ಇಲ್ಲಿ ಮದುವೆಗೆ ಹೆಣ್ಣು ಸಿಗುತ್ತಿಲ್ಲ, ಅಲ್ಲಿ ಯುವತಿಯರು ಮದುವೆ ಆಗಲು ಪುರುಷರೇ ಇಲ್ಲದ ಊರು!?…
ಬೆಂಗಳೂರ,Tv3 news kannada: ಕರ್ನಾಟಕದಲ್ಲಿ ಮದುವೆಯಾಗುವಂತ ಹೆಣ್ಣು ಮಕ್ಕಳಿಗೆ ಭಾರೀ ಬೇಡಿಕೆ ಇದೆ, ಹೆಣ್ಣುಗಳು ಸಿಗುತ್ತಿಲ್ಲ ನಮಗೆ ಹೆಣ್ಣುಗಳನ್ನು ಕೊಡಿಸಿ ಎಂದು ಸರ್ಕಾರಗಳಿಗೆ ಯುವಕರು ಮನವಿ ಮಾಡುವುದು ಒಂದು ಕಡೆಯಾದರೆ ಇನ್ನೊಂದು ಮದುವೆ ಮಾಡಿಕೊಳ್ಳಲು ಪುರುಷರೇ ತಿಗುತ್ತಿಲ್ಲ, ಪುರುಷರೇ ಇಲ್ಲ ಊರಲ್ಲಿ ಮದುವೆ ಮಾಡಿಕೊಳ್ಳುವಂತ ಯುವಕರಿಗೆ ಭಾರೀ ಬೇಡಿಕೆ ಇದೆ ಎನ್ನುವಂತ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬ್ರೆಜಿಲ್ ದೇಶದ ಗ್ರಾಮವೊಂದರಲ್ಲಿ ಸುಂದರ ಯುವತಿಯರಿದ್ದಾರೆ. ಅಂತಹ ಯುವತಿಯರಿಗೆ ಮದುವೆ ಗಂಡು ಸಿಗುತ್ತಿಲ್ಲ. ಅಂತಹ ಸ್ಥಿತಿ ಆ ಗ್ರಾಮದಲ್ಲಿ ನಿರ್ಮಾಣವಾಗಿದೆ. ಯುವಕರು ಸಿಗದ ಗ್ರಾಮದಲ್ಲಿ ಮದುವೆಗೆ ವರನನ್ನು ಹುಡುಕುತ್ತಿದ್ದಾರೆ. ಆದರೆ ಮದುವೆಯಾಗಬೇಕೆಂಬ ಅವರ ಆಸೆ ಈಡೇರುತ್ತಲೇ ಇಲ್ಲ. ಬ್ರೆಜಿಲ್ನ ನೋಯ್ವಾ ಎಂಬ ಹಳ್ಳಿ ಬೆಟ್ಟಗಳ ಮೇಲಿದೆ. ಇಲ್ಲಿ ಸಾಕಷ್ಟು ಸುಂದರ ಯುವತಿಯರು ಇದ್ದಾರೆ ಮತ್ತು ಅವರು ಒಂಟಿ ಪುರುಷರನ್ನು ಹುಡುಕುತ್ತಿದ್ದಾರೆ ಎನ್ನಲಾಗಿದೆ.
ಬ್ರೆಜಿಲ್ನ ನೋಯ್ವಾ ಗ್ರಾಮದಲ್ಲಿ ಸುಮಾರು 600 ಮಂದಿ ಮದುವೆಯಾಗದ ಯುವತಿಯರು ವಾಸಿಸುತ್ತಿದ್ದು ತಮ್ಮನ್ನು ಮದುವೆಯಾಗಲು ಇಚ್ಛಿಸುವವರಿಗೆ ಹಣ ಕೊಡಲೂ ಇವರು ಸಿದ್ಧರಿದ್ದಾರಂತೆ. ಇಷ್ಟೆಲ್ಲಾ ಆದರೂ ಯಾರೂ ಇವರನ್ನು ಮದುವೆಯಾಗಬಲು ಮುಂದೆ ಬರುತ್ತಿಲ್ಲ. ಈ ಮಹಿಳೆಯರು ವಾಸಿಸುವ ಸ್ಥಳದ ಲಿಂಗ ಅನುಪಾತವು ಉತ್ತಮವಾಗಿಲ್ಲ. ಇಲ್ಲಿ ಹುಡುಗರ ಸಂಖ್ಯೆ ಹುಡುಗಿಯರಿಗಿಂತ ಬಹಳ ಕಡಿಮೆ. ಯುವತಿಯರಿಗೆ ತಮ್ಮಿಷ್ಟದಂತಹ ವರ ಸಿಗದಿರಲು ಇದೇ ಕಾರಣ ಎನ್ನಲಾಗುತ್ತಿದೆ.
