ಘಟಪ್ರಭಾ: ದೀನ ದಲಿತರ, ರೈತರ ಹಾಗೂ ಮಹಿಳೆಯರ ಪರವಾಗಿ ನಿಂತು ನಿಸ್ವಾರ್ಥ ಸೇವಾ ಮನೋಭಾವನೆಯಿಂದ ಕೆಲಸ ಮಾಡುತ್ತಿರುವ ಸಂಘಟನೆ ಎಂದರೆ ಅದು ಭೀಮ ರಕ್ಷಕ ಸಂಘಟನೆ ಮಾತ್ರ ಎಂದು ರಾಜ್ಯ ಸಂಘಟನಾ ಕಾರ್ಯದರ್ಶಿ ಸಹ ಕಾರ್ಯದರ್ಶಿ ಜಿಯಾವುಲ್ಲಾ ವಂಟಮುರಿ
ಅವರು ಘಟಪ್ರಭಾ ಪಟ್ಟಣದಲ್ಲಿ ನಡೆದ ಭೀಮ ರಕ್ಷಕ ಸಂಘಟನೆಯ ತಾಲೂಕಿನಲ್ಲಿ ಮೊದಲ ಕೇಂದ್ರ ಶಾಖೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಯುವಕರು ತತ್ವ ಸಿದ್ಧಾಂತಗಳನ್ನು ಅರಿತು ಕೆಲಸ ಮಾಡುವುದರಿಂದ ಯಾವುದೇ ಸಮಸ್ಯೆಗಳಿಗೆ ಈಡಾಗದೆ ಅನ್ಯಾಯದ ವಿರುದ್ಧ ಹೊರಾಡಬಹುದು ಎಂದರು.
ಕೇಂದ್ರ ಕಚೇರಿಯನ್ನು ಘಟಪ್ರಭಾ ಹುಕ್ಕೇರಿ ರಾಷ್ಟ್ರಿಯ ಹೆದ್ದಾರಿ ರಸ್ತೆಯ ಪಕ್ಕ ತೆರೆದರು. ಕಚೇರಿಯನ್ನು ಡಿ.ಎಂ.ದಳವಾಯಿ ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷರು ರೇಬ್ಬಣ್ಣ ಕಟ್ಟ ಮಾಡುವ ಮೂಲಕ ಕಚೇರಿ ಉದ್ಘಾಟಿಸಿದರು. ದಿವ್ಯ ಸಾನಿಧ್ಯ ಪರಮ ಪೋಜ್ಯ ಶ್ರೀ ಬಸವಚೇತನ ಮಹಾ ಸ್ವಾಮಿಗಳು ಹೇಬ್ಬಾಳ ಮಠ ಅವರು ವಹಿಸಿದ್ದರು.
ಕಾರ್ಯಕ್ರಮದ ನೇತೃತ್ವ ಕರ್ನಾಟಕ ಭೀಮ ರಕ್ಷಕ ಸಂಘಟನೆಯ ರಾಜ್ಯ ಅಧ್ಯಕ್ಷರಾದ ಈಶ್ವರ ಮಾರುತಿ ಗುಡಜ ಅವರು ಹಾಗು ಮಹಿಳಾ ಘಟಕದ ರಾಜ್ಯ ಅಧ್ಯಕ್ಷರಾದ ಮಂಜುಳಾ ರಾಮಗಾಣಟ್ಟಿ ಅವರು ವಹಿಸಿಕೊಂಡಿದ್ದರು.
ಕರ್ನಾಟಕ ಭೀಮ ರಕ್ಷಕ ಸಂಘಟನೆ ಕಾರ್ಯಕ್ರಮ ಬುದ್ದ, ಬಸವ, ಅಂಬೇಡ್ಕರರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ದೀಪ ಬೆಳೆಗುಸುವ ಮೂಲಕ ಕಾರ್ಯಕ್ರಮಕ್ಕೆ ಸುದೀರ ಜೋಡಟ್ಟಿ ಮಾಜಿ ಜಿಲ್ಲಾ ಪಂಚಾಯತ ಸದಸ್ಯರು ಹಾಗು ಆಗಮಿಸಿದ ಮುಖಂಡರು ಹಾಗು ಸಂಘಟನೆಯ ಪದಾದಿಕಾರಿಗಳು ಸಂಘದ ರಾಜ್ಯಾಧ್ಯಕ್ಷರಾದ ಈಶ್ವರ ಗುಡಜ ಅವರು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಆಗಮಿಸಿದ ಮುಖಂಡರಿಗೆ ಕಾರ್ಯಕರ್ತರಿಗೆ ಸನ್ಮಾನ ಮಾಡಲಾಯಿತು.
