ರೋಣ: ಗಬ್ಬೆದ್ದು ನಾರುತ್ತಿರುವ ಜಕಲಿ ಗ್ರಾಮದ ಗಟಾರುಗಳು,
ಅಭಿವೃದ್ಧಿ ಅಧಿಕಾರಿ ಜನ ಪ್ರತಿನಿದಿಗಳಿಗೆ ಛೀಮಾರಿ ಹಾಕಿದ ದಲಿತ ಕೇರಿ ಜನರು..!
ಗದಗ ಜಿಲ್ಲೆ ರೋಣ ತಾಲೂಕಿನ ಜಕ್ಕಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ೫ ನೇ ವಾರ್ಡಿನ ದಲಿತ ಕಾಲೋನಿಯಲ್ಲಿ ಸುಮಾರು ತಿಂಗಳಿನಿಂದ ಚರಂಡಿ ಸ್ವಚ್ಛತೆ ಮಾಡದೆ, ಕೊಳಚೆ ನೀರು ತುಂಬಿ ಕ್ರಿಮಿ ಕೀಟಗಳು ಹೆಚ್ಚಾಗಿ ಅಲ್ಲಿ ವಾಸ ಮಾಡುವ ಜನರು ಮತ್ತು ಮಕ್ಕಳು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಸ್ಥಿತಿ ಬಂದೋದಿಗಿದ್ದರೂ ಸಹ ಸಂಬಂಧಪಟ್ಟ ಜಕ್ಕಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್. ಎಸ್ ರಿತ್ತಿ ಎಂಬ ಪಿಡಿಓ ಮಾತ್ರ ಕ್ಯಾರೆಯನ್ನುತ್ತಿಲ್ಲ.
ಗ್ರಾಮ ಪಂಚಾಯಿತಿ ಜನ ಪ್ರತಿನಿದಿಗಳಿಗು ಸಹ ಖುದ್ದಾಗಿ ಮಾಹಿತಿ ಕೊಟ್ಟರು ಏನು ಪ್ರಯೋಜನ ಆಗುತ್ತಿಲ್ಲ. ದೂರು ಕೊಟ್ಟು, ಮನವಿ ಮಾಡಿದರು ಚರಂಡಿ ಸ್ವಚ್ಛತೆ ಮಾಡಲು ಮುಂದಾಗದ ಅಧಿಕಾರಿಗಳು, ಇದು ನಮ್ಮ ದುರ್ದೈವವೇ ಸರಿ ಎಂದು ಅಲ್ಲಿನ ಗ್ರಾಮಸ್ಥರು ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿರುತ್ತಾರೆ.
ಬಾಕ್ಸ್…
ಗ್ರಾಮದ ಸ್ವಚ್ಛತೆಯ ಬಗ್ಗೆ ಅರಿವೇ ಇಲ್ಲದ ಪಿಡಿಓ ಎಸ್. ಎಸ್. ರಿತ್ತಿ ಹಾಗೂ ಜನ ಪ್ರತಿನಿದಿಗಳು ಈ ಸಮಸ್ಯೆ ಜಕ್ಕಲಿ ಗ್ರಾಮದ ಪ್ರತಿ ಒಂದು ವಾರ್ಡಿನ ಸಮಸ್ಯೆಯಾಗಿದೆ.
ಗ್ರಾಮ ಪಂಚಾಯಿತಿ ಜನ ಪ್ರತಿನಿದಿಗಳಿಗೆ ಬೇಕಾಗಿರಿವದು ಅಭಿವೃದ್ಧಿ ಅಲ್ಲ ಇವರಿಗೆ ಬೇಕಾಗಿರುವದು ಬರಿ ದುಡ್ಡು ಮಾಡುವದರ ಕಡೆ ಗಮನ ಇದೆ.
ಅಭಿವೃದ್ಧಿ ಮಾಡುವತ್ತ ಮನಸ್ಸು ಮಾಡುತ್ತಿಲ್ಲ ಎಂದು ಗ್ರಾಮಸ್ತರು ಹೋರಾಟಗಾರರದ ಅಂದಪ್ಪ ಮಾದರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
………….
ಆದ್ದರಿಂದ ಮೇಲಾಧಿಕಾರಿಗಳು ಈಗಲಾದರೂ ಎಚ್ಚೆತ್ತು, ಇಂತಹ ಬೇಜವಾಬ್ದಾರಿತನದ ಅಧಿಕಾರಿಗಳ ಮೇಲೆ ನಿರ್ಧಾಕ್ಷಣ್ಯ ಕ್ರಮ ಕೈಗೊಳ್ಳಬೇಕು. ದಲಿತ ಕಾಲೋನಿಯ ಜನತೆ ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವ ಮುನ್ನವೇ ಚೆಲ್ಲಾಡಳಿತ ಎಚ್ಚೆತ್ತು ತಕ್ಷಣ ದಲಿತ ಕೇರಿಯ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು ಎಂಬುದು ನಮ್ಮ ಟಿವಿ3 ಕನ್ನಡ ವಾಹಿನಿಯ ಆಶಾಯವಾಗಿದೆ. ಸ್ಥಳೀಯ ಮಾಹಿತಿಗಾರ ಅಂದಪ್ಪ ಮಾದರ