ಬ್ರೆಜಿಲ್ನ ನೋಯ್ವಾ ಊರಿನಲ್ಲಿ ಗಂಡಸರಿದ್ದರೂ ಹಳ್ಳಿಯಲ್ಲಿ ವಾಸಿಸಲು ಇಷ್ಟಪಡುವುದಿಲ್ಲ. ನಗರಕ್ಕೆ ವಲಸೆ ಹೋಗಿ ಬಿಡುತ್ತಾರೆಂತೆ. ಇದರಿಂದ ಗ್ರಾಮದಲ್ಲಿ ಮಹಿಳೆಯರು ಒಂಟಿಯಾಗಿರುತ್ತಾರೆ.
ಬ್ರೆಜಿಲ್ನ ನೋಯ್ವಾ ಹಳ್ಳಿಯಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಿರುವುದರಿಂದ ಪುರುಷರು ಇಲ್ಲಿ ವಾಸಿಸಲು ಇಷ್ಟಪಡುತ್ತಿಲ್ಲ. ಗ್ರಾಮದ ಜನರ ಮುಖ್ಯ ಕಸುಬು ಕೃಷಿ ಮತ್ತು ಪಶುಪಾಲನೆಯಾಗಿದ್ದು ಎಲ್ಲಾ ಕೆಲಸಗಳನ್ನು ಯುವತಿಯರು ಮಾತ್ರ ಮಾಡುತ್ತಾರೆ. ಅದಕ್ಕೆ ಈ ಹಳ್ಳಿಯ ಗಂಡಸರು ಕೆಲಸ ಹುಡುಕಿಕೊಂಡು ನಗರಕ್ಕೆ ಹೋಗುತ್ತಾರೆ. ವರದಿಯ ಪ್ರಕಾರ ಗ್ರಾಮದಲ್ಲಿ ಕೆಲವೊಂದು ಕಠಿಣ ನಿಯಮಗಳಿದ್ದು, ಅವುಗಳಿಂದಾಗಿ ಪುರುಷರು ಇಲ್ಲಿಗೆ ಬರಲು ಇಚ್ಛಿಸುತ್ತಿಲ್ಲವಂತೆ ಎನ್ನುವ ಮಾಹಿತಿಯೂ ಇದೆ.
ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿರುವ ನಿಯಮಗಳು ಮತ್ತು ನಿಬಂಧನೆಗಳನ್ನು ಇಲ್ಲಿನ ಮಹಿಳೆಯರು ಅನುಸರಿಸಿದ್ದು ಪುರುಷರು ಇಂತಹ ನಿಯಮ, ನಿಬಂಧನೆಗಳನ್ನು ಪಾಲಿಸಲು ಇಷ್ಟಪಡುವುದಿಲ್ಲ. ಹಾಗಾಗಿ ಯುವತಿಯರ ಬೇಡಿಕೆಗೆ ತಕ್ಕಂತೆ ಅಂದರೆ ನಿಯಮಗಳ ಪಾಲನೆ ಮಾಡುವಂತ ಪುರುಷ ಯುವಕರು ಸಿಗುತ್ತಿಲ್ಲವಾದ್ದರಿಂದ ಅಲ್ಲಿ ಯುವತಿಯರನ್ನು ಮದುವೆಯಾಗಲು ಯುವಕರು ಸಿಗುತ್ತಿಲ್ಲ ಎನ್ನಲಾಗಿದೆ.