ಘಟಪ್ರಭಾ: ಸಾರಾಯಿ ಮಾರವನೊಬ್ಬ ಕಾನೂನಿನ ಬಾಯಿಗೆ ಸಿಕ್ಕವನೊಬ್ಬ ಘಟಪ್ರಭಾ ಪೋಲಿಸರ ಯಡವಟ್ಟು….
ಹೌದು ಇತ್ತೀಚೆಗಷ್ಟೇ ಸುದ್ದಿಯಲ್ಲಿ ಸದ್ದಾಗಿ ನಾಯಿಕವಾಡಿ ದಾಬಾದ ಮೇಲೆ ಪ್ರಕರಣ ದಾಖಲಿಸಿದ ಘಟಪ್ರಭಾ ಪೊಲೀಸರು ಇದೀಗ ಪೇಚಿಗೆ ಸಿಲುಕಿದಂತಾಗಿದೆ.
ಏನಿದು ನಾಯಿಕವಾಡಿ ದಾಬಾನಲ್ಲಿ ಕಳೆದ ದಿನಗಳ ಹಿಂದಷ್ಟೇ ಧಾಬಾನಲ್ಲಿ ಅಕ್ರಮ ಸರಾಯಿ ಮಾರಾಟ ಮಾಡುತ್ತಿದ್ದಾರೆಂಬ ಸುದ್ದಿಯನ್ನು ಟಿವಿ೩ ಬಿತ್ತರಿಸಿತ್ತು.
ಅದರ ವಿಡಿಯೋ ಆದರಿಸಿ ಘಟಪ್ರಭಾ ಪೋಲಿಸರು ಧಾಬಾ ಮಾಲಿಕನ ಮೇಲೆ ಪ್ರಕರಣ ದಾಖಲಿಸಿ ಈ ಪ್ರಕರಣವನ್ನ ಹಳ್ಳ ಹಿಡಿಸುವಲ್ಲಿ ಯಶಶ್ವಿಯಾಗುತ್ತಿದ್ದಾರೆಂಬ ನೂರೆಂಟ ಪ್ರಶ್ನೆಗಳು ಕಾಡುತ್ತಿವೆ….
ತನಿಖೆ ಎಲ್ಲಿಗೆ ಬಂತು ಸರ್ ಎಂದು ಪೋಲಿಸ್ ಅಧಿಕಾರಿಗಳನ್ನು ಕೇಳಿದರೆ, ಸತ್ಯಪ್ಪ ಬೆನಚನಮರಮರಡಿ ಸಿಗುತ್ತಿಲ್ಲ, ಸಿಕ್ಕ ನಂತರವಷ್ಟೇ ಕೇಸ್ ಮಾಡುತ್ತೇವೆಂದು ಉತ್ತರಿಸುತ್ತಾರೆ ಎಂದರೆ ಏನರ್ಥ…?
ವಿಡಿಯೋನಲ್ಲಿ ಅಕ್ರಮ ಸರಾಯಿ ಮಾರಾಟ ಮಾಡುವ ಅಜ್ಜ ಸತ್ಯಪ್ಪ ಬೆಣಚಿನಮರಡಿ ಆದರೆ ಪ್ರಕರಣ ದಾಖಲಿಸಿದ್ದು ಮತ್ತೊರ್ವನ ಮೇಲೆ ಎಂಬ ಆರೋಪ ಕೇಳಿ ಬರುತ್ತಿದೆ. ಒಬ್ಬನನ್ನು ರಕ್ಷಣೆ ಮಾಡಿ ಮತ್ತೊಬ್ಬನ ಮೇಲೆ ಕೇಸ್ ಮಾಡಿದರೆ ಸಾರ್ವಜನಿಕರ ಅನುಮಾನಕ್ಕೆ ಎಡೆ ಮಾಡಿಕೊಡುವದಿಲ್ಲವೋ…?
ಪ್ರಥಮ ವರ್ತಮಾನ ವರದಿ ಈ ವಿಡಿಯೋ ಆದರಿಸಿ ಪ್ರಕರಣ ದಾಖಲಿಸಬೇಕಾದರೆ ಮೊದಲಿಗೆ ಆ ಸತ್ಯಪ್ಪಜ್ಜನೆ ಎ ಒನ್ ಆರೋಪಿ ನಂತರ ಬೇರೆ ಮಾಲಿಕ ಅಥವಾ ಸಂಬಂದಪಟ್ಟ ಧಾಬಾ ಮಾಲಿಕರ ಪರ ಪ್ರಕರಣ ದಾಖಲಿಸಲಿ ಆದರೆ ಪ್ರಕರಣವನ್ನೆ ಹಳ್ಳ ಹಿಡಿಸಲು ಅಜ್ಜನನ್ನ ಉಳಿಸಿ ಮತ್ತೊಬ್ಬನನ್ನ ಕೊರ್ಟಿಗೆ ಕಳಿಸುವ ಕೆಲಸ ಘಟಪ್ರಭಾ ಪೋಲಿಸರ ಸಲೀಸಾದ ಕೆಲಸ ನಡೆದಿದೆ.
ಪೊಲಿಸರು ಮಾಡುವ ಈ ತನಿಖೆ ಸರಿ ಇಲ್ಲವೆಂದು ಟಿವಿ೩ ವಿಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಟ್ವೀಟ ಹಾಗೂ ಕಾಮೆಂಟ ಮಾಡುವ ಮೂಲಕ ಪೊಲಿಸರಿಗೆ ಪ್ರಶ್ನೆ ಕೇಳುತ್ತಿದ್ದಾರೆ.
ಇನ್ನೂ ಈ ವಿಡಿಯೋ ಸಂಪೂರ್ಣವಾಗಿ ನೋಡಿ ಜಿಲ್ಲಾ ಪೋಲಿಸ್ ವರಿಷ್ಠಾದಿಕಾರಿಗಳು ತಪ್ಪಿಸ್ಥರ ವಿರುದ್ದ ನ್ಯಾಯಬದ್ದವಾಗಿ ಪ್ರಕರಣ ದಾಖಲಿಸುತ್ತಾರೆಯೆ ಎಂದು ಕಾದು ನೊಡಬೇಕಾಗಿದೆ.
ಜರ್ನಲಿಸ್ಟ್: ಚಂದ್ರು ತಳವಾರ


