ಚಿಕ್ಕೋಡಿಯಲ್ಲಿ ನಾಳೆ ಪಕ್ಷೇತರ ಅಭ್ಯರ್ಥಿ ಕಲ್ಲೋಳಿಕರ್ ಪರ ಡಾ. ಬಿ.ಆರ್ ಅಂಬೇಡ್ಕರ್ ಮೊಮ್ಮಗನಿಂದ ಪ್ರಚಾರ
ಚಿಕ್ಕೋಡಿ ಲೋಕಸಭಾ ಚುನಾವಣೆ ಹಿನ್ನೆಲೆ ಸಂವಿಧಾನ ಶಿಲ್ಪಿ ಭಾರತ ರತ್ನ ಮಹಾ ಮಾನವತವಾದಿ ಡಾ. ಬಿಆರ್ ಅಂಬೇಡ್ಕರ್ ರವರ ಮೊಮ್ಮಗರಾದ ಸನ್ಮಾನ್ಯ ಪ್ರಕಾಶ್ ಅಂಬೇಡ್ಕರ್ ರವರು ದಿನಾಂಕ ೦೫-೦೫-೨೦೨೪ ರಂದು ಬೆಳಿಗ್ಗೆ 10:30ಕ್ಕೆ ಚಿಕ್ಕೋಡಿ ಪಟ್ಟಣದ ಪರಟಿ ನಾಗಲಿಂಗೇಶ್ವರ ದೇವಸ್ಥಾನದ ಮುಂದಿನ ಆವರಣದಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾದ ನಿವೃತ್ತ ಐಎಎಸ್ ಅಧಿಕಾರಿಗಳಾದ ಶ್ರೀ ಶಂಭು ಕೃಷ್ಣ ಕಲ್ಲೋಳಿಕರ್ ಪರ ಪ್ರಚಾರಕ್ಕಾಗಿ ಆಗಮಿಸುತ್ತಿದ್ದಾರೆ.
ಈಗಾಗಲೇ ರಾಷ್ಟ್ರೀಯ ಪಕ್ಷಗಳು ತಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಸಾಕಷ್ಟು ಸಿನಿಮಾ ನಟ ನಟಿಯರನ್ನು ಹಾಗೂ ರಾಷ್ಟ್ರಮಟ್ಟದ ನಾಯಕರನ್ನು ಕರೆತಂದು ಪ್ರಚಾರ ನಡೆಸುತ್ತಿದ್ದಾರೆ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೇ ನನ್ನ ದೇವರು, ಮತದಾರರೇ ನನಗೆ ಬಾಸ್ ಎನ್ನುವ ಶಂಭು ಕಲ್ಲೋಳಿಕರ್ ಮಾತ್ರ ಕಾರ್ಯಕರ್ತರ ಹಾಗೂ ಅಭಿಮಾನಿಗಳ ಅಪೇಕ್ಷೆ ಮೆರೆಗೆ ಪ್ರಕಾಶ ಅಂಬೇಡ್ಕರ್ ರವರನ್ನು ಚುನಾವಣೆ ಪ್ರಚಾರಕ್ಕಾಗಿ ಆಹ್ವಾನಿಸಿರುತ್ತಾರೆ.
ಇದರಿಂದ ಪಕ್ಷೇತರ ಅಭ್ಯರ್ಥಿಯಾದ ಶಂಭು ಕಲ್ಲೋಳಿಕರ್ ಅವರ ವೋಟ್ ಬ್ಯಾಂಕ್ ಮತ್ತಷ್ಟು ಹೆಚ್ಚಾಗಲಿದೆ.
ಮತ್ತು ಪ್ರಕಾಶ್ ಅಂಬೇಡ್ಕರ್ ಅವರ ಪ್ರಚಾರದಿಂದ ರಾಷ್ಟ್ರೀಯ ಪಕ್ಷಗಳ ಮೇಲೆ ದೊಡ್ಡ ಪರಿಣಾಮ ಬೀಳುವ ಲಕ್ಷಣಗಳಿವೆ ಎಂದು ಕೆಲವು ಚಿಂತಕರು ವಿಚಾರವಾದಿಗಳ
ಅಭಿಪ್ರಾಯವಾದೆ.
ಅಷ್ಟೇ ಅಲ್ಲದೆ ಅಹಿಂದ ಮತಗಳನ್ನು ಕೂಡ ಸೆಳೆಯುವ ಲಕ್ಷಣಗಳಿವೆ.