ಗೋಕಾಕ: ಶಿಥಿಲಾವಸ್ತೆ ತಲುಪಿ, ಸೋರುತ್ತಿಹದು ನ್ಯಾಯಾಲಯದ ಮನೆಯ ಮಾಳಿಗೆ..!
ಬೆಳಗಾವಿ ಜಿಲ್ಲೆ ಗೋಕಾಕಿನ ಜಿಲ್ಲಾ ಹಾಗೂ ಹಿರಿಯ ನ್ಯಾಯಾಲಯಗಳ ದಿವಾಣಿ ನ್ಯಾಯಾಲಯದ ನೂತನ ಕಟ್ಟಡ, ಹಲವಾರು ಕಡೆಗಳಲ್ಲಿ ಸೋರುತ್ತಿದೆ.
ಹೊಸ ಕಟ್ಟಡ ಇದ್ದರೂ ಅರೆಬರೆ ಕಾಮಗಾರಿಯ ಕಾರಣಕ್ಕೆ ಬಳಕೆಗೆ ಬಾರದಂತಾದ ಪರಿಸ್ಥಿತಿ.!
ಹೊಸದಾದ ಕೋರ್ಟ್ ಸಂಕೀರ್ಣದಲ್ಲಿ ವಿವಿಧ ಕಡೆಗಳಲ್ಲಿ ಜೋರು ಮಳೆ ಬಂದಾಗ ಸೋರುತ್ತದೆ. ಅಲ್ಲಲ್ಲಿ ಗೋಡೆಗಳು ಕೂಡಾ ಬಿರುಕು ಬಿಟ್ಟಿವೆ.
ಹೊಸ ಕಟ್ಟಡ ಪೂರ್ಣಗೊಂಡ ಕೆಲವೇ ತಿಂಗಳುಗಳಲ್ಲಿ ಈ ತರಹ ಸೋರುತ್ತಿರುವುದನ್ನು ನೋಡಿದರೆ ಲೋಕೋಪಯೋಗಿ ಇಲಾಖೆ, ಅಧಿಕಾರಿಗಳ ಬೇಜವಾಬ್ದಾರಿತನವೇ ಮೂಲ ಕಾರಣವಾಗಿದೆ.
ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ, ಹೇಳುವವರು ಕೇಳುವವರು ಯಾರು ಇಲ್ಲ ಅನಿಸುತ್ತೆ. ಅವರು ಆಡಿದ್ದೆ ಆಟ ಮಾಡಿದ್ದೆ ಕಾಮಗಾರಿ, ಹೊರಗಿನಿಂದ ನೋಡಿದರೆ ಕಟ್ಟಡ ವಾವ್ ಎನ್ನಬೇಕು. ಒಳಗಡೆ ಮೇಲ್ಚಾವಣಿ ಬಿರುಕು ಬಿಟ್ಟು ಕಳಪೆ ಆಗಿರುತ್ತದೆ. ಮಳೆ ಬಂದ್ರೆ ಸಾಕು ಕೋರ್ಟಿನ ಒಳಗಡೆ ಕೂಡಾ ಕೊಡೆ ಹಿಡಿಬೇಕು ಏನೋ..?
೨೦೨೨ರಲ್ಲಿ ನೂತನ ನ್ಯಾಯಾಲಯದ ಕಟ್ಟಡದ ಕಾಮಗಾರಿ ಮುಕ್ತಾಯಗೊಂಡಿದೆ. ಇನ್ನೇನು ಗೋಕಾಕಿನ ಕರದಂಟು ನಾಡಿನಲ್ಲಿ ನೂತನ ನ್ಯಾಯಾಲಯದ ಕಟ್ಟಡವಾಯಿತು. ಎಂದು ನಿಟ್ಟುಸಿರು ಬಿಡುವಷ್ಟರಲ್ಲಿಯೇ, ನ್ಯಾಯಾಲಯದ ಹೊಸ ಕಟ್ಟಡ ಮಳೆ ಬಂದರೆ ಸಾಕು ಭಾರೀ ಪ್ರಮಾಣದಲ್ಲಿ ಸೋರುತ್ತಿದೆ.
