ಭೂರುನಕಿ ಪಂಚಾಯಿತಿ ಪಿಡಿಒ ಹಾಗೂ ಅದ್ಯಕ್ಷರು; ಸಭಾಭವನ ಹಾಗೂ ರಸ್ತೆಗಳನ್ನ ನುಂಗಿದ್ದಾರೆಂಬ ಆರೋಪ ಜ್ಯೋತಿಭಾ ಬೆಂಡಿಗೇರಿ
ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನ ಭೂರುನಕಿ ಗ್ರಾಮ ಪಂಚಾಯಿತಿಯಲ್ಲಿ ಬಗೆದಷ್ಟು ಹಗರಣಗಳು ಬೆಳಕಿಗೆ ಬರುತ್ತಿವೆ ಹಲವಾರು ಕಾಮಗಾರಿಗಳನ್ನು ಮಾಡಿಸದೆ ಹಣವನ್ನು ಗ್ರಾಮ ಪಂಚಾಯಿತಿ ಆಡಳಿತ ನುಂಗಿ ಹಾಕಿದೆ ಎಂದು ಸಮಾಜ ಸೇವಕ ಜ್ಯೋತಿಭಾ ಬೆಂಡಿಗೇರಿಯವರು ಸಂಭಂದಪಟ್ಟ ದಾಖಲೆಗಳನ್ನ ಸಂಗ್ರಹಿಸಿ ಭ್ರಷ್ಟರ ಬೇಟೆಯಾಡಲು ತೊಡೆ ತಟ್ಟಿ ನಿಂತಿದ್ದಾರೆ.
ಹಲವಾರು ಭ್ರಷ್ಟ ಅಧಿಕಾರಿಗಳ ಅವ್ಯವರಗಳನ್ನು ಮಾಹಿತಿ ಹಕ್ಕು ಅಧಿನಿಯಮ ಕಾಯ್ದೆ ಪ್ರಕಾರ ಬಯಲಿಗೇಳೆದು ಇಲಾಖಾವಾರು ತನಿಖೆ ನಡೆಸುತ್ತಿರುವ ಬೆನ್ನಲ್ಲೆ ಭೂರಣಕಿ ಗ್ರಾಮ ಪಂಚಾಯತಿಯ ಕಟ್ಟಡದ ಮೇಲೆ ಸಭಾ ಗೃಹ ನಿರ್ಮಿಸಲಾಗಿದೆ ಖರ್ಚು ಕೂಡಾ ಹಾಕಲಾಗಿದೆ ಎಂಬ ಆರೋಪಕ್ಕೆ ಪೂರಕವಾಗಿ ಪರಿಸಿಲಿಸಿದಾಗ ಅಲ್ಲಿ ಯಾವ ಕಟ್ಟಡವು ಕಾಣಲಿಲ್ಲ
ಹಾಗೂ ಮಾಸ್ಕೆನಟ್ಟ ದಲಿತ ಕಾಲೋನಿಯಲ್ಲಿ ರಸ್ತೆ ಕಾಮಗಾರಿ ನಡೆದಿದೆ ಎಂದು ಬಿಲ್ಲು ಪಾಸಮಾಡಿ ಹಣ ತೆಗೆಯಲಾಗಿದೆ. ಎಂಬ ಆರೋಪವು ಕೂಡಾ ಪರಿಸಿಲಿಸಿದಾಗ ಮೇಲ್ನೋಟಕ್ಕೆ ಇಲ್ಲಿಯು ಭ್ರಷ್ಟಾಚಾರ ನಡೆದಿರುವದು ಕಂಡು ಬಂದಿದೆ.
ಹಾಗೂ ಇದೆ ಗ್ರಾಮದ ಪರಶುರಾಮ ಕೇರವಾಡಕರ್ ಮನೆಯಿಂದ ಯಶೋಧಾ ಗವಾಡೆ ಮನೆಯವರಿಗೆ ರಸ್ತೆ ನಿರ್ಮಾಣ ಮಾಡಿರುವದಾಗಿ ಕೂಡಾ ಬಿಲ್ಲು ಪಾಸ ಮಾಡಿ ಹಣ ನುಂಗಿ ಹಾಕಿದ್ದಾರೆ ಎಂಬ ಆರೋಪವು ಇದೆ.
ಈ ಪಂಚಾಯತಿಯಲ್ಲಿ ನಡೆದ ಇನ್ನೂ ಹಲವಾರು ರೀತಿಯ ಭ್ರಷ್ಟಾಚಾರಗಳನ್ನ ಬಯಲಿಗೆಳೆದು
ಸೂಕ್ತ ತನೇಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಮಾಹಿತಿ ಹಕ್ಕು ಕಾರ್ಯಕರ್ತ ಜ್ಯೋತಿಬಾ ಬೆಂಡಿಗೇರಿ ಆಗ್ರಹಿಸಿದ್ದಾರೆ.
ಈ ಕುರಿತು ತನಿಖೆ ಆರಂಭವಾಗಿದ್ದು ಭೂರುನಕಿ ಗ್ರಾಮ ಪಂಚಾಯಿತಿಗೆ ತಾಲೂಕಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಆಗಮಿಸಿ ತನಿಖೆ ನಡೆಸಿ ಸಂಭಂದಪಟ್ಟ ದಾಖಲೆಗಳನ್ನು ಸಂಗ್ರಹಿಸಿಕೊಂಡು ಹೋಗಿದ್ದಾರೆ ಈ ಎಲ್ಲಾ ದಾಖಲೆಗಳನ್ನ ಪರಿಸಿಲಿಸಿ ಭ್ರಷ್ಟರ ಮೇಲೆ ಕ್ರಮ ಕೈಗೋಳ್ಳುತ್ತಾರಾ ಎಂದು ಕಾದುನೋಡಬೇಕಾಗಿದೆ.


