ಗೋಕಾಕ: ಟ್ರಾಫಿಕ್ ಪೊಲೀಸರ (Mudalagi Traffic Police) ಎಡವಟ್ಟಿನಿಂದ,
ಕಾರ್ ಪಲ್ಟಿ ಯಾದ ಘಟನೆ ಗುರ್ಲಾಪುರ್ ಕ್ರಾಸ್ ಬಳಿ ಇಂದು ಸಾಯಂಕಾಲ ನಡೆದಿದೆ.
ಮೂಡಲಗಿ ಟ್ರಾಫಿಕ್ ಪೊಲೀಸರು ಸರ್ಕಲ್ ಬಳಿ ನಿಂತು, ಹೆಲ್ಮೆಟ್ ತಪಾಸಣೆ ನಡೆಸುತ್ತಿದ್ದ ವೇಳೆ, ಈ ದುರ್ಘಟನೆ ಸಂಭವಿಸಿದೆ.
ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು, ಪೊಲೀಸರು ಸರಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂದು ದೂರಿದ್ದಾರೆ.
ಮೂಡಲಗಿ ಪೊಲೀಸರು….
ಟ್ರಾಫಿಕ್ ಪೊಲೀಸರ ಯಡವಟ್ಟಿನಿಂದ, ಕಾರ್ ಪಲ್ಟಿ ಆಗಿ ಬ್ರಿಜ್ ಕೆಳಗಡೆ ಬಿದ್ದಿರುತ್ತದೆ. ಅಂತ ಅಲ್ಲಿನ ಸ್ಥಳೀಯರು ಆರೋಪಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
ಇನ್ನು ಗಾಯಾಳುಗಳನ್ನು ಅಥಣಿ ಆಸ್ಪತ್ರೆಗೆ, ಕರೆದೊಯ್ಯಲಾಗಿದೆ.
ಘಟನೆಗೆ ಸಂಬಂಧಿಸಿದಂತೆ, ಇನ್ನಷ್ಟು ಮಾಹಿತಿ, ಪೋಲಿಸ್ ತನಿಕೆಯಿಂದಷ್ಟೇ ತಿಳಿದು ಬರಬೇಕಿದೆ.
Reported by Chandru Talwar