ಚಿಕ್ಕೋಡಿ: ಆಸ್ಪತ್ರೆಗೆ ಚಕ್ಕರ್ ಸಂಬಳಕ್ಕೆ ಹಾಜರ್, ಕೇರ್ಲೆಸ್ ವೈದ್ಯಾಧಿಕಾರಿ..!
ಬೆಳಗಾವಿ: ಜಿಲ್ಲೆ ಚಿಕ್ಕೋಡಿ ತಾಲೂಕಿನ ಕಬ್ಬೂರ ಸರಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಆಸ್ಪತ್ರೆಗೆ ಸರಿಯಾಗಿ ಬಾರದೆ ಆಸ್ಪತ್ರೆ ಗೆ ಚಕ್ಕರ್ ಹೊಡೆಯುವುದರ ಮುಖಾಂತರ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.
ಡಾ: ರಾಜೇಂದ್ರ ಎಸ್ ಕನದಾಳೆ ಈತನೆ ಕಬ್ಬೂರ ಪಟ್ಟಣದ
ಸರಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಆಗರುತ್ತಾನೆ.
ಪ್ರತಿ ದಿನಾ ಆಸ್ಪತ್ರೆ ಗೆ ಸೈನ್ ಗೆ ಮಾತ್ರ ಹೋಗುತ್ತಾರೆ. ಮದ್ಯಾಹ್ನದ ನಂತರ ಆಫೀಸ್ ನಲ್ಲಿ ಇರುವದೇ ಇಲ್ಲ. ಸರಿಯಾಗಿ ಚಿಕಿತ್ಸೆ ನೀಡದ ವೈದ್ಯ ಸುಮಾರು ದಿನಗಳಿಂದ ಹಾಜರಾತಿ ಸಹಿ (ಬಯೋಮೆಟ್ರಿಕ್ನಲ್ಲಿ) ಮುಂಜಾನೆ ಮಾತ್ರ ಇರುತ್ತದೆ. ಆಶ್ಚರ್ಯ ಎಂದರೆ ಸಾಯಂಕಾಲ ಮಂಗ ಮಾಯವಾಗಿರುತ್ತದೆ. ಆದರೂ ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಬಳ ಇವರ ಖಾತೆಗೆ ಸಂದಾಯವಾಗುತ್ತಿದೆ.!
ಪುಕ್ಕಟ್ಟೆ ಸಂಬಳ ಪಡೆದು ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ, ಎನ್ನುವ ಹಾಗೆ ಸರಕಾರದ ದುಡ್ಡನ್ನೇ ಕೊಳ್ಳೆ ಹೊಡೆಯಲು ನಿಂತು ಬಿಟ್ರಾ ಇ ಐನಾತಿ ಮುಖ್ಯ ವೈದ್ಯಾಧಿಕಾರಿ..!? ಇತ್ತಕಡೆ ಚಿಕಿತ್ಸೆ ಸರಿಯಾಗಿ ಸಿಗುತ್ತಿಲ್ಲ ಎಂದು ರೋಗಿಗಳು ಪರದಾಡುತ್ತಿದ್ದರೆ, ಮುಖ್ಯ ವೈದ್ಯಧಿಕಾರಿ ಮಾತ್ರ ತಮ್ಮ ತಾರ್ ನಲ್ಲಿ ಜಾಲಿ ರೆಡ್ ಮಾಡ್ತಾರೆ. ಅರದಂಬರ್ದ ಕೆಲಸ ಮಾಡುವ ವೈದ್ಯಾಧಿಕರಿಗೆ ಹೇಳಲು ಕೇಳಲು ಯಾರು ಇಲ್ಲದಂತಾಗಿದೆ.
ತಾಲೂಕಾ ವೈದ್ಯಾಧಿಕಾರಿಗಳಾದ ಸುಕುಮಾರ ಬಾಗಾಯಿ ಅವರೇ ಎಲ್ಲಿದ್ದೀರಿ ? ಏನು ಮಾಡ್ತಾ ಇದ್ದೀರಾ ?
ಮುಖ್ಯ ವೈದ್ಯಾಧಿಕಾರಿಗಳ ಸಂಬಳದಲ್ಲಿ ನಿಮಗೇಷ್ಟು ಪಾಲು ಸಿಗುತ್ತಿದೆ. ಸಿಕ್ಕಿಲ್ಲ ಅಂದ್ರೆ ಗಪ್ಪ ಚುಪ್ಪ ಯಾಕಾಗಿದ್ದಿರಿ ? ನಿಮ್ಮ ಇ ಅನಿರ್ದಿಷ್ಟ ಮೌನಕ್ಕೆ ಕಾರಣ ಏನು ತಿಳಿಸಿ….ಜನರಿಗೂ ಒಂಚೂರು ಗೊತ್ತಾಗಲಿ ನಿಮ್ಮ ಕಾಯಕ ಏನು? ನೀವು ಮಾಡುತ್ತಿರುವುದಾದರು ಏನು ಅಂತಾ….
ಸರಕಾರದ ಕೆಲಸ ದೇವರ ಕೆಲಸ!
ವೈದ್ಯ ನಾರಾಯಣ ಹರಿ ನೀವು ದೇವರುಗಳು, ಸರಿಯಾಗಿ ಆಸ್ಪತ್ರೆಗೆ ಬಂದು ಕಾರ್ಯ ನಿರ್ವಹಿಸದೆ, ಸಾರ್ವಜನಿಕರ ಜೊತೆ ಚಲ್ಲಾಟ ಆಡುತ್ತಿರುವದು ತಪ್ಪಲ್ಲವೇ ? ಜಿಲ್ಲೆಯ ಅರೋಗ್ಯ ವೈದ್ಯಾಧಿಕಾರಿಗಳೆ, ನಿಮ್ಮ ಮುಂದಿನ ನಡೆ ಏನು? ಮುಖ್ಯ ವೈದ್ಯನ ಬೆನ್ನ ತಟ್ಟುತ್ತೀರಾ? ಅಥವಾ ಸೂಕ್ತ ಕಾನೂನಿನ ಬಿಸಿ ಮುಟ್ಟಿಸುತ್ತೀರಾ ? ನಿಮ್ಮ ಮುಂದಿನ ನಡೆಗಾಗಿ ಕಾಯುತ್ತೇವೆ. ಆದಷ್ಟು ಬೇಗ ಆಸ್ಪತ್ರೆ ಗೆ ಚಕ್ಕರ್ ಹೊಡಿಯುವ ವೈದ್ಯನಿಗೆ ಯಾವ ರೀತಿ ಚೆಕ್ಮೆಟ್ ಹಾಕುತ್ತಿರಿ ಕಾಯ್ದು ನೋಡಬೇಕಿದೆ.
ಮುಖ್ಯ ವೈದ್ಯಾಧಿಕಾರಿ ಕುರಿತು ಇನ್ನಷ್ಟು ಮಾಹಿತಿಯನ್ನು ಅತಿ ಶೀಘ್ರದಲ್ಲಿ ನಿಮ್ಮ ಮುಂದೆ ತರುತ್ತೇನೆ ನಿರೀಕ್ಷಿಸಿ!!
ಜರ್ನಲಿಸ್ಟ್: ಚಂದ್ರು ತಳವಾರ