ಕರ್ನಾಟಕ ಭೀಮ ರಕ್ಷಕ ಸಂಘಟನೆಯ ನರ್ಸಿಂಗಪೂರ್ ಗ್ರಾಮ ಘಟಕ ವತಿಯಿಂದ ಡಾ.ಬಿ.ಆರ ಅಂಬೇಡ್ಕರರ 132ನೇಯ ಜಯಂತಿಯ ನೀಮೀತ್ಯ ಅಂಬೇಡ್ಕರ ಜಯಂತಿ ಕಾರ್ಯಕ್ರಮ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಕ್ಷೇತ್ರದಲ್ಲಿ ಬರುವ ನರಸಿಂಗಪುರ ಗ್ರಾಮದಲ್ಲಿ ಕರ್ನಾಟಕ ಭೀಮ ರಕ್ಷಕ ಸಂಘಟನೆಯ ಪದಾಧಿಕಾರಿಗಳ ನೇತ್ರತ್ವದಲ್ಲಿ ಅಂಬೇಡ್ಕರರ ಜಯಂತಿ ಕಾರ್ಯಕ್ರಮ ನಡೆಯಿತು ಯಾವದೇ ಜಾತಿ ದರ್ಮ ಬೇದ ಭಾವ ಅನ್ನದೇ ಎಲ್ಲರು ಭಾಗವಹಿಸಿ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ದೀಪ ಬೆಳಗಿಸುವ ಮೂಲಕ ಹಾಗೂ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಂಘದ ರಾಜ್ಯ ಅಧ್ಯಕ್ಷರಾದ ಡಾಕ್ಟರ್ ಈಶ್ವರ ಮಾರುತಿ ಗುಡಜ ಅವರು ಡಾ. ಅಂಬೇಡ್ಕರ್ ಅವರ ಜಯಂತಿ ನಮಗೆ ನಿಮಗೆ ಹಬ್ಬ ಇದ್ದ ಹಾಗೆ ಈ ಹಬ್ಬವನ್ನು ಇಡೀ ವಿಶ್ವದಂತೆ ಜನರು ಆಚರಣೆ ಮಾಡುತ್ತಿದ್ದಾರೆ ನಾವು ಅಂಬೇಡ್ಕರ್ ಜಯಂತಿ ಮಾಡುವ ಉದ್ದೇಶವೇನೆಂದರೆ ಅಂಬೇಡ್ಕರ್ ಅವರ ವಿಚಾರಗಳನ್ನು ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಎಲ್ಲಾ ಸಮಾಜದ ಜನರು ತಿಳಿದುಕೊಳ್ಳಬೇಕು ಹಾಗೂ ಅಂಬೇಡ್ಕರ್ ಅವರನ್ನು ಒಂದು ಜಾತಿಗೆ ಸೀಮಿತ ಮಾಡಬೇಡಿ ಅವರು ವಿಶ್ವದ ನಾಯಕ ಅವರು ಸಾಕಷ್ಟು ಕಷ್ಟಪಟ್ಟು ಭಾರತ ದೇಶಕ್ಕೆ ಸಂವಿಧಾನವನ್ನು ಕೊಟ್ಟಿದ್ದಾರೆ ಆದ್ದರಿಂದ ಎಲ್ಲರೂ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಮಹಾನಿಂಗ್ ಶಿರುಗುಪ್ಪಿ ಮನುಗುತ್ತಿ ಗ್ರಾಮ ಪಂಚಾಯತ್ ಸದಸ್ಯರು ಮಾತನಾಡಿ ಬಡವರ ಬಗ್ಗೆ ಕಾಳಜಿ ಹೊಂದಿ, ಜಾತ್ಯಾತೀತವಾಗಿ ಕಾರ್ಯನಿರ್ವಹಿಸಲು ಸಂಘಟನೆ ಎಲ್ಲಾ ಸಮಾಜದ ಜನರನ್ನು ಒಳಗೊಂಡು ಸಂಘಟನೆಯು ಸಿದ್ಧಾಂತದೊಂದಿಗೆ ಸರ್ವ ಜನಾಂಗಗಳ ಶಾಂತಿಯ ತೋಟ ರಸಿಕಳ ಕಂಗಳ ಸೆಳೆಯುವ ನೋಟ ಹಿಂದೂ ಕ್ರೈಸ್ತ ಮುಸಲ್ಮಾನ ಆರ್ಥಿಕ ಬಹುದ್ಧರ ನಾಡು ಎಂಬ ಸಿದ್ದಾಂತದೊಂದಿಗೆ ರಾಜ್ಯಾದ್ಯಂತ ಮೊಟ್ಟ ಮೊದಲನೆಯ ಬಾರಿಗೆ ಸಮಾಜದ ಏಳಿಗೆಗಾಗಿ ಸಂಘಟನೆಯನ್ನು ಕಟ್ಟಿ ರಾಜ್ಯದಾದ್ಯಂತ ಯುವಕರನ್ನು ಸೇರಿಸಿ ಒಗ್ಗಟ್ಟಿನಿಂದ ಕೆಲಸ ಮಾಡಿ ಬುದ್ದ ಬಸವ ಅಂಬೇಡ್ಕರರ ವಿಚಾರಗಾಗಿ ಕೆಲವೊಂದು ತರಬೇತಿಗಳು ಪ್ರಾರಂಭಿಸಿ ನಾವು ಸದಾ ನಿಮ್ಮೊಂದಿಗೆ ಇರ್ತೀವಿ ಎಂದು ಭರವಸೆ ನೀಡಿದರು.
ಮಹಾನಿಂಗ ಶಿರಗುಪ್ಪಿ ಮನಗುತ್ತಿ ಗ್ರಾಮ ಪಂಚಾಯತ್ ಸದಸ್ಯರು. ಸುರೇಶ್ ಮೇಕಳಿ. ಸದಾಶಿವ ದುರ್ಗಪುಗೋಳ. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಸುನಿತಾ ಕಾಂಬಳೆ . ಬಾಳೇಶ್ ಕಾಂಬಳೆ. ಕಂಪಣ್ಣ ಕಾಂಬಳೆ. ಸಂಜು ಕಾಂಬಳೆ. ದೇವರಾಜ್ ಕಾಂಬಳೆ ವಕೀಲರು. ಗಡದಿ ಬ್ರದರ್ಸ ಕೀರ್ತಿ.ಗುರು ಮಡಿವಾಳ. ಕಲ್ಲಪ್ಪ ಮಾಳದ. ಬ್ರಹ್ಮಾನಂದ ಪತ್ತಾರ. ಆನಂದ ಕುಂಬಾರ.
ಕರ್ನಾಟಕ ಭೀಮ ರಕ್ಷಕ ಸಂಘದ ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರು ಡಾ. ಈಶ್ವರ ಮಾ ಗುಡಜ. ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲಿಕ್ ನದಾಫ್.ಅಶೋಕ್ ಗಾಡಿವಡ್ಡರ್ ಬೆಳಗಾವಿ ಭಾಗಿಯ ಅಧ್ಯಕ್ಷರು.ವಿನೋದ ಗಸ್ತೇ. ರೇಹಮಾನ ಮೂಕಾಶಿ ಬೆಳಗಾವಿ ಜಿಲ್ಲಾ ಯುವ ಘಟಕದ ಉಪಾಧ್ಯಕ್ಷರು. ಹಾಗೂ ವೆಂಕಟೇಶ್ ಪಾಂಡ್ರೆ ಕಾರ್ಯದರ್ಶಿಗಳು. ಪರವಿನ ಭೋಜಗಾರ ಬೆಳಗಾವಿ ಸಂಚಾಲಕರು. ಕಾರ್ಯಕರ್ತರು ಹಿರಿಯರು ಹಾಜರಿದ್ದರು.


