ಇಸ್ರೇಲ್ನ ಶಿಕ್ಷಕನೋರ್ವನ ಸಮಯ ಪ್ರಜ್ಞೆಯಿಂದ ಅನಾಹುತ ಒಂದು ತಪ್ಪಿದೆ.
ಸೂಫಾ ಕಿಬುಟ್ಜ್ ಗ್ರಾಮದತ್ತ ಉಗ್ರರು ಬಂದಿದ್ದಾರೆಂಬ ಅನುಮಾನ ಬರ್ತಿದ್ದಂತೆ ಎಚ್ಚೆತ್ತ ಶಿಕ್ಷಕ ಎಲಿಯನ್ ನತನ್ ಲಿಲೆಂಟಲ್ ನರಮೇಧವನ್ನ ತಪ್ಪಿಸಿದ್ದಾನೆ.
ತನ್ನ ಮನೆ ಕಿಟಕಿಯಿಂದಲೇ ನೋಡಿ ಇಬ್ಬರು ಉಗ್ರರನ್ನ ಪತ್ತೆ ಹಚ್ಚಿ, ಗುಂಡು ಹಾರಿಸಿ ಕೊಂದಿದ್ದಾನೆ. ಆನಂತರ ಕಿಬುಟ್ಜ್ನ ಅಲರ್ಟ್ ಸ್ಕ್ವಾಡ್ ಜಾಗೃತಗೊಳಿಸಿದ್ದಾನೆ. ಎಲ್ಲರೂ ತಂಡವಾಗಿ ಹೋಗಿ ಹತ್ತಕ್ಕೂ ಹೆಚ್ಚು ಉಗ್ರರ ಸದೆ ಬಡಿದಿದ್ದಾರೆ. ಸದ್ಯ ದೊಡ್ಡ ನರಮೇಧದಿಂದ ಊರನ್ನ ಉಳಿಸಿದ ರಿಯಲ್ ಹೀರೋ ಎಲಿಯನ್ ಬಗ್ಗೆ ಇಡೀ ಇಸ್ರೇಲ್ ದೇಶವೇ ಕೊಂಡಾಡ್ತಿದೆ.
ಸೂಫಾ ಕಿಬುಟ್ಜ್ನ ಒಬ್ಬ ವ್ಯಕ್ತಿಯನ್ನೂ ಅಪಹರಿಸಲು ಆಗಲಿಲ್ಲ. ಒಂದೇ ಒಂದು ಮನೆಯನ್ನೂ ಸುಡಲು ಉಗ್ರರಿಗೆ ಸಾಧ್ಯವಾಗಲಿಲ್ಲ.
ಫೈರಿಂಗ್ ವೇಳೆ ಸೂಫಾ ಕಿಬುಟ್ಜ್ನ ಮೂವರ ಹತ್ಯೆ ಮಾಡಲಾಗಿದೆ. ಎಲಿಯನ್ ನತನ್ ಲಿಲೆಂಟಲ್ ಸಾಹಸದಿಂದ ಜನರ ಜೀವ ಉಳಿದಿದೆ.