ಗಸ್ಟೋಳಿ ದಡ್ಡಿ ಗ್ರಾಮದದಲ್ಲಿರುವ ಸಿಡಿ ಹುಡುಕಿಕೊಡಿ ಎಂದು ಕಾರ್ಯನಿರ್ವಾಹಕ ಅಧಿಕಾರಿಗಳ ಮೊರೆ ಹೊದ ಸಮಾಜ್ ಸೇವಕ ಜ್ಯೋತಿಬಾ ಬೆಂಡಿಗೇರಿ
ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನ ಭೂರುಣಕಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗಸ್ಟೋಳಿ ದಡ್ಡಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ದಾಖಲೆಗಳ ಪ್ರಕಾರ ಎಮ್.ಜಿ.ಎನ್.ಆರ್.ಜಿ.ಎ. ಯೋಜನೆಯಡಿ ಸನ್ 2023-24ರಲ್ಲಿ ಗಸ್ಟೋಳಿ ದಡ್ಡಿ ಗ್ರಾಮದ ಗಸ್ಟೋಳಿಗೆ ಹೋಗುವ ಮಾರ್ಗದ ಟಿ ಸಿ ಹತ್ತಿರ ಸಿ ಡಿ ನಿರ್ಮಾಣ ಮಾಡುವುದು” ಎಂದು ಕಡತಗಳಲ್ಲಿ ನಮೂದ ಇದ್ದು, ಆದರೆ ವಾಸ್ತವವಾಗಿ ಸದರಿ ಸ್ಥಳದಲ್ಲಿ ಯಾವುದೇ ಸಿ ಡಿ ನಿರ್ಮಾಣವಾಗಿರುವುದಿಲ್ಲ.
ಆದರೆ ಗ್ರಾಮ ಪಂಚಾಯತಿಯವರ ದಾಖಲೆ ಹೇಳುವ ಪ್ರಕಾರ ಸಿ ಡಿ ನಿರ್ಮಾಣದ ಕಾಮಗಾರಿಗೆ ರೂ.70855 ಹಣವನ್ನು ಸಪ್ಲಾಯ ಬಿಲ್ಲು ಅಂತಾ ಪಾವತಿಸಿರುತ್ತಾರೆ. ಮತ್ತು ಕೂಲಿ ಕಾರ್ಮಿಕರ ಹೆಸರಿನಲ್ಲಿ ರೂ.15900 ಹಣವನ್ನು MGNRG ಯೋಜನೆ ಅಡಿಯಲ್ಲಿ ಸಿ ಡಿ ನಿರ್ಮಾಣ ಮಾಡಿದ್ದೇವೆಂದು ಒಟ್ಟು 86755 ರೂಪಾಯಿ ಖರ್ಚು ಹಾಕಿ ಬಿಲ ತೆಗೆಯಲಾಗಿದೆ.
ಗಸ್ಟೋಳಿ ದಡ್ಡಿ ಗ್ರಾಮದದಲ್ಲಿರುವ ಸಿಡಿ ಹುಡುಕಿಕೊಡಿ ಎಂದು ಕಾರ್ಯನಿರ್ವಾಹಕ ಅಧಿಕಾರಿಗಳ ಮೊರೆ ಹೊದ ಸಮಾಜ್ ಸೇವಕ ಜ್ಯೋತಿಬಾ ಬೆಂಡಿಗೇರಿಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನ ಭೂರುಣಕಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗಸ್ಟೋಳಿ ದಡ್ಡಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ದಾಖಲೆಗಳ ಪ್ರಕಾರ ಎಮ್.ಜಿ.ಎನ್.ಆರ್.ಜಿ.ಎ. ಯೋಜನೆಯಡಿ ಸನ್ 2023-24ರಲ್ಲಿ ಗಸ್ಟೋಳಿ ದಡ್ಡಿ ಗ್ರಾಮದ ಗಸ್ಟೋಳಿಗೆ ಹೋಗುವ ಮಾರ್ಗದ ಟಿ ಸಿ ಹತ್ತಿರ ಸಿ ಡಿ ನಿರ್ಮಾಣ ಮಾಡುವುದು” ಎಂದು ಕಡತಗಳಲ್ಲಿ ನಮೂದ ಇದ್ದು, ಆದರೆ ವಾಸ್ತವವಾಗಿ ಸದರಿ ಸ್ಥಳದಲ್ಲಿ ಯಾವುದೇ ಸಿ ಡಿ ನಿರ್ಮಾಣವಾಗಿರುವುದಿಲ್ಲ.
ಕಾರಣ ಭ್ರಷ್ಟಾಚಾರ ನಡೆದಿದೆ ಎಂದು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸ್ಥಳ ಪರಿಶೀಲನೆ ಮಾಡಿ ತಮ್ಮ ಅಧೀನದ ಸಿಬ್ಬಂದಿಗಳು ನಿರ್ಮಿಸಿರುವ ಸಿ ಡಿಯನ್ನು ಹುಡುಕಿಕೊಡಬೇಕು ಮತ್ತು ಎಮ್.ಜಿ.ಎನ್.ಆರ್.ಜಿ.ಎ. ಕಾಯ್ದೆಯಡಿ ಇಲಾಖೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಜ್ಯೋತಿಬಾ ಬೆಂಡಿಗೇರಿ ಅವರು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಮಾಡಿದಾರೆ.