ಖಾನಾಪುರ: ಈ ಸ್ವತ್ತು ಒದಗಿಸಿ ಇಲ್ಲ ದಯಾಮರಣ ಕೊಡಿ ತಹಶಿಲ್ದಾರ ಕಛೇರಿ ಮುಂದೆ ಪ್ರಭುನಗರ ಗ್ರಾಮಸ್ಥರ ಪ್ರತಿಭಟನೆ.!
ಖಾನಪುರ:ತಾಲೂಕಿನ ನಿಟ್ಟೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರಭುನಗರದಲ್ಲಿ ಎಂಭತ್ತಕ್ಕೂ ಹೆಚ್ಚು ಕುಟುಂಬಗಳು ಸುಮಾರು ನಲವತ್ತು ವರ್ಷಗಳಿಂದ ಜೀವನ ಮಾಡುತ್ತಿವೆ ಅವಲ್ಲ ತಮ್ಮ ದಿನಗೂಲಿಯನ್ನೆ ನಂಬಿಕೊಂಡು ಬದುಕುತ್ತಿದ್ದ ಕುಟುಂಬಗಳು ತಮ್ಮ ದಿನದ ಕೂಲಿಯಲ್ಲೇ ಬರುವ ಅಲ್ಪಸ್ವಲ್ಪ ಹಣ ಉಳಿತಾಯ ಮಾಡಿ ಬದುಕಲು ಗೂಡು ಕಟ್ಟಿಕೊಂಡು ಜೀವನ ನಡೆಸುತ್ತಿರುವ ಬಡ ಕುಟುಂಬಗಳು ಆದರೆ ಅಧಿಕಾರಿಗಳ ತಪ್ಪಿನಿಂದ ಕಟ್ಟಿಕೊಂಡ ಗೂಡು ಪರರ ಪಾಲಾಗುವ ಪರಿಸ್ಥಿತಿ ಬಂದೊದಗಿದೆ ಎಂದು ಅರೋಪಿಸಿ ತಹಶಿಲ್ದಾರ ಕಛೇರಿ ಎದುರು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಕಾರ್ಯದರ್ಶಿಯಾದ ರಾಜಶೇಖರ ಹಿಂಡಲಗಿ ಪ್ರಭುನಗರ ಗ್ರಾಮದಲ್ಲಿ ಸುಮಾರು ಎಂಭತ್ತು ದಲಿತ ಕುಟುಂಬಗಳು ವಾಸವಿದ್ದು ಈ ಕುಟುಂಬಗಳು ಮೂಲತಃ ಹುಕ್ಕೇರಿ ತಾಲೂಕಿನ ಸಿದ್ಲಾಳ ಗ್ರಾಮದವರು ಆದರೆ 1994 ರಲ್ಲಿ ಆ ಗ್ರಾಮವನ್ನು ಮುಳುಗಡೆ ಎಂದು ಘೋಷಿಸಿ ಆ ಕುಟುಂಬಗಳಿಗೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಿಟ್ಟೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರಭುನಗರದಲ್ಲಿ ಪುನರ್ವಸತಿ ಕಲ್ಪಸಿಲಾಗತ್ತೆ ಅದರಂತೆ ಸರಕಾರ ತೋರಿಸಿದ ಜಾಗೆಯಲ್ಲೇ ಆ ಬಡಕುಂಬಗಳು ತಮ್ಮ ಕೂಲಿಯಲ್ಲಿ ಉಳಿದ ಅಲ್ಪಸ್ವಲ್ಪ ಹಣ ಕೂಡಿಸಿ ಮನೆ ಕಟ್ಟಕೊಂಡಿದ್ದರು ಆದರೆ ಈಗ ಆ ಮನೆಗಳು ಅನಧಿಕೃತ ಅಂತ ಅಧಿಕಾರಿಗಳು ಹೇಳಿದ್ದರಿಂದ ಆ ಬಡ ಕುಟುಂಬಗಳು ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದ್ದು ಕೂಡಲೇ ಜಿಲ್ಲಾಧಿಕಾರಿಗಳು ಈ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಆ ಕುಟುಂಬಗಳು ಅದೇ ಸ್ಥಳದಲ್ಲಿ ಸುಮಾರು ಮೂವತ್ತು ವರ್ಷಗಳಿಂದ ಅದೇ ಸ್ಥಳದಲ್ಲಿ ವಾಸಿಸುತ್ತಿದ್ದು ಆದರೆ ಅಧಿಕಾರಿಗಳ ತಪ್ಪಿನಿಂದ 2007 ರಲ್ಲಿ ಅನಧಿಕೃತವಾಗಿ ಖಾಸಗಿ ವ್ಯಕ್ತಿಯ ಹೆಸರಿಗೆ ವರ್ಗಾವಣೆಯಾಗಿದ್ದು ಇದರಲ್ಲಿ ಅಧಿಕಾರಿಗಳ ತಪ್ಪು ಎದ್ದು ಕಾಣುತ್ತಿದೆ.
