ಬೆಳಗಾವಿ: ಕಾರ್ಯನಿರತ ಪತ್ರಕರ್ತರ ಸಂಘಟನೆಗೆ, ಬೆಳಗಾವಿ ಜಿಲ್ಲಾ ಗೌರವ ಅಧ್ಯಕ್ಷರಾಗಿ ಈಶ್ವರ ಗುಡಜ ಆಯ್ಕೆ..!
ಬೆಳಗಾವಿ ನಗರದ ಸರ್ಕಿಟ್ ಹೌಸ್ ನಲ್ಲಿ ಕಾರ್ಯನಿರತ ಪತ್ರಕರ್ತರ ಸಂಪಾದಕರ ಹಾಗೂ ವರದಿಗಾರರ ಸಂಘ (ರಿ) ಇದರ ರಾಜ್ಯ ಪದಾಧಿಕಾರಿಗಳ ಸಭೆ ಜರುಗಿತು.
ಬಾನುವಾರ ನಡೆದ ಸಭೆಯಲ್ಲಿ ಬೆಳಗಾವಿ ಟೈಮ್ಸ ಪತ್ರಿಕೆ ಸಂಪಾದಕರಾದ ಈಶ್ವರ ಗುಡಜ ಅವರನ್ನು ಬೆಳಗಾವಿ ಜಿಲ್ಲಾ ಗೌರವ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.
ಅದೆ ರೀತಿ ನಿವೃತ್ತ ಸರ್ಕಾರಿ ಹೈಕೋರ್ಟ ವಕೀಲರಾದ ಚಿದಾನಂದ ಸರಿಕರ ಅವರನ್ನು ರಾಜ್ಯದ ಗೌರವ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಎಂದು ಅಧ್ಯಕ್ಷರಾದ ಶಶಿಕಾಂತ ಕಾಂಬಳೆ ,ಉಪಾಧ್ಯಕ್ಷರಾದ ಯಮನಪ್ಪ ಗುಣದಾಳ,ಉತ್ತರ ಕರ್ನಾಟಕ ಅಧ್ಯಕ್ಷರಾದ ಶಕ್ತಿಕುಮಾರ ಅವರು, ಆದೇಶ ಹೊರಡಿಸಿದರು. ಅದೇ ರೀತಿ ಇಂದಿನ ಸಭೆಗೆ, ಅನೇಕ ಪತ್ರಕರ್ತರು ವಿಚಾರವಾದಿಗಳು ಭಾಗವಹಿಸಿದ್ದರು.
ಸಭೆಯಲ್ಲಿ ಅನೇಕ ವಿಷಯಗಳ ಕುರಿತು ಚರ್ಚೆ ಮಾಡಲಾಯಿತು. ಹಾಗೂ ಬಾಗಲಕೋಟ ಬೆಳಗಾವಿ ಜಿಲ್ಲಾ ಹಾಗು ತಾಲ್ಲೂಕಿನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.