ಗೋಕಾಕ:ಡಿ.೧೪: ಒಳ ಮೀಸಲಾತಿ ಜಾರಿಗೆ ಒತ್ತಾಯ ಶಾಸಕರ ಮನೆ ಮುಂದೆ ತಮಟೆ ಚಳುವಳಿ
ಈ ಕುರಿತು ಸುಪ್ರಿಂಕೋರ್ಟ ಮಹತ್ವ ತೀರ್ಪು ನೀಡಿದರು ಸಹ ರಾಜ್ಯ ಸರಕಾರ ಒಳ ಮೀಸಲಾತಿ ನೀಡುತ್ತಿಲ್ಲ. ಹೀಗಾಗಿ ಕೂಡಲೇ ಮಾದೀಗ ಸಮಾಜಕ್ಕೆ ಒಳ ಮೀಸಲಾತಿ ನೀಡಲು ಸರಕಾರ ಕ್ರಮಕೈಗೊಳ್ಳಬೇಕು ಎಂದು ಮಾದೀಗ ದಂಡೋರ ಮಾದೀಗ ಮೀಸಲಾತಿ ಹೋರಾಟ ಸಮಿತಿಯ ನಾಯಕರು ಒತ್ತಾಯಿಸಿದರು.
ಗೋಕಾಕದಲ್ಲಿರುವ ಶಾಸಕರ ಮನೆ ಮುಂದೆ ಶುಕ್ರವಾರ ಕರೆದ ತಮಟೆ ಚಳುವಳಿಯಲ್ಲಿ, ಮಾತನಾಡಿದ ಅವರು, ಒಳ ಮೀಸಲಾತಿ ಆಗ್ರಹಿಸಿ ರಾಜ್ಯದ ಶಾಸಕರ, ವಿಧಾನ ಪರಿಷತ್ ಸದಸ್ಯರ ಮನೆಯ ಮುಂದೆ ತಮಟೆ ಚಳುವಳಿ ನಡೆಸಲಾಗುತ್ತಿದೆ. ಈ ಕುರಿತು ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಕಲಾಪದಲ್ಲಿ ಮಾತನಾಡಿ ಸರಕಾರದ ಗಮನ ಸೆಳೆಯುವ ಮೂಲಕ ನಮ್ಮ ಸಮುದಾಯಕ್ಕೆ ನ್ಯಾಯ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.
ಈ ಕುರಿತು ಡಿ-೧೬ ರಂದು ಬೆಳಗಾವಿಯ ಸುವರ್ಣ ಸೌಧದ ಮುಂಭಾಗದಲ್ಲಿ ಮೀಸಲಾತಿಯ ಕುರಿತು ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದ್ದು ರಾಜ್ಯದ ವಿವಿಧೆಡೆಯಿಂದ ಮಾದೀಗ ಹಾಗೂ ಮಾದೀಗ ಉಪ ಜಾತಿಗಳು ಜನರು ಸುಮಾರು ೨೫ ಸಾವಿರಕ್ಕಿಂತ ಅಧಿಕ ಜನರು ಪಾಲ್ಗೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಲ್ಲದೆ ಮಾದೀಗ ಸಮುದಾಯದ ಜನರಲ್ಲಿ ಹೆಚ್ಚಿನ ಪ್ರಜ್ಞೆ ಮೂಡಿಸುವ ಉದ್ದೇಶದಿಂದಾಗಿ ಸಂಘಟನೆ ಬಲಪಡಿಸಲು ನಿರ್ಧರಿಸಲಾಗಿರುತ್ತದೆ.
ಜರ್ನಲಿಸ್ಟ್: ಚಂದ್ರು ತಳವಾರ