ಅದಲ್ಲದೆ ಹದಿನೈದು ವರ್ಷಗಳ ನಂತರ ಮತ್ತೆ ಅದೇ ಜಮೀನನ್ನು ಅನಧಿಕೃತವಾಗಿ ಖಾನಾಪುರದ ಉಪನೊಂದನಾಧಿಕರಿಗಳು ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ಖಾಸಗಿಯವರಿಗೆ ತಾವು ಇರುವ ಜಮೀನನ್ನು ವರ್ಗಾವಣೆ ಮಾಡಿ ಕೊಟ್ಟಿದ್ದಾರ ಎಂದು ಡಿಎಸ್ಎಸ್ ತಾಲೂಕು ಅಧ್ಯಕ್ಷ ರಾಘವೇಂದ್ರ ಚಲವಾದಿ ಆರೋಪ ಮಾಡಿದರು
ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದ ಗ್ರಾಮಸ್ಥರು
ಇನ್ನೂ ಸಾಕಷ್ಟು ಬಾರಿ ಮನವಿ ಸಲ್ಲಿಸಿದರು ಅಧಿಕಾರಿಗಳು ಮಾತ್ರ ಯಾವುದಕ್ಕೂ ಸ್ಪಂದಿಸುತ್ತಿಲ್ಲ ಹೀಗಾಗಿ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರಲೇಬೆಕು ಎಂದು ಗ್ರಾಮಸ್ಥರು ಪಟ್ಟು ಹಿಡಿದು ಕುಳಿತರು ಖಾನಾಪುರ ಸಿಪಿಆಯ್ ಮನವೊಲಿಸುವ ಪ್ರಯತ್ನಿಸಿದರೂ ಕೇಳದ ಪ್ರತಿಭಟನಾಕಾರರು ಸ್ಥಳಕ್ಕೆ ಜಿಲ್ಲಾದಿಕಾರಿಗಳು ಬರಲೇಬೆಕು ಅದೆಷ್ಟೇ ದಿನವಾಗಲಿ ಎಂದು ಪಟ್ಟು ಹಿಡಿದು ಕುಳಿತರು
ಉಪವಿಭಾಗಾದಿಕಾರಿಗಳ ಮಧ್ಯಸ್ತಿಕೆಯಲ್ಲ ಪ್ರಕರಣ ಬಗೆ ಹರೆಸುವ ಆಶ್ವಾಸನೆ
ಇನ್ನೂ ಪ್ರತಿಭಟನಾಕಾರರ ಒತ್ತಾಯಕ್ಕೆ ಸ್ಥಳಕ್ಕಾಗಮಿಸಿದ ಬೆಳಗಾವಿ ಉಪವಿಭಾಗಾದಿಕಾರಿ ಬಲರಾಮ ಚೌವ್ಹಾಣ ಪ್ರತಿಭಟನಾಕಾರರ ಮನವೊಲಿಸುವಲ್ಲಿ ಯಶಸ್ವಿಯಾದರು ಪರಿಶೀಲಿಸಿ ಅನ್ಯಾಯಕ್ಕೊಳಗಾಗಿರುವ ಕುಟುಂಬಗಳಿಗೆ ನ್ಯಾಯ ಒದಗಿಸಿ ಕೊಡುವ ಭರವಸೆ ನೀಡಿದ ಮೇಲೆ ಪ್ರತಿಭಟನಾಕಾರರು ಪ್ರತಿಭಟನೆಯಿಂದ ಹಿಂದೆ ಸರಿದರು
