ಮೂಡಲಗಿ: ನಕಲಿ ವೈದ್ಯ ಬಡ್ಡಿ ಅಟ್ಟಹಾಸಕ್ಕೆ, ಬಲಿ ಆಗುತ್ತಿವೆ ಅಮಾಯಕ ಜೀವಗಳು…!
ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಧರ್ಮಟ್ಟಿ ರೋಡದಲ್ಲಿ ಭೀಮಪ್ಪ ಬಡ್ಡಿ ಎಂಬ ನಕಲಿ ವೈದ್ಯನಿದ್ದಾನೆ.
ಮೂಡಲಗಿ ತಾಲೂಕಿನಾದ್ಯಂತ ದಿನೇ ದಿನೇ, ನಕಲಿ ವೈದ್ಯರ ಹಾವಳಿ ಹೆಚ್ಚಾಗುತ್ತಲೆ ಇದೆ.
ಅದರಲ್ಲಿ ಧರ್ಮಟ್ಟಿ ಗ್ರಾಮದ ಭೀಮಪ್ಪ ಬಡ್ಡಿ ಎಂಬ ನಕಲಿ ವೈದ್ಯನ ಅಟ್ಟಹಾಸ ತಾರಕಕ್ಕೇರಿದೆ.
ಸಂಘಟನೆ ಹೆಸರು ಹೇಳಿಕೊಂಡು ನಡೆಸಿದ್ದಾನೆ ಕಾನೂನು ಬಾಹಿರ ಕ್ಲಿನಿಕ್.
ಮಾನ್ಯ ವೈದ್ಯಕೀಯ ಪದವಿ ಇಲ್ಲದೆ ಸುಮಾರು ವರ್ಷಗಳಿಂದ ವೈದ್ಯನೆಂದು ಹೇಳಿ ಅಮಾಯಕ ಜನರನ್ನು ಸುಲಿಗೆ ಮಾಡಿದ್ದಾನೆ.
ಕನಿಷ್ಠ ಯಾವ ವೈದ್ಯಕೀಯ ಶಿಕ್ಷಣ ಪಡೆಯದ ನಕಲಿ ವೈದ್ಯ… ತನ್ನ ಅಣ್ಣನ ಮಗಾ MBBS ಓದುತ್ತಿದ್ದಾನೆ, ಆತನ ಹೆಸರಿನಲ್ಲಿ ಹೀಗೆ ತಾನು ಪ್ರಾಕ್ಟೀಸ್ ಮಾಡುವುದಾಗಿ, ನಮ್ಮ ರಹಸ್ಯ ಕಾರ್ಯಾಚರಣೆಯಲ್ಲಿ ಬಾಯಿ ಬಿಟ್ಟಿರುತ್ತಾನೆ.
ಬಣ್ಣದ ಮಾತುಗಳನ್ನಾಡಿ ಅಮಾಯಕ ಜನರಿಂದ ಹಣ ಪಿಕುವುದೇ ಈತನ ಗೀಳಾಗಿದೆ.
ಯಾವ ಎಂ.ಬಿ.ಬಿ.ಎಸ್ ಪದವಿ ಪಡೆಯದ ಇತ ರೋಗಿಗಳಿಗೆ ತನ್ನ ಮನಸ್ಸಿಗೆ ಬಂದಂತೆ ಹಾಯ್ ಡೋಸ್ ಮೆಡಿಸನ್ ಗಳನ್ನ ಕೊಡುತ್ತಾನೆ.
ಗರ್ಭಿಣಿಯರು, ವೃದ್ಧರು, ಚಿಕ್ಕ ಮಕ್ಕಳೆನ್ನದೆ, ಔಷಧಿಗಳನ್ನು ಕೊಡುತ್ತಾನೆ ಈ ಭೂಪ. ಈತನಿಗೆ ಹೇಳೋಕೆ ಕೇಳೋಕೆ ಯಾರು ಇಲ್ಲದಂತಾಗಿದೆ.
ಆಡಿದ್ದೆ ಆಟ ಎನ್ನುವ ರೀತಿಯಲ್ಲಿ ಚಿಕಿತ್ಸೆ ಕೊಡ್ತಾನೆ ನಕಲಿ ವೈದ್ಯ.
ತಾಲೂಕಿನ ಅರೋಗ್ಯ ವೈದ್ಯಾಧಿಕಾರಿಗಳು ಮಾಯವಾಗಿ ಬಿಟ್ರಾ ? ತಾಲೂಕಾ ವೈದ್ಯಾಧಿಕಾರಿಗಳು ಇಂತಹ ನಕಲಿ ವೈದ್ಯರು ನಿಮ್ಮ ಗಮನಕ್ಕೆ ಇಲ್ವಾ ? ಇನ್ನೆಷ್ಟು ಅಮಾಯಕ ಜನರು ಈ ನಕಲಿ ವೈದ್ಯನ ಕೈಯಲ್ಲಿ ಸಿಕ್ಕು ಬಲಿಯಾಗಬೇಕು.? ಈ ಸುದ್ದಿಯನ್ನು ಗಮನಿಸಿದ ಮೇಲಾದರೂ THO ಸಾಹೇಬರು ಎಚ್ಚೆತ್ತುಕೊಂಡು ನಕಲಿ ವೈದ್ಯನ ಅಟ್ಟಹಾಸಕ್ಕೆ ಬ್ರೇಕ್ ಹಾಕ್ತಾರಾ? ಕಾದು ನೋಡಬೇಕಿದೆ.
ಜರ್ನಲಿಸ್ಟ್: ಚಂದ್ರು ತಳವಾರ