ಹೊರ ರಾಜ್ಯದಿಂದ ಬೆಂಗಳೂರಿಗೆ ನಾಯಿ ಮಾಂಸ (Dog Meat) ಸಾಗಾಟ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ಗೆ (Abdul Razak) ಯಾವುದೇ ನೋಟಿಸ್ ಕೊಟ್ಟಿಲ್ಲ ಎಂದು ಆಹಾರ ಇಲಾಖೆ ಆಯುಕ್ತ ಶ್ರೀನಿವಾಸ್ ಹೇಳಿದ್ದಾರೆ.
ಸದ್ಯ 12 ಜನರಿಗೆ ಮಾಂಸ ಮಾರಾಟದ ಲೈಸೆನ್ಸ್ (License) ಕೊಟ್ಟಿದ್ದೇವೆ. ಅವರನ್ನ ಭೇಟಿ ನೀಡಿ ಮಾಹಿತಿ ನೀಡುವುದಕ್ಕೆ ಹೇಳಿದ್ದೇವೆ. ಒಂದು ವೇಳೆ ಇಂದು ಆ 12 ಜನ ಹಾಜರಾಗದಿದ್ದರೆ ನೋಟಿಸ್ ಕೊಡುತ್ತೇವೆ. ವಿಚಾರಣೆಗೆ ಬಾರದಿದ್ದರೆ 12 ಜನರ ಲೈಸೆನ್ಸ್ ರದ್ದು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದೀಗ ಕಾಟನ್ಪೇಟೆ ಠಾಣೆ (Cottonpete Police Station) ಯಲ್ಲಿ ಪ್ರಜಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ 3 ಎಫ್ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಕ್ರಮವಾಗಿ ಮಾಂಸ ಮಾರಾಟದ ಬಗ್ಗೆ, ಗುಂಪುಗೂಡಿ ಗಲಾಟೆ ಮಾಡಿದ್ದ ಆರೊಪದಡಿ ಮತ್ತು ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಮೇಲೆ ಹಿಂದೂಪರ ಹೋರಾಟಗಾರ ಪುನೀತ್ ಕೆರೆಹಳ್ಳಿ (Punith Kerehalli) ಹಾಗೂ ಸಹಚರರ ವಿರುದ್ಧ ಮೂರನೇ ಎಫ್ಐಆರ್ (FIR) ದಾಖಲಾಗಿದೆ.
ಸದ್ಯ ಮೇಲ್ನೋಟಕ್ಕೆ ನಾಯಿ ಮಾಂಸ ಎಂದು ಕಂಡುಬಂದಿಲ್ಲ. ಹೀಗಾಗಿ ಸ್ಯಾಂಪಲ್ಗಳನ್ನ ಲ್ಯಾಬ್ (Lab)ಗೆ ಕಳಿಸಿದ್ದೇವೆ. ರಿಪೋರ್ಟ್ ಬಂದ ಮೇಲೆ ಖಂಡಿತ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಸಚಿವ ಈಶ್ವರ್ ಖಂಡ್ರೆ ಹೇಳಿದ್ದೇನು?
ನಾಯಿ ಮಾಂಸ ಮಾರಾಟ ವಿಚಾರವಾಗಿ ನಗರದಲ್ಲಿ ಸಚಿವ ಈಶ್ವರ್ ಖಂಡ್ರೆ (Eshwar Khandre) ಪ್ರತಿಕ್ರಿಯಿಸಿದ್ದು, ಇದರ ಬಗ್ಗೆ ಪೂರ್ಣ ಪ್ರಮಾಣದ ಮಾಹಿತಿ ಇಲ್ಲ. ಅಧಿಕಾರಿಗಳು ತನಿಖೆ ಮಾಡಬೇಕು ಎಂದು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.
ಬೆಂಗಳೂರಿ (Bengaluru)ನಲ್ಲಿ ನಾಯಿ ಮಾಂಸ ಮಾರಾಟ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ (Majestic Railway Station) ಬಳಿ ಇಳಿಸಿರುವ ಲೋಡ್ಗಟ್ಟಲೇ ಬಾಕ್ಸ್ನಲ್ಲಿ ಕುರಿ ಮಾಂಸದ ಜೊತೆ ನಾಯಿ ಮಾಂಸ ಮಿಕ್ಸ್ ಆಗಿದ್ದು, ಇದೇ ಮಾಂಸವನ್ನ ನಗರದ ಹೋಟೆಲ್ಗಳಿಗೆ ಪೂರೈಕೆ ಆಗ್ತಿದೆ ಅನ್ನೋ ಆರೋಪ ಕೇಳಿ ಬಂದಿತ್ತು.
ನಿನ್ನೆ ಜೈಪುರ (Jaipur)ದಿಂದ ಬಾಕ್ಸ್ಗಳನ್ನ ತಂದು ಇಳಿಸ್ತಿದ್ದಂತೆ ಪುನೀತ್ ಕೆರೆಹಳ್ಳಿ ತಂಡ ದಾಳಿ ಮಾಡಿತ್ತು. ಕುರಿ ಮಾಂಸ 700 ರಿಂದ 800 ರೂ. ಮಾರಾಟ ಆಗುತ್ತಿದೆ. ಆದರೆ ರಾಜಸ್ಥಾನದ ಮಾಂಸ ಕೇವಲ 500 ರೂಪಾಯಿಗೆ ಒಂದು ಕೆಜಿ ಮಾರಾಟ ಆಗ್ತಿದ್ದು ಇದು ಹಲವು ಅನುಮಾನಕ್ಕೆ ಕಾರಣವಾಗಿದೆ.