ಚಿಕ್ಕೊಡಿ: ಸರಕಾರಿ ಆಸ್ಪತ್ರೆ ವೈದ್ಯರ ಎಡವಟ್ಟು….
ಬಟ್ಟೆ ಹತ್ತಿ ಹೊಟ್ಟೆಯಲ್ಲೆ ಬಿಟ್ಟು ಸ್ಟಿಚ್ ಹಾಕಿದ ವೈದ್ಯರು….
ಬೆಳಗಾವಿ ಜಿಲ್ಲೆಯ ಚಿಕ್ಕೊಡಿ ಪಠ್ಠಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಯಡವಟ್ಟು ಮಾಡಿದ ವೈದ್ಯರ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.
ಚಿಕ್ಕೊಡಿ ತಾಲೂಕಿನ ಮುಗಳಿ ಗ್ರಾಮದ ಶ್ರತಿ ರಾಜು ಬಡಿಗೇರ ಎಂಬ ಗರ್ಬಿಣಿ ಸ್ತ್ರೀ ಪೆಬ್ರವರಿ ೭ ನೇ ತಾರೀಖು ಹೆರಿಗೆಗೆಂದು ಚಿಕ್ಕೊಡಿ ಆಸ್ಪತ್ರೆಗೆ ಹೊದಾಗ ಅಲ್ಲಿರುವ ವೈದ್ಯರು ವ್ಯವಸ್ಥಿತವಾಗಿ ಹೆರಿಗೆ ಮಾಡಿ ಕೊನೆಯ ಕ್ಷಣದಲ್ಲಿ ಗರ್ಬಿಣಿ ಸ್ರ್ತೀ ಹೊಟ್ಟೆಯಲ್ಲಿ ಕಾಟನ್ ವೇಸ್ಟ ಹಾಗೂ ಬಟ್ಟೆ ಬಿಟ್ಟು ಹೊಲಿಗೆ ಹಾಕಿ ಸಲೀಸಾಗಿ ಮನೆಗೆ ಕಳಿಸಿದ್ದಾರೆ. ಆದರೆ ಕೆಲ ದಿನಗಳ ನಂತರ ಅಂದರೆ ೧೨ ದಿನಕ್ಕೆ ಹೊಟ್ಟೆ ನೊವೆಂದು ರಾತ್ರಿಯಿಡಿ ನಿದ್ದೆ ಮಾಡದೆ ತೊಂದರೆಗೊಳಗಾಗಿದ್ದಳು ಇದನ್ನು ನೊಡಿದ ಮನೆಯವರು ಸಮೀಪದ ಹುಕ್ಕೇರಿ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ದು ನಂತರ ವಿಚಾರ ತಿಳಿಸಿದಾಗ ಹುಕ್ಕೆರಿ ವೈದ್ಯರು ತಕ್ಷಣವೇ ಪರೀಶಿಲಿಸಿ ಹೊಟ್ಟೆಯೊಳಗಿನ ಬಟ್ಟೆ ಹಾಗೂ ಹತ್ತಿ ಗಂಟು ತೆಗೆದು ಶ್ರತಿ ಜೀವ ಉಳಿಸಿದ್ದಾರೆ. ಆದರೆ ತಪ್ಪಿತಸ್ಥ ವೈದ್ಯರ ಮೇಲೆ ಕಾನೂನಿನ ಕಠಿಣ ಕ್ರಮ ಕೈಗೊಳ್ಳಲು ಶ್ರತಿ ಗಂಡ ರಾಜು ಬಡಿಗೇರ ಮಾದ್ಯಮದವರಿಗೆ ತಿಳಿಸಿದ್ದಾರೆ. ನಾಚಿಕೆ ಇಲ್ಲದ ವೈದ್ಯರು ಹೊಟ್ಟೆಗೆನು ತಿನ್ನುತ್ತಾರೆ ಎಂದು ಸ್ಥಳಿಯ ಜನ ವೈದ್ಯರಿಗೆ ಹಿಡಿಶಾಪ ಹಾಕಿದ್ದಾರೆ. ಶ್ರತಿ ಮೂಲತಃ ಹುಕ್ಕೇರಿ ತಾಲೂಕಿನ ಶಿರಗಾಂವಿ ಗ್ರಾಮದವಳು ಇವಳನ್ನ ಮುಗಳಿ ಗ್ರಾಮದ ರಾಜು ಬಡಿಗೇರ ಅವರಿಗೆ ಮದುವೆ ಮಾಡಿಕೊಡಲಾಗಿದೆ.
ವೈದ್ಯರು (Doctor) ದೇವರಿಗೆ ಸಮಾನರು ಎಂಬ ಮಾತಿದೆ. ಪ್ರಾಣವನ್ನು ಉಳಿಸುತ್ತಾರೆ ಎಂಬ ನಂಬಿಕೆಯಿಂದ ವೈದ್ಯರನ್ನು ದೇವರಿಗೆ (God) ಹೋಲಿಸಲಾಗುತ್ತದೆ. ನಮ್ಮ ಜೀವವನ್ನೇ ನಾವು ವೈದ್ಯರ ಕೈಯ್ಲಲ್ಲಿಟ್ಟು ನಿಶ್ಚಿಂತೆಯಿಂದ ಶಸ್ತ್ರಕ್ರಿಯೆಯೋ ಇನ್ನಿತರ ಔಷಧೋಪಚಾರಗಳ ಸೇವನೆಯೋ ಮಾಡುತ್ತೇವೆ. ಆದರೆ ವೈದ್ಯರುಗಳು ಇಲ್ಲವೇ ಆಸ್ಪತ್ರೆಯ ಇತರ ಸಿಬ್ಬಂದಿಗಳ ಬೇಜಾವಬ್ದಾರಿಯಿಂದ ಅದೆಷ್ಟೋ ಜೀವಗಳು ಪ್ರಾಣ (Life) ಕಳೆದುಕೊಂಡಿರುವ ಇಲ್ಲವೇ ಅನಾರೋಗ್ಯ ಪೀಡಿತರಾಗಿರುವ ಸಾಕಷ್ಟು ಘಟನೆಗಳೂ ನಡೆದಿವೆ.
ಆದರೆ ಇಂತಹ ನೀಚ ಹೇಯ ಕ್ರತ್ಯ ಮಾಡಿದ ವೈದ್ಯರ ವಿರುದ್ಧ ಜಿಲ್ಲಾಡಳಿತ ಸೂಕ್ತ ಕಾನೂನಿನ ಕಠಿಣ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಜರ್ನಲಿಸ್ಟ್: ಚಂದ್ರು ತಳವಾರ