ಅವರಗೋಳ: ೭೭ನೇ ಸ್ವಾತಂತ್ರ್ಯ ಮಹೊತ್ಸವ ಅಂಗವಾಗಿ ಗಡಿ ಕನ್ನಡಿಗ ಪ್ರದೇಶ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಇವರ ನೇತ್ರತ್ವದಲ್ಲಿ ನಡೆದ ಯುವಜನ ಮೇಳ ಕಾರ್ಯಕ್ರಮ!
ಹೌದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅವರಗೋಳ ಗ್ರಾಮದ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡ ಯುವಜನ ಮೇಳ ಕಾರ್ಯಕ್ರಮ!
ಶ್ರೀ ಬಸವೇಶ್ವರ ರಾಧಾಕೃಷ್ಣ ನಾಟ್ಯ ಸಂಘ, ಅವರಗೋಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೊಗತ್ವದಲ್ಲಿ,
77ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ
ಗಡಿ ಕನ್ನಡ ಸಾಂಸ್ಕೃತಿಕ ಸಂಭ್ರಮ ಹಾಗೂ ವಿಚಾರ ಸಂಕಿರ್ಣ ಕಾರ್ಯಕ್ರಮ ೨೦೨೩-೨೪,ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಶೋಕ ಅಂಕಲಿ ಮಾತನಾಡಿ ಕರ್ನಾಟಕ ಗಡಿ ಪ್ರದೇಶದ ಕುರಿತು ಮಾತನಾಡಿದರು.
ಈಗಾಗಲೇ ರಾಜ್ಯದ ಗಡಿ ಬಾಗಗಳಲ್ಲಿ ಕನ್ನಡ ಭಾಷೆ ಕನ್ನಡ ಸಂಸ್ಕ್ರತಿ ನಶಿಸಿ ಹೊಗುತ್ತಿವೆ ಉದಾಹರಣೆಗೆ ಬೆಳಗಾವಿಯಲ್ಲಿ ಮರಾಠಿ ಭಾಷೀಕರು ಹೆಚ್ಚಾಗಿ ಕರ್ನಾಟಕ ನಮ್ಮದೇ ಎಂದು ಈಗ ಸಾಕಷ್ಟು ರಾದ್ದಾಂತಗಳಾಗಿವೆ.
ಮತ್ತೆ ಯಳ್ಳುರು ನಮ್ಮ ಬೆಳಗಾವಿ ಜಿಲ್ಲೆಯ ಒಂದು ಹಳ್ಳಿ ಯಳ್ಳೂರು ಆದರೆ ಮರಾಠಿ ಭಾಷೆ ಮಾತನಾಡುತ್ತಾ ಇದು ಮಹಾರಾಷ್ಟ್ರ ಎಂದು ಕ್ಯಾತೆ ತೆಗೆದು ರಾಜ್ಯಕ್ಕೆ ಚ್ಯುತಿ ತರುವ ಕೆಲಸಗಳು ಬಹಳಷ್ಟು ಆಗಿದ್ದಾವೆ.
ಹೀಗಾಗಿ ನಾವು ಕನ್ನಡ ಬೆಳಿಸಿ ಕನ್ನಡ ಉಳಿಸಿ ಎಂದು ಮಾತನಾಡಿದರು,ಅದೇ ರೀತಿ ಅನೇಕ ಮುಖಂಡರುಗಳು ಭಾಗವಹಿಸಿ ಕನ್ನಡ ನಾಡು ನುಡಿ ಜಲ ಗಡಿ ಪ್ರದೇಶದ ಬಗ್ಗೆ ಮಾತನಾಡಿ ಕನ್ನಡಿಗರನ್ನ ಎಚ್ಚರಿಸಿದರು.
ಈ ಕಾರ್ಯಕ್ರಮದಲ್ಲಿ ಅಶೊಕ ಅಂಕಲಗಿ, ವಿರಕ್ತ ಮಠ ಘೊಡಗೇರಿ ಕಾಶಿನಾಥ ಮಹಾ ಸ್ವಾಮಿಗಳು,ಜಯಾನಂದ ಮಾದರ, ಬಸವಾರಜ ಪಾಟೀಲ,ಬಸನಿಂಗ ಕರಗುಪ್ಪಿ,ರಮೇಶ ಬಾಳೊಜಿ,ಸುರೇಶ ಸರನಾಯಿಕ,ಬಸಗೌಡಾ ಪಾಟೀಲ, ಸದಾಶಿವ ಕರಗುಪ್ಪಿ,ಬಾಳೊಜಿ,ಶಂಕರ ಅಂಕಲಿ,ಮೌನೇಶ ಬಡಿಗೇರ,ತಮ್ಮಣ್ಣ ಸಾಹುಕಾರ, ರಾಮಚಂದ್ರ ಪತ್ತಾರ,ಘೋಳಪ್ಪ ಅಂಕಲಿ,ಅಕ್ಕಪ್ಪ ಪದ್ಮನ್ನವರ,ಬಡಿಗೆರ ಶಿಕ್ಷಕರು ಹೀಗೇ ಅನೇಕ ಮುಖಂಡರುಗಳು ಭಾಗವಿಹಿಸಿದ್ದರು.
ಕಾರ್ಯಕ್ರಮದಲ್ಲಿ ರಾದಾನಾಟಕ ಬಜನೆ ಮಕ್ಕಳಿಂದ ನಾಟಕ ಹಿಗೆ ಅನೆಕ ಕಾರ್ಯಕ್ರಮಗಳನ್ನ ಆಯೋಜಿಸಲಾಗಿತ್ತು ಈ ಸಂದರ್ಭದಲ್ಲಿ ಬೆಳಂ ಬೆಳಿಗ್ಗೆ ರಾಧಾ ನಾಟಕ ಮಾಡಿ ಸಾರ್ವಜನಿಕರನ್ನ ಗಮನ ಸೆಳೆಯುವಲ್ಲಿ ಮುಂದಾದರು.
–ವರದಿ: ಚಂದ್ರು ತಳವಾರ-