ಇದಕ್ಕೆ ಈಗಾಗಲೇ ₹೩ ಕೋಟಿ ವೆಚ್ಚ ಮಾಡಲಾಗಿದೆ ಎಂದು ತಿಳಿದು ಬಂದಿರುತ್ತದೆ. ಅರೆಬರೆಯಾಗಿರುವ ಕಟ್ಟಡದಲ್ಲಿ ಮಳೆ ಬಂದಾಗ ನೀರು ಥಟ್.. ಥಟ್.. ಅಂತಾ ಸೋರುತ್ತಿರಿವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನೂರಾರು ಜನ ದಿನನಿತ್ಯ ನ್ಯಾಯಾಲಯಕ್ಕೆ ಬರುತ್ತಾರೆ.
ನ್ಯಾಯಾಲಯದ ಮೇಲ್ಚಾವಣಿ ಕಳಪೆ ಕಾಮಗಾರಿಯಿಂದ ಬಿರುಕು ಬಿಟ್ಟಿದೆ.
ಇದರಿಂದ ನ್ಯಾಯಾಲಯಕ್ಕೆ ಬರುವ ನ್ಯಾಯವಾದಿಗಳಿಗೆ, ನ್ಯಾಯ ಕೇಳಿ ಬರುವ ಸಾರ್ವಜನಿಕರಿಗೆ, ಹಾಗೂ ಸಿಬ್ಬಂದಿ ವರ್ಗದವರಿಗೆ, ಈ ಪರಿ ನೂತನ ಕಟ್ಟಡ ಸೋರುತ್ತಿರುವುದರಿಂದ ಬಾರಿ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಇಷ್ಟಕ್ಕೂ PWD ಯವರ ನಿರ್ಲಕ್ಷ್ಯ ಧೋರಣೆಯೆ ಪ್ರಮುಖ ಕಾರಣವಾಗಿದೆ.
ನುಣುಚಿಕೊಂಡ ಅಧಿಕಾರಿಗಳು…
ಕಳಪೆ ಕಾಮಗಾರಿ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೆ ಉಡಾಫೆ ಉತ್ತರ ಕೊಡುತ್ತಿರುವ ಅಧಿಕಾರಿಗಳ ನಡೆ, ಬಾರಿ ಸಂಶಯಕ್ಕೆ ಎಡೆ ಮಾಡಿಕೊಡುತ್ತಿದೆ. ಇಷ್ಟಕ್ಕೂ ನ್ಯಾಯಾಲಯದ ಕಾಮಗಾರಿ ಈ ಪರಿ ಕಳಪೆಯಾಗಿರುವುದು ಆಶ್ಚರ್ಯಕರ ಸಂಗತಿಯಾಗಿದೆ. ಸವಿಧಾನಾತ್ಮಕವಾಗಿ ರಚನೆಯಾದ ನ್ಯಾಯಾಲಯಕ್ಕೆ, ಗೌರವಿಸಬೇಕಾದದ್ದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ನ್ಯಾಯ ನೀತಿ ಧರ್ಮ ಪಾಲನೆ ಮಾಡುವ ಸಂಕೀರ್ಣದಲ್ಲಿ ಕಳಪೆ ಕಾಮಗಾರಿ ಮಾಡಿ ಬ್ರಹ್ಮಾಂಡ ಭ್ರಷ್ಟಾಚಾರ ಎಸಿಗಿರುವ ಶಂಕೆ ವ್ಯಕ್ತವಾಗುತ್ತಿದೆ. ಸರ್ಕಾರದ ಕೆಲಸ ದೇವರ ಕೆಲಸ, ಎಂದು ತಿಳಿದು ಕೆಲಸ ಮಾಡಬೇಕಿದ್ದ ಗುತ್ತಿಗೆದಾರ ಹಾಗೂ ಲೋಕೋಪಯೋಗಿ ಅಧಿಕಾರಿಗಳು ನ್ಯಾಯಾಲಯದ ಕಟ್ಟಡವನ್ನೇ ಹದಗೆಡಿಸಿದ್ದಾರೆ.
ಅದು ಏನೇ ಆಗಿರಲಿ ಸರಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಎಚ್ಚೆತ್ತು, ನ್ಯಾಯ, ನೀತಿ, ಧರ್ಮವನ್ನು ಕಾಪಾಡುವ ನ್ಯಾಯಾಲಯದ ಕಟ್ಟಡವನ್ನು ಕಳಪೆ ಕಾಮಗಾರಿ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಲ್ಲಿನ ಸಾರ್ವಜನಿಕರ ಒತ್ತಾಯವಾಗಿದೆ.
ಜರ್ನಲಿಸ್ಟ್: ಚಂದ್ರು ತಳವಾರ