ಹುಬ್ಬಳ್ಳಿ ಮರ್ಯಾದೆ ಹತ್ಯೆ: ಮೇಲ್ಜಾತಿ ಯುವತಿಯನ್ನ ಮದ್ವೆಯಾಗಿದ್ದಕ್ಕೆ ಲಿಂಗದೀಕ್ಷೆ ಪಡೆದಿದ್ದ ದಲಿತ ಕುಟುಂಬ
ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದೆ ಹತ್ಯೆ ಇಡೀ ಮಾನವ ಕುಲವೇ ನಾಚುವಂತಹ ಅಮಾನವೀಯ ಘಟನೆ.
ಅಂತರ್ಜಾತಿ ವಿವಾಹವಾಗಿದ್ದಕ್ಕೆ ಗರ್ಭಿಣಿ ಮಗಳನ್ನೇ ಹೆತ್ತ ತಂದೆ ಬರ್ಬರ ಕೊಲೆ ಮಾಡಿದ್ದ. ಈ ಘಟನೆ ಇಡೀ ದೇಶಾದ್ಯಂತ ದೊಡ್ಡ ಸದ್ದು ಮಾಡಿದೆ. ಮೇಲ್ಜಾತಿ ಯುವತಿಯನ್ನು ಮದುವೆಯಾಗಿದ್ದಕ್ಕೆ ದಲಿತ ಕುಟುಂಬ ಲಿಂಗದೀಕ್ಷೆ ಪಡೆದುಕೊಂಡು ಬಸವತತ್ವ ಪಾಲಿಸುತ್ತಿತ್ತು ಎನ್ನುವ ಅಂಶ ಬೆಳಕಿಗೆ ಬಂದಿದೆ.
ಹುಬ್ಬಳ್ಳಿ, (ಡಿಸೆಂಬರ್ 27): ಇದೇ ಡಿಸೆಂಬರ್ 21ರಂದು ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ನಡೆದ ಮರ್ಯಾದೆ ಹತ್ಯೆ (Hubballi Honour Killing Case) ದೇಶವೇ ಬೆಚ್ಚಿಬೀಳಿಸಿದೆ. ಇನಾಂವೀರಾಪುರ ಗ್ರಾಮದ ದಲಿತ ಸಮುದಾಯದ (Dalit Family )ವಿವೇಕಾನಂದ (vivekananda) ಎನ್ನುವ ಯುವಕನನ್ನು ಮೇಲ್ಜಾತಿಯ ಯುವತಿ ಮಾನ್ಯ ಪ್ರೀತಿಸಿ ಮದ್ವೆಯಾಗಿದ್ದು, ಇದು ಮಾನ್ಯಳ ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿತ್ತು.
ಹೀಗಾಗಿ ಮಾನ್ಯಳ ತಂದೆ, ಯುವಕನ ಮನೆಗೆ ನುಗಿದ್ದು, ಆರು ತಿಂಗಳು ಗರ್ಭಿಣಿ ಎನ್ನುವುದನ್ನು ನೋಡದೇ ಮಾನ್ಯಳನ್ನು ಕೊಚ್ಚಿ ಕೊಂದಿದ್ದಾನೆ. ಆದ್ರೆ, ಇದೀಗ ಹೊಸ ಅಂಶವೊಂದು ಬೆಳಕಿಗೆ ಬಂದಿದೆ. ಮೇಲ್ಜಾತಿ ಯುವತಿಯನ್ನು ಮದುವೆ ಆಗಿರುವುದಕ್ಕೆ ವಿವೇಕಾಂನದ ದಲಿತ ಸಮುದಾಯವಾಗಿದ್ದರೂ ಸಹ ಲಿಂಗದೀಕ್ಷೆ ಪಡೆದುಕೊಂಡಿದ್ದು, ಬಸವ ತತ್ವ ಪಾಲನೆ ಮಾಡುತ್ತಿತ್ತು ಎನ್ನುವುದನ್ನು ಸ್ವತಃ ಸಚಿವ ಸಂತೋಷ್ ಲಾಡ್ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಗ್ರಾಮದಲ್ಲಿ ಭಯದ ವಾತಾರವಣ
ಘಟನೆ ನಡೆದು ಒಂದು ವಾರವಾದರೂ ಸಹ ಇನಾಂವೀರಾಪುರ ಗ್ರಾಮದಲ್ಲಿ ಭಯದ ವಾತಾರವಣ ಕಡಿಮೆಯಾಗಿಲ್ಲ. ಇತ್ತ ವಿವೇಕಾನಂದ ಕುಟುಂಬ ಆಸ್ಪತ್ರೆಯಲ್ಲಿದ್ದರೆ, ಆರೋಪಿ ಪ್ರಕಾಶಗೌಡ್ ಮತ್ತು ಆತನ ಅನೇಕ ಸಂಬಂಧಿಗಳು ಜೈಲಿನಲ್ಲಿದ್ದಾರೆ. ಇನ್ನು ಅನೇಕರು ಗ್ರಾಮ ಬಿಟ್ಟು ಹೋಗಿದ್ದು, ಪ್ರಕಾಶಗೌಡ ಮನೆಗೆ ವಾರದಿಂದ ಬಿದ್ದಿರೋ ಬೀಗ ತಗೆದಿಲ್ಲ. ಇನ್ನೊಂದೆಡೆ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಮುಂದುರೆದಿದೆ. ಹೀಗಾಗಿ ಗ್ರಾಮದ ಜನರು ಯಾರು ಕೂಡ ಈ ಘಟನೆ ಬಗ್ಗೆ ಮಾತನಾಡುತ್ತಿಲ್ಲ. ಅಲ್ಲದೇ ಹೊರಗಡೆ ಬರಲು ಸಹ ಭಯ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಒಟ್ಟಿನಲ್ಲಿ ಇನಾಂವೀರಾಪುರ ಗ್ರಾಮದಲ್ಲಿ ಇನ್ನು ಆತಂಕದ ವಾತಾವರಣವಿದೆ. ಈ ನಿಟ್ಟಿನಲ್ಲಿ ಪೊಲೀಸರು ವಿವೇಕಾನಂದ ಕುಟುಂಬಕ್ಕೆ ಸೂಕ್ತ ಬಂದೂಬಸ್ತ್ ನೀಡಬೇಕಿದೆ.


