ಹುಕ್ಕೇರಿ: ಡಾಂಗೆ ಬಾಯಿ ಬಡುಕ ಶಿರಸ್ತೆದಾರನಿಗೆ ಶೋಕಾಸ ಚಾಟಿ ಬಿಸಿದ ಆಹಾರ ಅಧಿಕಾರಿಗಳು..!
ಬೆಳಗಾವಿ ಜಿಲ್ಲೆ, ಹುಕ್ಕೇರಿ ತಾಲೂಕಿನ ಆಹಾರ ಇಲಾಖೆ ಶಿರಸ್ತಿದಾರ ಡಾಂಗೆ, ಕೆಲವು ದಿನಗಳ ಹಿಂದಷ್ಟೇ, ಪೋನಿನ ಸಂಭಾಷಣೆಯಲ್ಲಿ, ರಾಜಕೀಯ ಮೌಲ್ಯ ದಿನಪತ್ರಿಕೆಯ ಜಿಲ್ಲಾ ವರದಿಗಾರ ಬ್ರಹ್ಮಾನಂದ ಪತ್ತಾರ ಅವರಿಗೆ, ಏರ್ ಧ್ವನಿಯಲ್ಲಿ, ಮೆದುಳು ನಾಲಿಗೆಗೆ ಸಂಪರ್ಕವಿಲ್ಲದಂತೆ, ಅಡ್ಡಡ್ದಾಗಿ ನಾಲಿಗೆ ಹರಿಬಿಟ್ಟು ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿ, ಪ್ಯಾ… ಪ್ಯಾ… ಅಂದಿದ್ದರ ಕುರಿತು,
ಟಿವಿ3 ಕನ್ನಡ ವಾಹಿನಿಯಲ್ಲಿ ಸುದ್ದಿ ಪ್ರಸಾರವಾಗಿ ಸಾಕಷ್ಟು ವೈರಲ್ ಆಗಿತ್ತು.
ಹಾಗು ಟಿವಿ3 ಸುದ್ದಿಯನ್ನು ವೀಕ್ಷಿಸಿದ ಸಾಕಷ್ಟು ಅಭಿಮಾನಿಗಳು, ಮತ್ತು ಸಾರ್ವಜನಿಕರು, ಶಿರಸ್ತೆದಾರನಿಗೆ ಕಾಮೆಂಟ್ ಮೂಲಕ ಛೀಮಾರಿ ಹಾಕಿ, ವಾಹಿನಿಗೆ ಧನ್ಯವಾದ ತಿಳಿಸಿದ್ದರು.
ಅಷ್ಟೇ ಅಲ್ಲದೆ ಟಿವಿ3 ಕನ್ನಡ ವಾಹಿನಿಯು ಸುದ್ದಿ ಬಿತ್ತರಿಸಿದ್ದನ್ನು ಗಮನಿಸಿದ ಶ್ರೀ ಮಲ್ಲಿಕಾರ್ಜುನ ನಾಯಕ ಉಪನಿರ್ದೇಶಕರವರು ತಕ್ಷಣ ಎಚ್ಚೆತ್ತು, ಹುಕ್ಕೇರಿಯ ಆಹಾರ ಶಿರಸ್ತೆದಾರನಿಗೆ ಶೋಕಾಶ ನೋಟಿಸ್ ನೀಡುವುದರ ಮುಖಾಂತರ, ಡಾಂಗೆ ಬಾಯಿಗೆ ಬೀಗ ಜಡೆದಿರುತ್ತಾರೆ.
ಇದೀಗ ವಡಕು ಬಾಯಿ ಶಿರಸ್ತೆದಾರನಿಗೆ “ಬಾಯಿ ಮಾಡಿತು ಬೇತಾಳ, ಬೆನ್ನಿಗೆ ತತ್ತು ಲಾತಾಳ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
ವಡಕು ಬಾಯಿ ಅಧಿಕಾರಿಗೆ, ನೋಟಿಸ್ ಕೊಡಿಸಿದ್ದಸ್ಟೆ ಅಲ್ಲದೆ, ಆತನ ಕರಾಳುಮುಖ ಅನಾವರಣಗೊಳಿಸಿದ್ದು ಕೂಡಾ ನಮ್ಮ ವಾಹಿನಿಯ ವೀಕ್ಷಕರಿಗೆ ಹೆಮ್ಮೆಯ ವಿಷಯವಾಗಿದೆ.
ತಾನೊಬ್ಬ ಸರಕಾರಿ ನೌಕರ, ಅದರಲ್ಲಿಯು ಶಿರಸ್ತೆದಾರ, ಎನ್ನುವುದನ್ನೇ ಮರೆತು, ಮೆರೆಯುತ್ತಿದ್ದ ಡಾಂಗೆ, ಇನ್ನು ಮುಂದಾದರು ಶಿಸ್ತು ಪಾಠ ಕಲಿತು ಸಾರ್ವಜನಿಕರೊಂದಿಗೆ ಪರಿಜ್ಞಾನದಿಂದ ಮಾತನಾಡಬೇಕಿದೆ.
ಇದು ಟಿವಿ3 ವಾಹಿನಿಯ ಇಂಪ್ಯಾಕ್ಟ್ ಸುದ್ದಿ ಆಗಿರುತ್ತದೆ.
ಕಾರಣ ಕೇಳಿ ಶೋಕಾಸ್ ನೋಟಿಸ್ ಗೆ ಮರು ಉತ್ತರ ನೀಡುವಲ್ಲಿ ವಿಫಲ ಇಂತಹ ಬೇಜವಬ್ದಾರಿ ಅಧಿಕಾರಿಯನ್ನು ಸರಕಾರ ಮತ್ತು ಸಂಬದಪಟ್ಟ ಮೇಲಾಧಿಕಾರಿಗಳು ಕೂಡಲೆ ವಜಾಗೊಳಿಸಬೇಕಿದೆ.
ಈತನ ಕುರಿತು ಬಡವರ, ರೇಷನ್ ಕಾರ್ಡ್ ವಿಷಯದಲ್ಲಿ ಗೋಲ್ಮಾಲ್ ಮಾಡಿದ್ದರ ಸಾಕಷ್ಟು ಮಾಹಿತಿ ಲಭ್ಯವಿದ್ದು, ಅತಿ ಶೀಘ್ರದಲ್ಲಿ ಶಿರಸ್ತೆದಾರ ಲೋಕೇಶ ಡಾಂಗೆ ಬಣ್ಣ ಬಟಾ ಬಯಲು ಮಾಡುತ್ತೇವೆ ಕಾಯ್ದು ನೋಡಿ.!
ಜರ್ನಲಿಸ್ಟ್: ಚಂದ್ರು ತಳವಾರ