ಲೊಳಸುರ: ನಾಯಿಕವಾಡಿ ಧಾಬಾ ಅಕ್ರಮ ಮದ್ಯ ಮಾರಾಟ,ಸುದ್ದಿಗೆ ಹೆದರಿ ಕುಡುಕ ಮುಖಂಡರ ಮೊರೆ ಹೋದ ಕದಮ್,ಪತ್ರಕರ್ತ ನಿಗೆ ಶಾಸಕರ ಹೆಸರಲ್ಲಿ ಧಮ್ಕಿ…
ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಲೊಳಸುರದ ಮುಖ್ಯ ರಸ್ತೆ ಗೆ ಹೊಂದಿಕೊಂಡಿರುವ ಧಾಬಾವೊಂದರಲ್ಲಿ ಅಕ್ರಮವಾಗಿ ಸರಾಯಿ ಮಾರಾಟ ಬಲು ಜೋರು ನಡೆದ ಘಟನೆ ತಿಳಿದ ಪತ್ರಕರ್ತರು ದಾಬಾದ ವಿರುದ್ಧ ಕ್ರಮ ಕೈಗೊಳ್ಳಲು ಸುದ್ದಿ ಬಿತ್ತರಿಸಿತ್ತು. ಅದರ ಬೆನ್ನಲೆ ಪ್ರಕರಣ ದಾಖಲಾಗುತ್ತಿದ್ದಂತೆ ನೊಟಿಸ್ ಜಾರಿ ಮಾಡುವ ಮೂಲಕ ಕೊರ್ಟಗೆ ಬುಲಾವ್ ಬಂದದ್ದನ್ನ ನೊಡಿದ ಗಣಪತಿ ಕದಮ್ ನಿನ್ನೆ ತಡರಾತ್ರಿ ಸ್ಥಳಿಯ ಮುಖಂಡರ ಮೊರೆ ಹೋಗಿ ರಾತ್ರಿ ಹೊತ್ತು ಕಂಠ ಪೂರ್ತಿ ಕುಡಿದು ಸುದ್ದಿ ಮಾಡಿದ ಪತ್ರಕರ್ತರನಿಗೆ ಕರೆ ಮಾಡಿ ಸುದ್ದಿ ಯಾಕೆ ಮಾಡ್ತಿಯಾ ನಿನ್ನ ಬಿಡಲ್ಲ ಎಂದು ಕರೆ ಮೂಲಕ ಧಮ್ಕಿ ಹಾಕಿದ್ದ ಆಡಿಯೋ ವೈರಲ್ ಆಗುತ್ತಿದೆ.
ಇದು ಗೋಕಾಕ ತಮ್ಮಾ ನಿನ್ನ ನೊಡ್ತಿವಿ ಎಂದು ಶಾಸಕರ ಹೆಸರು ಹೆಳಿ ಧಮ್ಕಿ ಹಾಕುತ್ತಿದ್ದಾರೆ. ಇಂತಹ ಘಟನೆಗಳಿಗೆ ಶಾಸಕರು ಕ್ಯಾರೆ ಎನ್ನಲ್ಲ ಆದರೆ ಅವರಹೆಸರು ಹೇಳಿಕೊಂಡು ದುರ್ವರ್ತನೆ ಮಾಡುವದು ಸರಿಯಲ್ಲ ಎಂದು ಪತ್ರಕರ್ತರ ಹಾಗೂ ಸಮಾಜದ ನೈಜ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಣಪತಿ ಕದಂಬ ಎಂಬ ನಾಯಕವಾಡಿ ದಾಬಾ ಮಾಲೀಕನಿಂದ, ನಾಯಿಕವಾಡಿ ದಾಬಾದಲ್ಲಿ ಹಗಲು ರಾತ್ರಿ ಎನ್ನದೆ, ರಾಜಾ ರೋಷವಾಗಿ ಅಕ್ರಮ ಮಧ್ಯ ಮಾರಾಟ ನಡೆಯುತ್ತಿದೆ.
ಮಾನ್ಯ ಅಬಕಾರಿ ಸಚಿವರು ಕುಡ ಇತ್ತ ಕಡೆ ಗಮನ ಹರಿಸಬೇಕು.
ಗಣಪತಿ ಕದಮ ತನ್ನ ದಾಬಾ, ಬಾರ್ ಆಂಡ್ ರೆಸ್ಟೋರೆಂಟ್ ಮಾಡಿದ್ದಾನೆ.
ಇದಕ್ಕೆಲ್ಲ ಗೋಕಾಕ ಅಬಕಾರಿ ಇಲಾಖೆ ಯ ಅಧಿಕಾರಿಗಳು ಇವರು ಕೊಡೊ ಬಿಡಿಗಾಷಿಗೆ ಇವರ ಕೈಗೊಂಬೆಗಳಾದಂತೆ ಕಾಣಿಸುತ್ತಿದೆ.
