ಘಟಪ್ರಭಾ: 3 ಜನ ಆರೋಪಿತರನ್ನ ದಸ್ತಗೀರ ಮಾಡಿ ಅವರ ಕಡೆಯಿಂದ ವಿವಿಧ ಪ್ರಕರಣಗಳಲ್ಲಿ ಸುಮಾರು 3 ಲಕ್ಷ ರೂ ಮೌಲ್ಯದ ಕರೆಂಟ್ ಮೋಟಾರ್ ಕೇಬಲ್ ವೈರ್ ಹಾಗೂ ಕರೆಂಟ್ ಮೋಟಾರನ್ನು ಕಳ್ಳತನ ಮಾಡಿ ಅವರ ಕಡೆಯಿಂದ ಸದರಿ 3 ಲಕ್ಷ ರೂ ಮೌಲ್ಯದ ಕರೆಂಟ್ ಮೋಟಾರ್ ಹಾಗೂ ಒಂದು ಮೋಟಾರ್ ಸೈಕಲ್ನ್ನು ಜಪ್ತ ಮಾಡಿದ್ದಾರೆ.
ಆರೋಪಿತರು ಕಲ್ಲೋಳಿ, ರಾಜಾಪೂರ ಮತ್ತು ಬೀರನಗಡ್ಡಿ ಹದ್ದಿಯಲ್ಲಿ ಕಳ್ಳತನ ಮಾಡಿದ್ದು ಪತ್ತೆಯಾಗಿದೆ.
ಬೆಳಗಾವಿ ಪೋಲಿಸ್ ವರಿಷ್ಠಾಧಿಕಾರಿಗಳು ಹಾಗೂ ಹೆಚ್ಚುವರಿ ಎಸ್ಪಿ ಬೆಳಗಾವಿ ಹಾಗೂ ಡಿಎಸ್ಪಿ ಗೋಕಾಕರವರ ಮಾರ್ಗದರ್ಶನದಲ್ಲಿ ಹೆಚ್.ಡಿ ಮುಲ್ಲಾ ಪೊಲೀಸ್ ಇನ್ಸ್ಪೆಕ್ಟರ್, ಪಿಎಸ್ಐ ಗಳಾದ ಹೆಚ್.ಕೆ.ನರಳೆ, ಎಮ್.ಎಸ್.ವನಹಳ್ಳಿ ಪಿ.ಎಮ್.ಪಾಟೀಲ,ಆರ್.ಕೆ.ಹೊಳ್ಳರ.ಆರ್.ಆರ್.ಗಿಡ್ಡಪ್ಪಗೋಳ,ಬಿ.ಎಮ್.ತಳವಾರ,ಆರ್.ಕೆ.ಧುಮಾಳೆ,ಬಿ.ಎಸ್.ನಾಯಿಕ ಅವರು ಈ ಪ್ರಕರಣವನ್ನು ಭೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟಪ್ರಭಾ ಪೋಲಿಸರ ಈ ಪತ್ತೆಗೆ ಸಾರ್ವಜನಿಕರಿಂದ ಹಾಗೂ ಪೋಲಿಸ್ ವರಿಷ್ಠಾಧಿಕಾರಿಗಳಿಂದ ಪ್ರಶಂಸೆಯ ಮಹಾಪೂರವೇ ಹರಿದುಬಂದಿದೆ.