ಮಂಟೂರ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಜಾರಿಗಾಗಿ ಕೂಲಿ ಕಾರ್ಮಿಕರ ಆಗ್ರಹ
ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಮಂಟೂರ ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಪರಿಣಾಮಕಾರಿ ಜಾರಿಗೆ ಆಗ್ರಹಿಸಲಾಯಿತು. ನಿನ್ನೆ ದಿನಾಂಕ ೧೨ ರಂದು ಮಂಟೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೂಲಿ ಕಾರ್ಮಿಕರು ಜಮಾಯಿಸಿ ಪಿಡಿಒ ವಿರುದ್ಧ ಧಿಕ್ಕಾರ ಕೂಗಿದರು.
ಕೂಲಿಕಾರ್ಮಿಕ ಹೆಣ್ಣು ಮಕ್ಕಳು ಮಾತನಾಡಿ, ಅರ್ಜಿ ಸಲ್ಲಿಸುತ್ತೇವೆ ಕೆಲಸ ಕೊಡಿ ಎಂದು ಗ್ರಾಮ ಪಂಚಾಯಿತಿಗೆ ನೂರಾರು ಮಂದಿ ಮನವಿ ಮಾಡಿದರು ಗ್ರಾಮ ಪಂಚಾಯಿತಿಯಿಂದ ಕೆಲಸ ನೀಡಲು ಮುಂದಾಗುತ್ತಿಲ್ಲ. ಹಾಗಾಗಿ ನಿರುದ್ಯೋಗ ಭತ್ಯಯಾದರೂ ನೀಡಬೇಕು ಎಂದು ಆಗ್ರಹಿಸಿದರು.
ಗ್ರಾಮದಲ್ಲಿ ಕೆಲಸವಿಲ್ಲದೆ ಸಮಸ್ಯೆ ಎದರುರಾಗಿದ್ದರಿಂದ ರೈತಾಪಿ ವರ್ಗ ಕಂಗಲಾಗಿದ್ದಾರೆ. ಒಂದೇ ಪಂಚಾಯಿತಿಯನ್ನು ಸರಿಯಾಗಿ ನಿಭಾಯಿಸದ ಪಿಡಿಒ ಕುಂತಿನಾಥ ಸೇರಗೊಂಡ ಈಗಾಗಲೇ, ಭ್ರಷ್ಟಾಚಾರದಲ್ಲಿ ಸಿಕ್ಕು ನರಳಾಡುತ್ತಿದ್ದಾನೆ.
ಆದರೂ ಕೂಡ ಇಂಥವರಿಗೆ ಎರಡೆರಡು ಗ್ರಾಮ ಪಂಚಾಯಿತಿ ಜವಾಬ್ದಾರಿ ನೀಡಿರುವುದು ಬಾರಿ ಸಂಶಯಕ್ಕೆ ಕಾರಣವಾಗಿದೆ.
ಸರ್ಕಾರ ತಕ್ಷಣವೇ ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸದಿದ್ದರೆ ಗ್ರಾಮದ ಪ್ರತಿಯೊಬ್ಬ ಕೂಲಿ ಕಾರ್ಮಿಕನಿಗೆ ಸಂಕಷ್ಟ ಹೆಚ್ಚಾಗಲಿದೆ. ಪ್ರತಿಯೊಂದು ಕುಟುಂಬಕ್ಕೂ ಅವರು ಬಯಸುವಷ್ಟು ದಿನ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಒದಗಿಸಬೇಕು ಎಂದು ಒತ್ತಾಯಿಸಿದರು.
ಮೂರು ತಿಂಗಳದಲ್ಲಿ ಎರಡು ತಿಂಗಳು ಕೆಲಸ ಮಾಡಿವ್ರೀ.. ಆದ್ರ ಇಲ್ಲಿತನ ಕೂಲಿ ಬಂದಿಲ್ಲರ್ರೀ… ಮೊದಲೇ ಬರದಿಂದ ಕೆಲಸ ಇಲ್ದಂಗ್ ಕುಂತಿವ್ರೀ…ಇದೀಗ ಖಾತರಿ ರೊಕ್ಕಾನೂ ಬರಲಿಲ್ಲ ಅಂದ್ರ ನಮಗ ಊರ ಬಿಡೋದು ಒಂದೇ ದಾರಿ ಉಳಿದೈತ್ರಿ…” ನಮಗೆ ಕೆಲಸ ಬೇಕು ಎಂದು ಪಟ್ಟು ಹಿಡಿದ ಕೂಲಿ ಕಾರ್ಮಿಕರು ಇದು ನರೇಗಾ ಕೂಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಬೆನ್ನಿಗೆ ನಿಂತ ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಅಜಿತ ಅವರ ಮಾತು. ಈಗಾಗಲೇ ಸಮರ್ಪಕ ಮಳೆ ಬಾರದ ಹಿನ್ನೆಲೆ, ಬರಗಾಲದ ಪರಿಸ್ಥಿತಿ ಇದ್ದು ಸಾಕಷ್ಟು ಜನ ಕೂಲಿ ಮಾಡೋದಕ್ಕೆ, ಬೆಳಗಾವಿ ಹಾಗೂ ನೆರೆ ರಾಜ್ಯ ಮಹಾರಾಷ್ಟ್ರಕ್ಕೆ ಗುಳೆ ಹೋಗುತ್ತಿರುವುದು ನೋವಿನ ಸಂಗತಿಯಾಗಿದೆ ಎಂದು ಅಲ್ಲಿ ಸೇರಿದ ಕೂಲಿ ಕಾರ್ಮಿಕರು ಟಿವಿ3 ಕನ್ನಡ ವಾಹಿನಿ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು. ಇಷ್ಟಕ್ಕೆಲ್ಲ ಗ್ರಾಮದಲ್ಲಿ ರಾಜಕಾರಣಿಗಳು ಹೊಂದಾಣಿಕೆ ಇಲ್ಲ.
ಅಭಿವೃದ್ಧಿ ಅಧಿಕಾರಿಯಂತು, ಪಂಚಾಯಿತಿಗೆ ಯಾವಾಗ ಬರುತ್ತಾರೋ ಯಾವಾಗ ಹೋಗುತ್ತಾರೋ ಗೊತ್ತಾಗುವುದೇ ಇಲ್ಲ ಎಂದು ಪಂಚಾಯಿತಿಗೆ ಶಾಪ ಹಾಕುತ್ತಾ ಪಂಚಾಯಿತಿಯ ವಿರುದ್ಧ ಅಲ್ಲಿ ನೆರೆದಿದ್ದ ಕೂಲಿ ಕಾರ್ಮಿಕರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಅದು ಏನೇ ಆಗಿರಲಿ ಸರ್ಕಾರ ಮತ್ತು ಸಂಬಂಧಿಸಿ ದ ಅಧಿಕಾರಿಗಳು ಅಭಿವೃದ್ಧಿಯ ಹಿತ ದೃಷ್ಟಿಯಿಂದ ಕೂಲಿ ಕಾರ್ಮಿಕರ ಬೆನ್ನಿಗೆ ನಿಲ್ಲಬೇಕೆಂಬುವುದು ನಮ್ಮ ಟಿವಿ3 ಕನ್ನಡ ಸುದ್ದಿ ವಾಹಿನಿಯ ಆಶಯವಾಗಿದೆ.
ಜರ್ನಲಿಸ್ಟ್: ಚಂದ್ರು ತಳವಾರ