ಘಟಪ್ರಭಾ; KHI ಕಾಲೆಜು ಮಹಡಿಯಿಂದ ಬಿದ್ದು ಗೋವಾ ಮೂಲದ ಯುವತಿ ರುತುಜಾ ಸಾವು.!
ಘಟಪ್ರಭಾ: ಕಾಲೆಜು ಮಹಡಿಯಿಂದ ಬಿದ್ದು ಯುವತಿ ಸಾವು,ಹೌದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಘಟಪ್ರಭಾ ಪಟ್ಟಣದ ಖ್ಯಾತ ವೈದ್ಯಕೀಯ ಕಾಲೆಜು ಎಂದೆ ಹೆಸರು ಪಡೆದ ಕೆಎಚ್ಐ ಆಸ್ಪತ್ರೆಯ.
ಜಿಎನ್ಎಮ್ ನರ್ಸಿಂಗ ಕೊರ್ಸ ಮಾಡುತ್ತಿರುವ ಯುವತಿ ರುತುಜಾ ಎಂಬ ಗೋವಾ ಮೂಲದ ಕೆಎಚ್ಐ ಆಸ್ಪತ್ರೆ ಯಲ್ಲಿ ಕಾಲೇಜು ಮಹಡಿ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಬಲ್ಲ ಮೂಲಗಳ ಮಾಹಿತಿ ತಿಳಿದು ಬಂದಿದೆ.
ಆತ್ಮಹತ್ಯೆ ಮುಂಚೆ ರುತುಜಾ ತನ್ನ ಇನ್ಸ್ಟಾಗ್ರಾಂ ನಲ್ಲಿ ನನ್ನ ಭಾವನೆಗಳನ್ನ ಯಾರು ತಿಳಿದುಕೊಳ್ಳುತ್ತಿಲ್ಲ ಎಂಬ ಒಂದು ಸ್ಟೆಟಸ್ ಇಟ್ಟಿದ್ದಳು ಎಂದು ತಿಳಿದು ಬಂದಿದೆ.
ರುತುಜಾ ಜಿಎನ್ಎಮ್ ಪೈನಲ್ ಇಯರ್ ವೈದ್ಯಕೀಯ ಶಿಕ್ಷಣ ಮುಗಿಸಲು ಕೆಲ ತಿಂಗಳುಗಳು ಬಾಕಿ ಇದ್ದವೂ ಆದರೆ ಆತ್ಮಹತ್ಯೆ ಗೆ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ ಸಮೀಪದ ಘಟಪ್ರಭಾ ಪೋಲಿಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ವರದಿ: ಚಂದ್ರು ತಳವಾರ