ಹುಕ್ಕೇರಿ: ಡಾಂಗೆ ಆಹಾರ ಇಲಾಖೆ ಶಿರಸ್ತೆದಾರ, ಅವುಂದೆನ ಬಾಯೊ ಬಚ್ಚಲ ಕುಣಿಯೊ..!?
ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಆಹಾರ ಇಲಾಖೆಯ ಶಿರಸ್ತೆದಾರನಿಂದ ಖ್ಯಾತ ಪತ್ರಕರ್ತ ಬ್ರಹ್ಮಾನಂದ ಪತ್ತಾರ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ದಮ್ಕಿ ಹಾಕಿರುವುದು ಬೆಳಕಿಗೆ ಬಂದಿದೆ.
ಬಡವರ, ರೇಷನ್ ಕಾರ್ಡ್ ಸಂಬಂಧಿತ ವಿಷಯವಾಗಿ ದೂರವಾಣಿ ಸಂಭಾಷಣೆಯಲ್ಲಿ ಆಹಾರ ಇಲಾಖೆ ಶಿರಸ್ತೆದಾರ ಲೋಕೇಶ್ ಡಾಂಗೆ ತಾನೊಬ್ಬ ಅಧಿಕಾರಿಯನ್ನೋದನ್ನೆ ಮರೆತು ಬಾಯಿಗೆ ಬಂದಂತೆ ಸ್ಥಳಿಯ ಪತ್ರಕರ್ತನನ್ನು ಆವಾಚ್ಯ ಶಬ್ದಗಳಿಂದ ನಿಂದಿಸಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.
ಏಕಾಏಕಿ ಏರ್ ಧ್ವನಿಯಲ್ಲಿ ಗದರಿಸಿ ಹೊಟ್ಟೆಗೆ ಏನ ತಿಂತೀರಿ, ಅನ್ನಾ ತಿಂತಿರಾ..? ನಾಳೆ ಡಿಡಿ ಸಾಹೇಬರು ವಾರ್ತಾ ಇಲಾಖೆಗೆ ಹೋಗುತ್ತೀನಿ ಪ್ರೆಸ್ ದವರು ಕಾಡುಸ್ತಾ ಇದ್ದಾರೆ ಎಂದು ಹೇಳತಿನಿ ಅಂತಾ ಬಡ ಬಡಿಸಿದ್ದಾನೆ.
ಈತ ಪತ್ರಕರ್ತರಿಗೆ ಈ ರೀತಿ ಮಾತನಾಡೊದಾದ್ರೆ ಸರ್ವೆ ಸಾಮಾನ್ಯ ಸಾರ್ವಜನಿಕರ ಗತಿ ಏನೆಂಬುದು ಅರಿವೂ ಮೂಡಬೇಕಿದೆ. ಈ ಕುರಿತು ತಹಶಿಲ್ದಾರರಿಗೆ ಮೆಸೆಜ ಮೂಲಕ ಮಾಹಿತಿ ನೀಡಿದರು ಕ್ಯಾರೆ ಎಂದಿಲ್ಲ.
ಹಾಗಾದ್ರೆ ಪತ್ರಕರ್ತರಿಗೆ ಇಲ್ವ ಎಳ್ಳಷ್ಟು ಮರ್ಯಾದೆ..?
ಬೇಜವಬ್ದಾರಿ ಅಧಕಾರಿಗಳಿಂದ ಕಂಗಾಲಾದ ಬಡ ರೈತರು ತಮ್ಮದೆ ಕಾರ್ಡುಗಳ ಅಪ್ರುವಲ್ ಬೇರೊಂದು ಇಲ್ಲ ನಂಬರ ಹಚ್ವಿದ್ರೂ ಇಲ್ಲ.
ನಾನೊಬ್ಬ ಆಹಾರ ಇಲಾಖೆಯ ಶಿರಸ್ತೆದಾರ ನಮ್ಮ ಕೈ ಕೆಳಗೆ ಕೆಲಸ ಮಾಡುವ ಆಹಾರ ಇನ್ಸ್ಪೆಕ್ಟರ್ ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಹಾಗಾಗಿ ನಾನು ಆ ಟೆನ್ಸನಲ್ಲಿ ಇದ್ದೆ ಆಗ ಪತ್ರಕರ್ತ ಕರೆ ಮಾಡಿದ್ದರು. ಆಗ ನಾನು ಇವರ ಸಿಟ್ಟನ್ನ ಆ ಪತ್ರಕರ್ತರ ಮೇಲೆ ಸಿಟ್ಟಿಗೆ ಬರಬೇಕಾದ ಪರಿಸ್ಥಿತಿ ಬಂತು ಎಂದು ಹಾರಿಕೆ ಉತ್ತರ ಕೊಟ್ಟಿದ್ದಾರೆ.
ಈ ಆಹಾರ ಇಲಾಖೆ ಶಿರಸ್ತೆದಾರ ಲೊಕೆಶ ಡಾಂಗೆ.
ಇಂತಹ ಅಧಿಕಾರಿಗಳನ್ನ ಕೂಡಲೆ ವಜಾ ಗೊಳಿಸಿ ಸಾರ್ವಜನಿಕ ಹಿತದ್ರಷ್ಟಿಯಿಂದ ಕೆಲಸ ಮಾಡುವ ಶಿರಸ್ತೆದಾರರನ್ನು ನೆಮಿಸಬೇಕಿದೆ.
ಇನ್ನೂ ಹೆಚ್ಚಿನ ಮಾಹಿತಿಯೊಂದಿಗೆ ಈ ಶಿರಸ್ತೆದಾರ ಹಾಗೂ ಆಹಾರ ಇಲಾಖೆ ಆಪರೇಟರ್ ಗಳ ಕರ್ಮಕಾಂಡವನ್ನ ಬಯಲಿಗೆಳೆಯಲು ಶೀಘ್ರದಲ್ಲೇ ಟಿವಿ೩ ಕನ್ನಡ ನ್ಯೂಸ್ ವೀಕ್ಷಿಸಿ!!
ಜರ್ನಲಿಸ್ಟ್: ಚಂದ್ರು ತಳವಾರ