೋಳಿಕರ್ ಇಂದು ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಮತ್ತೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
೮ ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಹಿರಿಯ ನಿವೃತ್ತ ಐಎಎಸ್ ಅಧಿಕಾರಿಗೆ ಬಾರಿ ಜನ ಬೆಂಬಲ ಕೂಡ ವ್ಯಕ್ತವಾಗುತ್ತಿದೆ. ಹಾಗಾಗಿ ರಾಷ್ಟ್ರೀಯ ಪಕ್ಷಗಳಿಗೆ ಈಗಾಗಲೇ ಶಂಬು ಕಲ್ಲೋಳ್ಕರ್ ತಲೆ ನೋವಾಗಿ ಕಾಡುತ್ತಿದ್ದಾರೆ.
ಕಳೆದ ಚುನಾವಣೆಯಲ್ಲಿ ಜಯದ ಅಂಚಿನಲ್ಲಿ ಸೋಲನ್ನ ಕಂಡ ಶಂಭು ಕಲ್ಲೋಳಿಕರ್ ಹಟಕ್ಕೆ ಬಿದ್ದ ಘಟಸರ್ಪದಂತೆ, ಜಾಣ ನಡೆಯನ್ನೇ ಅನುಸರಿಸುತ್ತಿದ್ದಾರೆ.
ಇದುವರೆಗೆ ಯಾವ ಗುಟ್ಟನ್ನು ಬಿಟ್ಟಕೊಡದ ಶಂಭು ಕಲ್ಲೋಳಿಕರ್, ಚಿಕ್ಕೋಡಿ ಲೋಕಸಭಾ ವ್ಯಾಪ್ತಿಗೆ ಬರುವ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೂ ಭೇಟಿ ನೀಡಿ, ವಿಚಾರವಾದಿಗಳನ್ನು,ರಾಜಕೀಯ ಚಿಂತಕರನ್ನು, ಹಾಗೂ ಎಲ್ಲಾ ಪ್ರಜ್ಞಾವಂತ ಮತದಾರರ ಮನಸ್ಸನ್ನು ಸೆಳೆಯುವಲ್ಲಿ, ಯಶಸ್ಸು ಆಗುತ್ತಿದ್ದಾರೆ. ಇನ್ನು ಕಲ್ಲೋಳಿಕರ್ ಅಭಿಮಾನಿಗಳು ದಿನದಿಂದ ದಿನಕ್ಕೆ, ಹೆಚ್ಚಾಗುತ್ತಿರುವ ಹಿನ್ನೆಲೆ, ರಾಷ್ಟ್ರೀಯ ಪಕ್ಷಗಳಿಗೆ ನಿದ್ದೆಗೆಡುವಂತೆ ಮಾಡಿದೆ. ಅದು ಏನೇ ಆಗಿರಲಿ ಕ್ಷೇತ್ರದ ಸರ್ವಾಂಗಿನ ಅಭಿವೃದ್ಧಿಗೆ,ಮತದಾರರು ಒಳ್ಳೆಯ ನಾಯಕನನ್ನು ಆಯ್ಕೆ ಮಾಡಬೇಕಾಗಿದೆ.
ಜರ್ನಲಿಸ್ಟ್: ಚಂದ್ರು ತಳವಾರ