ಸಂಘಟನೆಯ ಮೂಲ ಉದ್ದೇಶ ಸಮಾನತೆ,ಸಹೋದರತೆ,ಸಾಮಾಜಿಕ ನ್ಯಾಯ ಸಮ ಸಮಾಜಕ್ಕಾಗಿ ಹೊರಡುವುದು ಸಂಘಟನೆಯ ಉದ್ದೇಶ ಎಂದು ಕರ್ನಾಟಕ ಭೀಮ ರಕ್ಷಕ ಸಂಘಟನೆಯ ಉದ್ದೇಶ ಎಂದು ಈಶ್ವರ ಗುಡಜ ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕೂಲಿ ಕಾರ್ಮಿಕರ ಹಿತಾಸಕ್ತಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋಪಾಲ ಮರಬಸನ್ನವರ, ಶಾಹು ಕೆಳಗೆರಿ, ಸಿಡ್ಲಪ್ಪ ಕೇಳಗೆರಿ, ಯಶವಂತ ಮೇಗೇರಿ, ಕಾಡೇಶ ಕೇಳಗೆರಿ,ಸಿಂದೆ ಸೇವಾದಳ ಘಟಪ್ರಭಾ, ಶ್ರೀಮತಿ ಪರವಿನ ಬೊಜಗಾರ ಮಹಿಳಾ ಘಟಕ ಜಿಲ್ಲಾ ಅಧ್ಯಕ್ಷರು, ಜಯಶ್ರೀ ಪರಶುರಾಮ ರಾಮಗಾಣಟ್ಟಿ, ಸಂಜು ಮೇಗೇರಿ ಸದಸ್ಯರು, ಜೀಯಾಉಲ್ಲ ಒಂಟಮೂರಿ, ಸಹ ಕಾರ್ಯದರ್ಶಿ, ಪ್ರತೀಕ ಪಾಂಡ್ರೆ.ರಾಜ್ಯ ಕಾರ್ಯದರ್ಶಿ, ವಿನೋದ ಗಸ್ತೇ, ಯುವ ಘಟಕ ಚಿಕ್ಕೋಡಿ ಅಧ್ಯಕ್ಷರು. ಪಿಂಟು ದಾವನೆ ರಾಯಬಾಗ ತಾಲೂಕ ಅಧ್ಯಕ್ಷರು, ಕುತುಬುದೀಣ್ಣ ಜಮಾದಾರ ಬೆಳಗಾವಿ ಅಲ್ಪ ಸಂಖ್ಯಾತ ಘಟಕ ಜಿಲ್ಲಾ ಅಧ್ಯಕ್ಷರು, ರೋಹಿತ ಗುಡಜ ಸದಸ್ಯರು, ರಮೇಶ ಆಲೂರ ಸದಸ್ಯರು, ಮಾನಿಂಗ ಮರೇನ್ನವರ, ಹಾಗೂ Tv3 ಕನ್ನಡ ವಾಹಿನಿಯ ಮುಖ್ಯಸ್ಥ ಚಂದ್ರು ತಳವಾರ, ಸುನಿಲ ಪಾತ್ರುಟ, ಯುವರಾಜ ಮಾದಿಗರ, ದೇವರಾಜ ದಾವನೆ, ವಿವೇಕಾನಂದ ಕತ್ತಿ, ಅಡಿವೇಪ್ಪ ಹರಿಜನ,ಸುಬ್ರಾಯ ಮೇಗೇರಿ,ಸುನಿಲ ಪಾತ್ರೂಟ, ಉಪಸ್ಥಿತರಿದ್ದರು.