ಹುಕ್ಕೇರಿ: ಕೆ ಆರ್ ಎಸ್ ಪಕ್ಷದಿಂದ ನೂತನ ಅಭ್ಯರ್ಥಿ ಗುರುಸಿದ್ದ ಮಡಿವಾಳರ ಅವರಿಂದ ನಾಮಪತ್ರ ಸಲ್ಲಿಕೆ ಕೆ ಆರ್ ಎಸ್ ಪಕ್ಷದಿಂದ ಪ್ರಭಲ ಅಭ್ಯರ್ಥಿಯಾದ ಗುರುಸಿದ್ದ ಮಡಿವಾಡಳರ ಕೊನೆಯ ದಿನವಾದ ಇಂದು ನಾಮಪತ್ರ ಸಲ್ಲಿಸುವ ಮೂಲಕ ತಮ್ಮ ಪಕ್ಷದಿಂದ ಹೊಸ ಅಭಿವ್ರದ್ದಿಗೆ ಕೈ ಜೋಡಿಸಿದ್ದಾರೆ.
ಕ್ರಷ್ಣಾ ರೆಡ್ಡಿ ಕೆ ಆರ್ ಎಸ್ ಪಕ್ಷದ ಮೂಲ ಅಧ್ಯಕ್ಷರಾದ ಇವರ ಪಕ್ಷದ ವತಿಯಿಂದ ಇಂದು ನಾಮಪತ್ರ ಸಲ್ಲಿಸಿದ್ದಾರೆ.
ಗುರುಸಿದ್ದ ಕೆಂಪಣ್ಣಾ ಮಡಿವಾಳರ ಈ ಹಿಂದೆ ಹುಕ್ಕೇರಿ ಮತಕ್ಷೇತ್ರದಲ್ಲಿ ಅನೇಕ ಬಡವರಿಗೆ ಧಿನ ದಲಿತರಿಗೆ ಸಹಾಯ ಮಾಡಿ ತಮ್ಮದೇ ಆದ ಛಾಪೂ ಮೂಡಿಸಿದ್ದಾರೆ.
ಇನ್ನೂ ಅನೇಕ ಭಾರಿ ಹೊರ ಗ್ರಾಮಗಳಲ್ಲಿ ಬಡವರ ಪಾಲಿಗೆ ಕಾನೂನುಗಳ ಬಗ್ಗೆ ಅರಿವೂ ಮೂಡಿಸಿ ನೊಂದವರನ್ನ ರಕ್ಷಣೆ ಮಾಡಿದ್ದಾರೆ.
ಈ ಹಿನ್ನಲೆ ಇವರ ಕಾರ್ಯಕ್ಷಮತೆಗಳನ್ನ ಕಂಡು ಕೆ ಆರ್ ಎಸ್ ಪಕ್ಷ ಇವರನ್ನ ಆಯ್ಕೆ ಮಾಡಲಾಗಿದೆ.ದೇಶದಲ್ಲಿ ರಾಜ್ಯದಲ್ಲಿ ಕ್ಷೇತ್ರದಲ್ಲಿ ಅನೇಕ ಬದಲಾವಣೆ ತರಲು ಕೆಆರ ಎಸ್ ಪಕ್ಷ ಮುಂದಾಗಿದೆ ಎಂದು ನಾಮಪತ್ರ ಸಲ್ಲಿಸಿದ ಗುರಸಿದ್ದ ಕಂಪಣ್ಣ ಮಡಿವಾಳ ಅವರು ನಾಮ ಪತ್ರ ಸಲ್ಲಿಸಿ ಕೆ ಆರ್ ಎಸ್ ಪಕ್ಷದ ಬಗ್ಗೆ ಮಾದ್ಯಮಗಳ ಮುಂದೆ ಮಾತನಾಡಿದರು.
ಈ ಸಂದರ್ಭದಲ್ಲಿ ನಾಮಪತ್ರ ಸಲ್ಲಿಕೆ ಸಮಯದಲ್ಲಿ ಮಡಿವಾಳ ಸಮಜಾದ ಬಂದುಗಳು ಬೆಂಬಲ ನೀಡಿದರು.
ಜೊತೆಗೆ ಅಭಿಮಾನಿ ಬಳಗಳದ ಜೊತೆಗೆ ಕುಮಾರ ಜೊಡಟ್ಟಿ, ಮಡಿವಾಳರ, ಕೆಆರ್ ಎಸ್ ಪಕ್ಷದ ಹಲವಾರೂ ಮುಖಂಡರು ಭಾಗವಹಿಸಿದ್ದರು.
ಅತ್ಯುತ್ತಮ ಅಭಿವ್ರದ್ದಿಗೆ ಕೈ ಜೋಡಿಸಿ ಸಮಸ್ತ ಭಂದುಗಳು ಹಾಗೂ ಹುಕ್ಕೇರಿ ಮತಕ್ಷೇತ್ರದ ಮತದಾರರೂ ಮತ ನೀಡಿ ಪ್ರಚಂಡ ಬಹುಮತದಿಂದ ಆರಿಸಿ ಆಯ್ಕೆ ಮಾಡಬೇಕೆಂದು ಕೆ ಆರ್ ಎಸ್ ಪಕ್ಷದ ಅಭ್ಯರ್ಥಿಯಾದ ಗುರು ಮಡಿವಾಳರ ಮಾಧ್ಯಮದ ಮುಂದೆ ಮಾತನಾಡಿದ್ದಾರೆ.
ಇನ್ನೂ ಅನೇಕ ಪಕ್ಷಗಳು ಭ್ರಷ್ಟಾಚಾರ ಬಗ್ಗೆ ಯಾವುದೇ ರೀತಿಯ ಕ್ಯಾರೆ ಎಂದಿಲ್ಲ ಎಂದು ಕೆ ಆರ್ ಎಸ್ ಪಕ್ಷದ ಅಭ್ಯರ್ಥಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ವರದಿ:ಚಂದ್ರು ತಳವಾರ