ಅಷ್ಟಕ್ಕೂ ಗಣಪತಿ ಕದಮ ಎಂಬ ಈ ದಾಬಾ ಮಾಲಿಕ ಯಾರಿಗೂ ಗೊತ್ತಾಗದ ಹಾಗೆ ತನ್ನ ಚಾಣಾಕ್ಷ ಬುದ್ಧಿ ಉಪಯೋಗಿಸಿ ದಾಬಾದ ಹಿಂದಿನ ಬಾಜು ದಾಬಾದಿಂದಲೇ ಒಳಗಡೆಯಿಂದ ಸಣ್ಣ ಕಿಟಕಿಯ ಮುಖಾಂತರ, ಅಲ್ಲಿನ ಗ್ರಾಹಕರಿಗೆ ಯಾವ ಬ್ರ್ಯಾಂಡ್ ಬೇಕೊ ಅದೇ ಬ್ರಾಂಡ್ ತರಿಸಿಕೊಡುತ್ತಾನೆ.
ಯಾವುದೆ ಮಧ್ಯದ ಬಾಟಲ ತೆಗೆದುಕೊಂಡರು ಇವನು ದುಬಾರಿ ಹಣ ವಸೂಲಿ ಮಾಡಿ ಗ್ರಾಹಕರಿಗೆ ಮೋಸ ಮಾಡುತ್ತಾನೆ.
ಹಾಗಾದ್ರೆ ದುಬಾರಿ ಬೆಲೆಗೆ ಅಕ್ರಮ ಮಧ್ಯ ಮಾರುವುದನ್ನು ನೋಡಿದ್ರೆ, ಇಲ್ಲಿನ ಅಬಕಾರಿ ಮತ್ತು ಪೊಲೀಸ್ ಅಧಿಕಾರಿಗಳು ಈತನಿಗೆ ಸಾತ್ ಕೊಡುತ್ತಿದ್ದಾರಾ? ಎಂಬ ಪ್ರಶ್ನೆಯು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಈ ಹಿಂದೆ ಇದೇ ದಾಬಾದಲ್ಲಿ ಬೆನಚನಮರಡಿ ಅಜ್ಜ ಸಾರಾಯಿ ಮಾರಾಟ ಮಾಡುವಾಗ ಟಿವಿ3 ಕ್ಯಾಮರಾದ ಕಣ್ಣಿಗೆ ಬಿದ್ದು ಪೇಚಿಗೆ ಸಿಲುಕಿದ್ದ.
ಗೋಕಾಕನಲ್ಲಿ ಈ ರೀತಿ ಸಾಕಷ್ಟು ಕಾನೂನು ಬಾಹಿರ ಚಟುವಟಿಕೆಗಳು ನಡೆದರು ಕೂಡ ಕ್ಯಾರೆ ಎನ್ನುವುದಿಲ್ಲ.
ಅಂದ್ರೆ ಅಬಕಾರಿ ಇಲಾಖೆಯ ಅಧಿಕಾರಿಗಳು ಮತ್ತು ಪೋಲಿಸ್ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಮಾಡುವುದಿಲ್ಲ ಅಂದ್ರೆ ಏನರ್ಥ..? ಇಷ್ಟಕ್ಕೂ ಇಂತಹ ಅಧಿಕಾರಿಗಳೇ, ಕಾನೂನು ಬಾಹಿರ ಚಟುವಟಿಕೆಗಳಿಗೆ ಸಾತ್ ಕೊಡುತ್ತಿದ್ದಾರಾ ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕಾಡತೊಡಗಿದೆ.
ಪತ್ರಕರ್ತರಿಗೆ ಸಾಕಷ್ಟು ವಿಡಿಯೋ ಆಧಾರಿತ ಮಾಹಿತಿ ಇದೆ ಎಂದು ತಿಳಿದ ಗಣಪತಿ ಕದಮ ತನ್ನ ಬೆಂಬಲಿಗರ ಕಡೆಯಿಂದ ಪತ್ರಕರ್ತರಿಗೆ ಶಾಸಕರ ಹೆಸರು ಹೇಳಿ ಧಮ್ಕಿ ಹಾಕುತ್ತಿರುವುದು ಕಂಡು ಬಂದಿದೆ.
ಅದು ಏನೇ ಆಗಿರಲಿ ಸರಕಾರ ಮತ್ತು ಸಂಬಂಧ ಪಟ್ಟ ಮೇಲಾಧಿಕಾರಿಗಳು ಈ ಸುದ್ದಿಯನ್ನು ಗಮನಿಸಿ ತಕ್ಷಣ ಎಚ್ಚೆತ್ತು, ಇಂತಹ ಕಾನೂನು ಬಾಹಿರ ಚಟುವಟಿಕೆಗಳಿಗೆ ಬ್ರೇಕ್ ಹಾಕಬೇಕು ಮತ್ತು ದಾಬಾ ಮಾಲೀಕನನ್ನು ಮತ್ತು ಪತ್ರಕರ್ತರಿಗೆ ಧಮ್ಕಿ ಹಾಕುವ ಆತನ ಚೆಳಾಗಳಿಗೆ ಕಾನೂನು ಪಾಠ ಕಲಿಸಬೇಕಿದೆ.
ಕೆಲ ಕಿಡಿಗೇಡಿಗಳು ಶಾಸಕರ ಹೆಸರು ಹೇಳಿ ಪತ್ರಕರ್ತರಿಗೆ ಧಮ್ಕಿ ಹಾಕುತ್ತಿರುವ ಆಡಿಯೋ ಒಂದನ್ನು ಮುಂದಿನ ಸಂಚಿಕೆಯಲ್ಲಿ ಪ್ರಸಾರ ಮಾಡಲಾಗುವುದು….
ಜರ್ನಲಿಸ್ಟ್ಚ: ಚಂದ್ರು ತಳವಾರ