ಮೂಡಲಗಿ: ಹುಣಶ್ಯಾಳ ಗ್ರಾಮದಲ್ಲಿ ಕರುನಾಡು ಯುವ ಸಮಿತಿ ಗ್ರಾಮ ಘಟಕ ಉದ್ಘಾಟನೆ
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹುಣಶಾಳ ಗ್ರಾಮದಲ್ಲಿ ನೂತನ ಗ್ರಾಮ ಘಟಕ ಉದ್ಘಾಟನೆ ಮಾಡಲಾಯಿತು. ಇದೆ ಸಂದರ್ಭದಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷರು ಮಾತನಾಡಿ ಸ್ವಾರ್ಥ ಹಿತಾಸಕ್ತಿಗಾಗಿ ಜಾತಿ ಕಲಹಗಳು ನಡೆಯುತ್ತಲಿವೆ. ಕನ್ನಡದ ನೆಲ ಜಲಕ್ಕಾಗಿ’ ಹುಣಶ್ಯಾಳ ಜನತೆ ಒಂದಾಗಬೇಕಿದೆ. ಡಾಕ್ಟರ್ ಬಾಬಾ ಸಾಹೇಬ ಅಂಬೇಡ್ಕರ ರವರ ಕುರಿತು ಮಾತನಾಡುತ್ತಾ, ಈಗಿನ ಪೀಳಿಗೆ ಶಿಕ್ಷಣದ ಕಡೆಗೆ ಹೆಚ್ಚು ಒಲವು ತೋರಿಸಬೇಕು ಎಂದರು. ಶಾಲನ್ನು ಆಯುಧವಾಗಿ ಇಟ್ಟುಕೊಂಡು ಸರಕಾರಿ ಕಚೇರಿಗಳಲ್ಲಿ ಆಗದ ಕೆಲಸವನ್ನು ಸಂಘಟಿತರಾದಲ್ಲಿ ಮಾತ್ರ ಮಾಡಿಕೊಳ್ಳಲು ಸಾಧ್ಯವಿದೆ ಎಂದರು. ಅಷ್ಟೇ ಅಲ್ಲದೆ, ಕನ್ನಡ ಶಾಲೆಗಳ ಕುರಿತು ಮೆಚ್ಚುಗೆಯ ಮಾತುಗಳನ್ನು ವ್ಯಕ್ತಪಡಿಸಿದರು. ಕನ್ನಡಕ್ಕಾಗಿ ಹೋರಾಡಲು ನಾವು ಸದಾ ಸಿದ್ಧರಿರಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರು ಹಾಗೂ ಸಂಸ್ಥಾಪಕರಾದ ಬಸವರಾಜ್ ಇಳಿಗೇರ್ ಗ್ರಾಮ ಪಂಚಾಯತಿ ಸದಸ್ಯರಾದ ಅಜಿತ ಪಾಟೀಲ್ ಜಿಲ್ಲಾಧ್ಯಕ್ಷ ರಾಯಪ್ಪ ತಳವಾರ ಲಗಮಣ್ಣ ಇಳಿಗೆರ್ ಶಿವು ಮರಕುಂಬಿ ನಾಗಪ್ಪ ಬಬುಲಿ ಹುಕ್ಕೇರಿ ತಾಲೂಕ ಮಹಿಳಾ ಅಧ್ಯಕ್ಷರಾದ ದೀಪಾ ಹೋನಕುಪ್ಪಿ ಮೂಡಲಗಿ ತಾಲೂಕ ಅಧ್ಯಕ್ಷ ವರುಣ್ ದೊಡ್ಡಮನಿ ಉಪಾಧ್ಯಕ್ಷರಾದ ವಿವೇಕ್ ದಂಡಿನವರ್ ಹಾಗೂ ಗ್ರಾಮದ ಹಿರಿಯರು ಎಲ್ಲ ಸದಸ್ಯರು ಭಾಗವಹಿಸಿದ್ದರು.
ಜರ್ನಲಿಸ್ಟ್: ಚಂದ್ರು ತಳವಾರ