ಅಸ್ವಸ್ತಗೊಂಡ ಪ್ರತಿಭಟನಾನಿರತೆ ವಯೋವೃದ್ದೆ ಅಂಬ್ಯುಲೆನ್ಸ ಮೂಲಕ ಆಸ್ಪತ್ರೆಗೆ ರವಾಣೆ
ಇನ್ನೂ ಬೆಳಗ್ಗೆ ಪ್ರಾರಂಭವಾಗಿದ್ದ ಪ್ರತಿಭಟನೆಯಲ್ಲಿ ಪ್ರಭುನಗರದ ವಯೋವೃದ್ದರು ಮಕ್ಕಳು ಸೇರಿದಂತೆ ಐವತ್ತಕ್ಕೂ ಹೆಚ್ಚು ಜನ ಸೇರಿದ್ದು ಪ್ರತಿಭಟನಾನಿರತ ಸ್ಥಳದಲ್ಲಿ ವಯೋವೃದ್ದೆಯೊಬ್ಬರು ಅಸ್ವಸ್ಥಗೊಂಡಿದ್ದು ಸ್ಥಳದಲ್ಲಿ ಇದ್ದ ತಾಲ್ಲೂಕಾ ಆಸ್ಪತ್ರೆ ಸಿಬ್ಬಂದಿಯ ಸಹಾಯದಿಂದ ವೃದ್ದೆಯನ್ನ ಆಸ್ಪತ್ರೆಗೆ ಸೇರಿಸಲಾಯಿತು
ಬಾಕ್ಸ್ ಪ್ರಭುನಗರ ಗ್ರಾಮದಲ್ಲಿ ಎಂಭತ್ತಕ್ಕೂ ಹೆಚ್ಚು ದಲಿತ ಕುಟುಂಬಗಳು ವಾಸವಾಗಿದ್ದು ಅದರಲ್ಲಿ ಎಲ್ಲವೂ ದಲಿತ ಕುಟುಂಬಗಳೇ ಆಗಿದ್ದು ಅಧಿಕಾರಿಗಳ ತಪ್ಪಿನಿಂದ ಕುಟುಂಬಗಳು ಮನೆ ಕಳೆದುಕೊಳ್ಳುವ ಭೀತಿಯಲ್ಲಿದ್ದು ಕೂಡಲೇ ಈ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವದು
ರಾಜಶೇಖರ ಹಿಂಡಲಗಿ (ಜಿಲ್ಲಾ ಕಾರ್ಯದರ್ಶಿ ಡಿಎಸ್ಎಸ್)
ಬಾಕ್ಸ್: ಮನವಿ ಸ್ವೀಕರಿಸಿದ್ದು ಪ್ರಕರಣ ಕೂಲಂಕುಶವಾಗಿ ಪರಿಶೀಲಿಸಿ ಅನ್ಯಾಯಕ್ಕೊಳಗಾಗಿರುವ ಕುಟುಂಬಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ
ಬಲರಾಮ ಚೌಹಾನ್ ಉಪ ವಿಭಾಗಾದಿಕಾರಿಗಳು
ವರದಿ: ಪ್ರಸನ್ನ ಕುಂಬಾರ