ದರೂರ:ನವರಾತ್ರಿ ನಿಮಿತ್ಯ ದುರ್ಗಾದೇವಿಗೆ ದಿನನಿತ್ಯ ಪೂಜೆ ಸಲ್ಲಿಸುತ್ತಿರುವ ದರೂರ ಮಹಿಳೆಯರು
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಮೀಪದ ದರೂರ ಗ್ರಾಮದಲ್ಲಿ ದಸರಾ ನವರಾತ್ರಿ ಹಬ್ಬದ ನಿಮಿತ್ಯ ದಿನನಿತ್ಯ ಬಣ್ಣ ಬಣ್ಣದ ಉಡುಪಗಳನ್ನ ಧರಿಸಿ ಶ್ರೀ ದುರ್ಗಾದೆವಿಗೆ ಹಾಗೂ ಬನ್ನಿ ಮರಕ್ಕೆ ದಿನನಿತ್ಯ ಪೂಜೆ ಸಲ್ಲಿಸಿ ದಸರಾ ಹಬ್ಬವನ್ನ ಅದ್ದೂರಿಯಾಗಿ ಆಚರಣೆ ಮಾಡುತ್ತಿರುವ ದ್ರಷ್ಯ,ಹಿಂದೂ ಹಬ್ಬವಾದ ದಸರಾ, ನವರಾತ್ರಿ ಮತ್ತು ವಿಜಯದಶಮಿಯು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಆಚರಿಸುವ ಹಬ್ಬವಾಗಿದೆ. ಹಿಂದೂ ದಂತಕಥೆಗಳಲ್ಲಿ ದೇವಿ ಚಾಮುಂಡೇಶ್ವರಿ (ದುರ್ಗಾ) ರಾಕ್ಷಸ ಮಹಿಷಾಸುರನನ್ನು ಕೊಂದದಿನವನ್ನಾಗಿ ಆಚರಿಸಲಾಗುತ್ತದೆ. ಮಹಿಷಾಸುರ ರಾಕ್ಷಸನಾಗಿದ್ದು, ದೇವಿಯು ಮಹಿಷಾಸುರನನ್ನು ವಧಿ ಸಿದ್ದರಿಂದ ನಗರಕ್ಕೆ ಮೈಸೂರು ಎಂದು ಹೆಸರು ಬಂದಿತು.ತಾಯಿ ದುರ್ಗಾದೇವಿ ದೇಶದ ಜನತೆಗೆ ಒಳ್ಳೆಯದನ್ನು ಮಾಡಲಿ ರೈತರ ಕಷ್ಟ ಕಾರ್ಪಣ್ಯಗಳನ್ನ ದೂರು ಮಾಡಲಿ ಯುವಕರಲ್ಲಿ ಒಳ್ಳೆಯ ಬುದ್ದಿ ಕೊಟ್ಟು ಸಮಾಜದ ಏಳಿಗೆಗೆ ಮುಂದಾಗಲಿ ಎಂದು ಆಶಾಭಾವನೆ ಇಟ್ಟುಕೊಂಡು ದೇವಿಗೆ ಪೂಜೆ ಸಲ್ಲಿಸುತ್ತಿದ್ದಾರೆ.ದರೂರ ಗ್ರಾಮದ ವಿಶ್ವಕರ್ಮ ಸಮಾಜದ ಮಹಿಳೆಯರು ದೇವಿಗೆ ಪೂಜೆ ಸಲ್ಲಿಸುತ್ತಿರುವದು ವಿಶೇಷವಾಗಿದೆ.ವರದಿ ಬ್ರಹ್ಮಾನಂದ ಪತ್ತಾರ.