ಸ್ವಾರ್ಥಕ್ಕಾಗಿ ಸಂಘಟನೆ ಬೇಡ ಸಮಾಜದ ಒಳಿತಿಗಾಗಿ ಸಂಘಟನೆ ಬೇಕು ಡಾ|| ರವಿ ಬಿ ಕಾಂಬಳೆ
ಕರ್ನಾಟಕ ಭೀಮ್ ಸೇನೆ ಸಂಘಟನೆಗೆ ನೂತನವಾಗಿ
ಬೆಳಗಾವಿ , ಬಾಗಲಕೋಟೆ ಹಾಗೂ ದಾರವಾಡ ವಿಭಾಗೀಯ ಅಧ್ಯಕ್ಷರಾಗಿ ಆಯ್ಕೆಯಾದ
ಡಾ|| ರವಿ ಬಿ ಕಾಂಬಳೆ ಮತ್ತು ಬೆಳಗಾವಿ ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆಯಾದ ಬಿ. ವಿ ನ್ಯೂಸ್ ಹುಕ್ಕೇರಿ ತಾಲೂಕಾ ವರದಿಗಾರರು ಶಿವಾಜಿ ಬಾಳೇಶಗೊಳ ಇವರಿಗೆ ಇಂದು ಹುಕ್ಕೇರಿ ತಾಲೂಕ ಕರ್ನಾಟಕ ಭೀಮಸೇನೆ ವತಿಯಿಂದ ಸತ್ಕರಿಸಲಾಯಿತು.
ನಂತರ ಪದಾಧಿಕಾರಿಗಳನ್ನು ಕುರಿತು ಮಾತನಾಡಿದ ಡಾ|| ರವಿ ಬಿ ಕಾಂಬಳೆ
ಸಂಘಟನೆ ನಮ್ಮ ಸ್ವಾರ್ಥಕೋಸ್ಕರ ಆಗಬಾರದು ಸಮಾಜಕ್ಕಾಗಿ ಉಜ್ವಲಿಸಬೇಕು ಸಂಘಟನೆ ಸಮಾಜದ ಮೇಲೆ ಆಗುತ್ತಿರುವ ಅನ್ಯಾಯ ದಬ್ಬಾಳಿಕೆ ಮತ್ತು ಮೂಲ ಸೌಕರ್ಯಗಳಿಂದ ವಂಚಿತ ಆದಂತ ಘಟನೆಗಳನ್ನು ಎದುರಿಸಿ ಸಮಾಜಕ್ಕೆ ಒಂದು ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಾಗಿದೆ ಇಲ್ಲಿ ಕೇವಲ ಹುದ್ದೆಗಳಿಗಾಗಿ ನಾಯಕತ್ವಗಳಿಗಾಗಿ ಆಸೆ ಪಡದೆ ಸ್ವಚ್ಛ ಮನಸ್ಸಿನಿಂದ ನಿಷ್ಠೆ ಪ್ರಮಾಣಿಕವಾಗಿ ಕೆಲಸ ಮಾಡಬೇಕಾಗಿದೆ ಈಗಿನ ನಮ್ಮ ಯುವಕರಿಗೆ ಸರಿಯಾದ ಮಾರ್ಗದರ್ಶನ ಬೇಕಾಗಿದೆ ಇಲ್ಲಿ ಒಂದು ದುರದೃಷ್ಟಕರ ಸಂಗತಿ ಏನೆಂದರೆ ನಮ್ಮವರೇ ನಮ್ಮನ್ನು ತುಳಿದು ಬದುಕುವ ಪ್ರವೃತ್ತಿ ಮೊದಲಿನಿಂದಲೂ ಇದೆ ಈಗಲೂ ಕೂಡ ಇದೆ ನಮ್ಮವರು ಯಾರಾದರೂ ಒಬ್ಬ ವ್ಯಕ್ತಿ ಮುಂದೆ ಏಳಿಗೆ ಹೊಂದುತ್ತಿದ್ದಾನೆ ಎಂದರೆ ಸಾಕು ಹೇಗಾದರೂ ಮಾಡಿ ಆತನ ಹೆಸರಿಗೆ ಕಳಂಕ ಉಂಟು ಮಾಡಿ ಮೂಲೆಗುಂಪು ಮಾಡುವ ಚಾಣಾಕ್ಷ ನೀಚ ಬುದ್ಧಿಗಳನ್ನು ಹೊಂದಿರುತ್ತಾರೆ ಒಂದು ಒಳ್ಳೆಯ ಕೆಲಸ ಮಾಡಬೇಕು ಎಂದು ಬಯಸುವ ವ್ಯಕ್ತಿಗಳಿಗೆ ಅಡ್ಡಗಾಲ ಹಾಕುವುದು ಇದೇ ಪ್ರವೃತ್ತಿ ಮುಂದೆ ಸಾಗಿದರೆ ನಮ್ಮ ಸಮಾಜವನ್ನು ನಾವೇ ತುಳಿದು ಬದುಕುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಅದಕ್ಕಾಗಿ ಎಲ್ಲ ಪದಾಧಿಕಾರಿಗಳಿಗೆ ಈಗ ಹೇಳುವುದೇನೆಂದರೆ ಈ ಸಂಘಟನೆಯ ಬಲ ಕುಂಟಿಸಲು ಇಲ್ಲಸಲ್ಲದ ಆರೋಪಗಳನ್ನು ಮಾಡಲು ಇವತ್ತಿನಿಂದಲೇ ಪ್ರಾರಂಭವಾಗುತ್ತದೆ ನೋಡಿ ಯಾವುದಕ್ಕೆ ಕಿವಿಕೊಡದೆ ಧೈರ್ಯವಾಗಿ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಪದಾಧಿಕಾರಿಗಳಿಗೆ ಕಿವಿಮಾತು ಹೇಳಿದರು
ಈ ಸಂದರ್ಭದಲ್ಲಿ ಕರ್ನಾಟಕ ಭೀಮಸೇನೆ (ರಿ) ಹುಕ್ಕೇರಿ ತಾಲೂಕ ಸಂಘಟನೆ ತಾಲೂಕಾಧ್ಯಕ್ಷರಾದ ಪ್ರಜ್ವಲ್ ದಾನಪ್ಪಗೋಳ ಉಪಾಧ್ಯಕ್ಷರಾದ ಉಮೇಶ್ ಚಲವಾದಿ, ಸಂಘಟನಾ ಕಾರ್ಯದರ್ಶಿಯಾದ ಶೇಷಾದ್ರಿ ಟೋಳ್ಕೆ, ಅಮೀತ ಅಪ್ಪನವರ್.ಹಾಗೂ ಮಹಾಂತೇಶ ಬೇವಿನಕಟ್ಟಿ.ಸೈಯದ್ ತಶೀಲ್ದಾರ್, ನಾಗರಾಜ ಹಲಗೆ, ಜ್ಯೋತಿರ್ಲಿಂಗ ಮಾನೆ, ಪ್ರವೀಣ್ ಅವುಜಿ, ಅನಿಕೇತ ದಾದುಗೋಳ. ಕಾಡೇಶ್ ಖಾನಾಪುರೆ, ಮತ್ತಿತರು ಉಪಸ್ಥರಿದ್ದರು.